ಗಂಗಾವತಿ: ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿರುವ ಪರೀಕ್ಷೆ ಭಯವನ್ನು ಶಿಕ್ಷಕರು ಹೋಗಲಾಡಿಸಬೇಕಿದ್ದು, ಶೇ.100 ಲಿತಾಂಶಕ್ಕಾಗಿ ಶ್ರಮವಹಿಸಬೇಕಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ನಗರದ ತಾಪಂ ಮಂಥನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಕಾಲೇಜು ಹಂತದ ಶಿಕ್ಷಣ ಪಡೆಯಲು ಎಸ್ಸೆಸ್ಸೆಲ್ಸಿ ಲಿತಾಂಶ ಮುಖ್ಯವಾಗಿದ್ದು, ಮಕ್ಕಳ ಕಲಿಕೆ ಮಟ್ಟ ಹೆಚ್ಚಿಸಬೇಕಿದೆ. ತಾಲೂಕು ಲಿತಾಂಶ ಪ್ರಮಾಣ ಗಮನಿಸಿದರೆ ಕಡಿಮೆಯಿದ್ದು, ಹೆಚ್ಚಿನ ಪ್ರಮಾಣಕ್ಕೆ ಶಿಕ್ಷಕರು ಶ್ರಮಿಸಬೇಕಿದೆ. ವರ್ಷದಿಂದಲೇ ಪರೀಕ್ಷೆ ಬರೆಯುವ ವಿಧಾನಗಳು, ಅಗತ್ಯ ಸಿದ್ಧತೆ, ವಿಷಯಗಳ ವಿಂಗಡಣೆ ಸೇರಿ ಪರೀಕ್ಷೆ ಸರಳೀಕರಣ ಪೂರಕ ಚಟುವವಟಿಕೆಗಳನ್ನು ಹಮ್ಮಿಕೊಳ್ಳಬೇಕಿದೆ. ಪರೀಕ್ಷೆ ಭಯದಿಂದ ಕೆಲ ವಿದ್ಯಾರ್ಥಿಗಳು ಉತ್ತರ ಗೊತ್ತಿದ್ದರೂ ತಪ್ಪು ಬರೆಯುತ್ತಿದ್ದಾರೆ. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸುವಂತೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ ಎಂದರು.
ಬಿಇಒ ಎಚ್.ಬಿ.ನಟೇಶ ಮಾತನಾಡಿ, ತಾಲೂಕಿನ 107 ಪ್ರೌಢಶಾಲೆಗಳ 8,028 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇತ್ತೀಚಿಗೆ ನಡೆಸಿದ ಪೂರ್ವಸಿದ್ಧತೆ ಪರೀಕ್ಷೆಯಲ್ಲಿ ಶೇ.81.25 ಲಿತಾಂಶ ಬಂದಿದೆ. ಕಳೆದ ವರ್ಷ ಶೇ.63 ಬಂದಿದ್ದು, ಈ ಬಾರಿ ಹೆಚ್ಚಾಗಲಿದೆ ಎಂದರು.
ನಗರಸಭೆ ಅಧ್ಯಕ್ಷ ಮೌಲಸಾಬ್‌ದಾದೇಸಾಬ್, ಉಪಾಧ್ಯಕ್ಷೆ ಪಾರ್ವತಮ್ಮ ದುರುಗೇಶ ದೊಡ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ವ್ಯವಸ್ಥಾಪಕ ಷಣ್ಮುಖಪ್ಪ ಹಾಗೂ ಶಿಕ್ಷಕರಿದ್ದರು.