ವಿಜಂಭಣೆಯಿಂದ ಜರುಗಿದ ಗಂಗಾವತಿಯ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಬ್ರಹ್ಮ ರಥೋತ್ಸವ

ಗಂಗಾವತಿ: ನಗರದ ಹಿರೇಜಂತಕಲ್ ಐತಿಹಾಸಿಕ ಪ್ರಸಿದ್ಧ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದ ಜಾತ್ರಾಮಹೋತ್ಸವ ನಿಮಿತ್ತ ಬ್ರಹ್ಮ ರಥೋತ್ಸವ ಮಂಗಳವಾರ ವಿಜಂಭಣೆಯಿಂದ ಜರುಗಿತು. ರಥೋತ್ಸವ ನಿಮಿತ್ತ ಕಳೆದ ಎರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಬೆಳಗ್ಗೆ ಮೂರ್ತಿಗೆ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಹೂವಿನ ಅಲಂಕಾರ ಮತ್ತು ರಥೋತ್ಸವಕ್ಕೆ ಪಟ ಏರಿಸುವುದು ಮತ್ತು ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *