ಫ್ರಾನ್ಸ್, ಸ್ವಿಟ್ಜರ್‌ಲ್ಯಾಂಡ್, ಇಂಗ್ಲೆಡ್ ಪ್ರಜೆಗಳ ಆರೋಗ್ಯ ಪರೀಕ್ಷೆ
ಗಂಗಾವತಿ: ತಾಲೂಕಿನ ಸಣಾಪುರದಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದ ನಾಲ್ವರು ವಿದೇಶಿಗರ ಆರೋಗ್ಯದ ಯೋಗ ಕ್ಷೇಮವನ್ನು ಗ್ರಾಮೀಣ ಪೊಲೀಸರು ಭಾನುವಾರ ರಾತ್ರಿ ವಿಚಾರಿಸಿದ್ದು, ವಿದೇಶಿಗರು ಆರೋಗ್ಯವಾಗಿದ್ದಾರೆ.
ಹಂಪಿ, ಆನೆಗೊಂದಿ ವೀಕ್ಷಣೆಗಾಗಿ ಮಾರ್ಚ್ ಮೊದಲ ವಾರದಲ್ಲಿ ಬಂದಿದ್ದ ಫ್ರಾನ್ಸ್ , ಸ್ವಿಟ್ಜರ್‌ಲ್ಯಾಂಡ್‌ನ ತಲಾ ಒಬ್ಬರು ಮತ್ತು ಇಂಗ್ಲೆಡ್‌ನ ಇಬ್ಬರು ವಿದೇಶಿ ಪ್ರಜೆಗಳು ಲಾಕ್‌ಡೌನ್ ೋಷಣೆಯಾಗಿದ್ದರಿಂದ ಸಣಾಪುರದ ಹೋಂ ಸ್ಟೇನಲ್ಲಿ ಆಶ್ರಯ ಪಡೆದಿದ್ದರು. ಇವರ ಮೇಲೆ ಜಿಲ್ಲಾಡಳಿತ ನಿಗಾವಹಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮೀಣ ಪಿಎಸೈ ದೊಡ್ಡಪ್ಪ ನೇತೃತ್ವದ ಪೊಲೀಸ್ ಮತ್ತು ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ನಾಲ್ವರ ಆರೋಗ್ಯ ತಪಾಸಿಸಿತು. ಈ ಬಗ್ಗೆ ಪಿಎಸೈ ದೊಡ್ಡಪ್ಪ ಮಾತನಾಡಿ, ಸರ್ಕಾರಕ್ಕೆ ಮಾಹಿತಿ ನೀಡಬೇಕಿದ್ದರಿಂದ ನಾಲ್ವರ ವಿದೇಶಿಗರನ್ನು ತಪಾಸಿಸಲಾಗಿದೆ. ಆವರು ಆರೋಗ್ಯವಾಗಿದ್ದಾರೆ ಎಂದರು.
ಕಾರ್ಯಪಡೆ ಸಭೆ: ತಾಲೂಕಿನ ಹೇರೂರು ಗ್ರಾಪಂ ಕಚೇರಿಯಲ್ಲಿ ಕರೊನಾ ಮುಂಜಾಗ್ರತೆ ಕ್ರಮಗಳ ಕುರಿತು ಟಾಸ್ಕ್ ೆರ್ಸ್ ಸಮಿತಿಯ ಸಭೆ ಜರುಗಿತು. ಜಿಪಂ ಸದಸ್ಯ ಅಮರೇಶ ಗೋನಾಳ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಲ್ಲಿವರೆಗೂ ಕೈಗೊಂಡಿರುವ ಜಾಗೃತಿಯ ಬಗ್ಗೆ ಚರ್ಚಿಸಲಾಯಿತು. ನೋಡಲ್ ಅಧಿಕಾರಿ ಆನಂದ ಪಾಟೀಲ್, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ಸದಸ್ಯ ಹನುಮೇಶಗೌಡ, ಕಾರ್ಯದರ್ಶಿ ರವಿಶಾಸಿ ಸೇರಿ ಅಂಗನವಾಡಿ, ಆಶಾಕಾರ್ಯಕರ್ತೆಯರು ಇದ್ದರು. ನಗರದ ಮುರಹರಿ ನಗರದಲ್ಲಿ ಹುಬ್ಬಳ್ಳಿಯಿಂದ ಬಂದಿದ್ದ ಕುಟುಂಬದ ಸದಸ್ಯರನ್ನು ಪೊಲೀಸರ ನೆರವಿನಿಂದ ನಿವಾಸಿಗಳು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಮೇ 3ರವರೆಗೂ ಲಾಕ್‌ಡೌನ್ ೋಷಣೆಯಾಗಿದೆ. ಆದರೂ ರಂಜಾನ್ ಉಪವಾಸದ ಸಂದರ್ಭ ನಗರದ ಸಿಬಿಎಸ್ ವೃತ್ತದ ಮಸೀದಿ ಬಳಿ ಜಮಾಯಿಸಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಭಾನುವಾರ ಸಂಜೆ ವೇಳೆಯ ಪ್ರಾರ್ಥನೆ ಪೂರ್ಣಗೊಳ್ಳುತ್ತಿದ್ದಂತೆ ಹಣ್ಣು, ಖರ್ಜೂರ ಖರೀದಿಸಲು ಜನ ಗುಂಪು ಕೂಡಿದ್ದರು. ಇದರಿಂದ ಗದ್ದಲ ಉಂಟಾಯಿತು. ನಗರ ಪಿಐ ವೆಂಕಟಸ್ವಾಮಿ ಅಗಮಿಸಿ ಗುಂಪು ಸೇರಿದ ಜನರಿಗೆ ತಿಳಿಹೇಳಿದರು. ನಂತರ ಕೆಲ ಪ್ರದೇಶಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿ ಮನೆಯಲ್ಲಿ ಪ್ರಾರ್ಥನೆ ಮತ್ತು ಉಪವಾಸ ವ್ರತ ಆಚರಿಸುವಂತೆ ಮನವಿ ಮಾಡಿದರು.