ಗಂಗಾವತಿ: ತಾಯಿಯ ಮಾತೃತ್ವ, ತ್ಯಾಗ, ಪ್ರೀತಿ ಮತ್ತು ಕಾಳಜಿ ಜಗತ್ತಿಗೆ ಮಾದರಿಯಾಗಿದ್ದು, ಯಾವುದಕ್ಕೂ ಹೋಲಿಸಲಾಗಲ್ಲ ಎಂದು ರೋಟರಿ ಕ್ಲಬ್ ತಾಲೂಕು ಅಧ್ಯಕ್ಷ ಟಿ.ಆಂಜನೇಯ ಹೇಳಿದರು.

ನಗರದ ಜಯನಗರದ ಸ್ವಾತಂತ್ರ್ಯ ಹೋರಾಟಗಾರ ದಿ.ವಿಠ್ಠಲ ಶೆಟ್ಟಿ ನಿವಾಸದಲ್ಲಿ ರೋಟರಿ ಕ್ಲಬ್ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವತಾಯಂದಿರ ದಿನಾಚರಣೆಯಲ್ಲಿ ಮಾತನಾಡಿದರು. ಅಮ್ಮ ಎನ್ನುವ ಎರಡು ಅಕ್ಷರಗಳಲ್ಲಿ ವಾತ್ಸಲ್ಯ, ಪ್ರೀತಿ ಇದೆ. ಮಮತೆಯ ಅನುಬಂಧ ಇದೆ. ತ್ಯಾಗದ ಪ್ರತಿರೂಪ ಇದೆ ಎಂದರು.
ಹಿರಿಯರಾದ ಶಕುಂತಲಮ್ಮ ವಿಠ್ಠಲಶೆಟ್ಟಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಮೊದಲ ರ‌್ಯಾಂಕ್ ಪಡೆದ ಎಚ್.ಆರ್. ಸರೋಜಮ್ಮ ಪ್ರೌಢ ಶಾಲೆ ವಿದ್ಯಾರ್ಥಿನಿ ಕೀರ್ತಿ ರಾಯ್ಕರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಕುರಿತು ಸಂಸ್ಥೆ ಮಾಜಿ ಪದಾಧಿಕಾರಿಗಳಾದ ದರೋಜಿ ಶ್ರೀರಂಗಶ್ರೇಷ್ಠಿ, ಸದಾನಂದ ಶೇಟ್, ಎ.ಜಗದೀಶ, ಎಂ.ಗುರುರಾಜ ಶ್ರೇಷ್ಠಿ, ಎಂಎನ್‌ಎಂ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಟಿ.ಸಿ.ಶಾಂತಪ್ಪ ಮಾತನಾಡಿದರು.
ಸಂಸ್ಥೆ ಪದಾಧಿಕಾರಿಗಳಾದ ಪ್ರಕಾಶಛೋಪ್ರಾ, ಶ್ರೀಧರನಾಯಕ್, ದಿಲೀಪ್ ಮೂಥಾ, ರಾಘವೇಂದ್ರ ರಾಯಚೂರ, ಸುರೇಶ ಸೋಲಂಕಿ ಇತರರಿದ್ದರು.