ಗಂಗಾವತಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಾಳು ಕುಟುಂಬಕ್ಕೆ ಸಕಾಲಕ್ಕೆ ಪರಿಹಾರ ನೀಡದಿದ್ದರಿಂದ ನಗರದ ಕೆಕೆಆರ್‌ಟಿಸಿ ಬಸ್ ಡಿಪೋದಲ್ಲಿ ಬಸನ್ನು ಮಂಗಳವಾರ ಜಪ್ತಿ ಮಾಡಲಾಯಿತು.
ಬಸ್ ಜಪ್ತಿಗೆ ಜೆಎಂಎ್ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದ್ದು, ಕಕ್ಷಿದಾರರ ವಕೀಲರು ಮತ್ತು ನ್ಯಾಯಾಲಯ ಸಿಬ್ಬಂದಿ ಸಮ್ಮುಖದಲ್ಲಿ ಕೊಪ್ಪಳ ಘಟಕದ ಬಸ್ ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಒಪ್ಪಿಸಲಾಯಿತು.
ಘಟನೆ ಹಿನ್ನೆಲೆ: 2018ರಲ್ಲಿ ತಾಲೂಕಿನ ಮರಳಿ ಮತ್ತು ಜಂಗಮರಕಲ್ಗುಡಿ ಮಧ್ಯದಲ್ಲಿ ಕೆಕೆಆರ್‌ಟಿಸಿ ಬಸ್ ಅಪಘಾತವಾಗಿದ್ದು, ಜಂಗಮರಕಲ್ಗುಡಿಯ ಸುರೇಶ ಬಸಪ್ಪ ಹೊಸೂರು ಮೃತಪಟ್ಟಿದ್ದರೆ, ನರಸಪ್ಪ ಮಂಗಳಾಪುರ, ಯಮನೂರಪ್ಪ ಬಾಲವಂಚಿ, ಹನುಮಂತ ಕಲ್ಗುಡಿ ಗಾಯಗೊಂಡಿದ್ದರು. ಪರಿಹಾರಕ್ಕಾಗಿ ಮೃತ ಮತ್ತು ಗಾಯಾಳು ಕುಟುಂಬ ಕೋರ್ಟ್ ಮೊರೆ ಹೋಗಿದ್ದರು. ಮೃತ ಕುಟುಂಬಕ್ಕೆ 45ಲಕ್ಷ ರೂ. ಮತ್ತು ಗಾಯಾಳುಗಳಿಗೆ 10ಲಕ್ಷ ರೂ. ನೀಡುವಂತೆ 2019ರಲ್ಲಿ ನ್ಯಾಯಾಲಯ ಆದೇಶಿಸಿತ್ತು. ಕೋರ್ಟ್ ಆದೇಶ ಪಾಲಿಸದಿದ್ದರಿಂದ ಬಸ್ ಜಪ್ತಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಕಕ್ಷಿದಾರ ವಕೀಲ ಎಂ.ಗೋವಿಂದ ಮಾತನಾಡಿ, ಸಕಾಲಕ್ಕೆ ಪರಿಹಾರ ನೀಡದಿದ್ದರಿಂದ ಬಸ್ ಜಪ್ತಿ ಮಾಡಲಾಗಿದ್ದು, ಪರಿಹಾರ ಪಾವತಿಸಿದ ನಂತರವೇ ಬಸ್ ಬಿಡುಗಡೆಗೆ ನ್ಯಾಯಾಲಯ ಕ್ರಮ ಕೈಗೊಳ್ಳಲಿದೆ ಎಂದರು.
ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ರಾಜಶೇಖರ್ ಪ್ರತಿಕ್ರಿಯಿಸಿ, ಕೋರ್ಟ್ ಆದೇಶ ಪಾಲಿಸಬೇಕಿದ್ದರಿಂದ ಸಿಬ್ಬಂದಿ ಸಮಕ್ಷಮದಲ್ಲಿ ಬಸ್ ಜಪ್ತಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ವಕೀಲೆ ಕವಿತಾ, ಕೋರ್ಟ್ ಸಿಬ್ಬಂದಿ ಉಸ್ಮಾನ್, ಸೈಯದ್ ಖಾದರ್, ವೆಂಕಟೇಶ, ಯೂಸ್ೂಮೀಯಾ ಇತರರಿದ್ದರು.