ಹಳೇ ಬಾಕಿ, ಹೊಸ ಕೆಲಸ ಕೊಡಿ

ಗಂಗಾವತಿ: ಹಳೇ ಬಾಕಿ, ಹೊಸ ಕೆಲಸಕ್ಕೆ ಒತ್ತಾಯಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘವು ನಗರದ ಜಿಪಂ ಇಂಜಿನಿಯರಿಂಗ್ ವಿಭಾಗದ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿತು. ಸಂಘದ ಅಧ್ಯಕ್ಷ ಶ್ರೀನಿವಾಸ ಹೊಸಳ್ಳಿ ಮಾತನಾಡಿ, ನಮೂನೆ 6 ಸಲ್ಲಿಸಿದ ಕೂಲಿಕಾರರಿಗೆ ಕೆಲಸ ನೀಡಬೇಕು. ತಾತ್ಸಾರ ಮಾಡಿದರೆ ಹಗಲು-ರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪದಾಧಿಕಾರಿಗಳಾದ ಮಂಜುನಾಥ ಡಗ್ಗಿ,ಮುತ್ತಣ್ಣ ದಾಸನಾಳ್, ಚಾಂದಬೀ, ದುರುಗಮ್ಮ, ಈರಮ್ಮ, ದೇವಮ್ಮ ಇತರರಿದ್ದರು.