ಗಂಗಾವತಿ ಪಂಪಾ ವಿರೂಪಾಕ್ಷೇಶ್ವರ ರಥೋತ್ಸವ ಫೆ.12ರಂದು

ಗಂಗಾವತಿ: ನಗರದ ಹಿರೇಜಂತಕಲ್‌ನ ಐತಿಹಾಸಿಕ ಪ್ರಸಿದ್ಧ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದ ಜಾತ್ರೆ ಪ್ರಯುಕ್ತ ಫೆ.12ರಂದು ರಥೋತ್ಸವ ಜರುಗಲಿದೆ. ಫೆ.9ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿವೆ. 35 ಅಡಿ ಎತ್ತರದ ಮರದ ತೇರು ಚಿತ್ತಾಕರ್ಷಕವಾಗಿದೆ. ಧಾರ್ಮಿಕ ದತ್ತಿ ಇಲಾಖೆಗೊಳಪಡುವ ದೇವಾಲಯದಲ್ಲಿ ಸಂಪ್ರದಾಯಬದ್ಧವಾದ ಪೂಜೆ ಕಾರ್ಯಕ್ರಮಗಳು ತಾಲೂಕಾಡಳಿತ ನೇತೃತೃತ್ವದಲ್ಲಿ ಜರುಗಲಿವೆ. ರಥೋತ್ಸವ ಪ್ರಯುಕ್ತ ದೇಗುಲದ ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ಬ್ರಹ್ಮೋತ್ಸವ, ಪಟಗಳ ಆರೋಹಣ, ಸಾಮೂಹಿಕ ಅನ್ನಸಂತರ್ಪಣೆ, ಸಂಜೆ ವೇಳೆ ಸರ್ವಾಲಂಕೃತ ಮಹಾರಥೋತ್ಸವ ಪಾದಗಟ್ಟೆಯವರಿಗೂ ಅದ್ದೂರಿಯಾಗಿ ನೆರವೇರಲಿದೆ ಎಂದು ತಹಸೀಲ್ದಾರ್ ವೀರೇಶ ಬಿರಾದಾರ್ ತಿಳಿಸಿದ್ದಾರೆ.