ಐಎಂಎದಿಂದ ಬೃಹತ್ ಪ್ರತಿಭಟನೆ

ವೈದ್ಯರ ಮೇಲಿನ ಹಲ್ಲೆಗೆ ಖಂಡನೆ ಎಲ್ಲ ರೀತಿಯ ಮೆಡಿಕಲ್ ಸೇವ್ ಬಂದ್

ಗಂಗಾವತಿ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಖಾಸಗಿ ಆಸ್ಪತ್ರೆ ವೈದ್ಯ ಅರ್ಜುನ ಹೊಸಳ್ಳಿ ಅವರ ಮೇಲೆ ಕೆಲವರು ಹಲ್ಲೆ ನಡೆಸಿದ್ದು, ಖಂಡನೀಯ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ, ಐಎಂಎ ಹಾಲ್‌ನಿಂದ ಗಾಂಧಿ ವೃತ್ತದವರೆಗೂ ಪ್ರತಿಭಟನೆ ರ‌್ಯಾಲಿ ನಡೆಸಿದರು. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವೈದ್ಯರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.

ನೇತೃತ್ವ ವಹಿಸಿದ್ದ ಐಎಂಎ ಅಧ್ಯಕ್ಷ ಡಾ.ಪಿ.ಶ್ರೀನಿವಾಸ ರೆಡ್ಡಿ ಮಾತನಾಡಿ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೂ ಸುಳ್ಳು ಆರೋಪ ಮಾಡಿ ವೈದ್ಯರ ಮೇಲೆ ಹಲ್ಲೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ಕರ್ತವ್ಯ ನಿರ್ವಹಿಸಲು ತೊಂದರೆಯಾಗಿದೆ. ವೈದ್ಯರಾರು ರೋಗಿಗಳನ್ನು ಸಾಯಿಸಲು ಯತ್ನಿಸುವುದಿಲ್ಲ. ಪ್ರಮಾಣಿಕತೆಯಿಂದ ಚಿಕಿತ್ಸೆ ನೀಡಿ, ಪ್ರಾಣ ಉಳಿಸಲು ಹೆಣಗುತ್ತಾರೆ. ಇಂಥದ್ದರಲ್ಲಿ ರೋಗಿಯ ಸಾವಿಗೆ ವೈದ್ಯರೇ ಹೊಣೆ ಎಂದು ವಾದಿಸಿ, ಹಲ್ಲೆ ಮಾಡುವುದು ಖಂಡನೀಯ. ಡಾ.ಅರ್ಜುನ ಹೊಸಳ್ಳಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಬೇಕು. ಅಲ್ಲಿಯವರೆಗೂ ವೈದ್ಯಕೀಯ ಸೇವೆ, ಲ್ಯಾಬ್, ಔಷಧೀಯ ವ್ಯಾಪಾರ ಸ್ಥಗಿತಗೊಳಿಸಲಾಗುವುದು ಎಂದರು.

ಸಂಘದ ಪದಾಧಿಕಾರಿಗಳಾದ ಡಾ.ಜಿ.ಚಂದ್ರಪ್ಪ, ಡಾ. ಎ.ಸೋಮರಾಜು, ಡಾ.ವಿ.ವಿ.ಚಿನಿವಾಲರ್, ಡಾ.ಕೆ.ಎನ್.ಮಧುಸೂಧನ್, ಡಾ.ಮಾಣಿಕಪ್ಪ, ಡಾ. ಮಲ್ಲನಗೌಡ, ಡಾ.ಅಮರೇಶ ಪಾಟೀಲ್, ಡಾ.ಸುಲೋಚನಾ ಚಿನಿವಾಲರ್, ಡಾ.ಎ.ಹನುಮಂತಪ್ಪ, ಡಾ.ಅನಂತರಾಜು ಗೋಗಿ, ಡಾ.ವೀಣಾಸತೀಶ, ಡಾ. ಸುಜಾತ, ಸುವರ್ಣ ಕರ್ನಾಟಕ ಔಷಧೀಯ ವ್ಯಾಪಾರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ ಸ್ವಾಮಿ ಹೇರೂರು, ಹನುಮರೆಡ್ಡಿ ಇತರರು ಇದ್ದರು. ವೈದ್ಯಕೀಯ ಸಂಘದೊಂದಿಗೆ ಸುವರ್ಣ ಕರ್ನಾಟಕ ಔಷಧೀಯ ವ್ಯಾಪಾರಿಗಳ ಸಂಘ, ಲ್ಯಾಬ್‌ಟೆಕ್ನಿಶಿಯನ್ಸ್, ಾರ್ಮಾಸಿಸ್ಟ್ಸ್ ಸೇರಿ ಇತರೆ ಸಂಘಟನೆಗಳ ಸದಸ್ಯರು ಇದ್ದರು.

Leave a Reply

Your email address will not be published. Required fields are marked *