More

    ಜುಲಾಯಿನಗರದಲ್ಲಿನ ಉಪ ಅಂಚೆ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

    ಗಂಗಾವತಿ: ಇಲ್ಲಿನ ಜುಲಾಯಿನಗರದಲ್ಲಿನ ಉಪ ಅಂಚೆ ಕಚೇರಿ ಸ್ಥಳಾಂತರ ವಿರೋಧಿಸಿ ಸುತ್ತಲಿನ ನಿವಾಸಿಗಳು ಅಂಚೆ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

    ನೇತೃತ್ವವಹಿಸಿದ್ದ ನಗರಸಭೆ ಸದಸ್ಯ ನೀಲಕಂಠಪ್ಪ ಕಟ್ಟಿಮನಿ ಮಾತನಾಡಿ, ಅಂಚೆ ಕಚೇರಿಯಲ್ಲಿ 3000ಕ್ಕೂ ಹೆಚ್ಚು ಖಾತೆಗಳಿದ್ದು,ಮಾಸಾಶನದ ಲಾನುಭವಿಗಳಿದ್ದಾರೆ. ವಿವಿಧ ಕಾಲೊನಿಗಳ ವೃದ್ಧರು ಮತ್ತು ಅಂಗವಿಕಲರಿಗೆ ಅನುಕೂಲವಾಗಿದೆ.

    ಆದರೆ, ಜ.16ರಿಂದ ಅನ್ವಯವಾಗುವಂತೆ ಮುಖ್ಯ ಅಂಚೆ ಕಚೇರಿಯಲ್ಲಿ ವಿಲೀನಗೊಳಿಸಲು ಸಂಬಂಧಪಟ್ಟ ಇಲಾಖೆಯಿಂದ ಆದೇಶ ಬಂದಿದೆ. ಉಪ ಅಂಚೆ ಕಚೇರಿ ಸ್ಥಳಾಂತರಿಸಿದರೆ ತೊಂದರೆಯಾಗುತ್ತಿದ್ದು, ಇದ್ದ ಸ್ಥಳದಲ್ಲಿ ಮುಂದುವರಿಸಬೇಕು. ಸ್ಥಳಾಂತರಿಸಿದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಕಳಕಪ್ಪ, ಶಿವಪ್ಪ, ನೀಲಮ್ಮ, ಗಂಗಮ್ಮ, ಶಂಕ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts