ಗಂಗಾವತಿ: ನಗರದ ಹಿರೇಜಂತಕಲ್ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಸವ ನೀಲಾಂಬಿಕೆ ಮಹಿಳಾ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಭಾನುವಾರ ಆಚರಿಸಲಾಯಿತು.
ನಗರಸಭೆ ಸದಸ್ಯೆ ಅರ್ಚನಾ ರಾಘವೇಂದ್ರ ಶಿರಿಗೇರಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಬೇಕಿದ್ದು, ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷೆ ರತ್ನಮ್ಮ ಅರೇಗಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ, ನಗರಸಭೆ ಸದಸ್ಯೆ ಅರ್ಚನಾ ರಾಘವೇಂದ್ರ ಶಿರಿಗೇರಿ, ವಿವಿಧ ಕ್ಷೇತ್ರದ ಸಾಧಕರಾದ ವಿಜಯಲಕ್ಷ್ಮಿ, ಲಲಿತಮ್ಮ ತಿಪ್ಪೇರುದ್ರಸ್ವಾಮಿ, ಗೌರಮ್ಮ ಕುಂಬಾರ, ಮಂಜುಳಾ ಹೊಸಪೇಟೆ, ಸಿಂಧು ಮತ್ತು ಶೋಭಾರನ್ನು ಗೌರವಿಸಲಾಯಿತು.
ಉಪಾಧ್ಯಕ್ಷೆ ಶೈಲಮ್ಮ, ಕಾರ್ಯದರ್ಶಿ ಸೌಭಾಗ್ಯ, ಸಹ ಕಾರ್ಯದರ್ಶಿ ಶರಣಮ್ಮ, ಖಜಾಂಚಿ ಗಂಗಮ್ಮ ಸೇರಿ ಪದಾಧಿಕಾರಿಗಳು ಮತ್ತು ಸದಸ್ಯರಿದ್ದರು.