ಗಂಗಾವತಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೈಜ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಸಿಪಿಐ(ಎಂಎಲ್) ಲಿಬರೇಷನ್ ರಾಜ್ಯ ಸ್ಥಾಯಿ ಸಮಿತಿ ಸದಸ್ಯ ಜೆ. ಭಾರದ್ವಾಜ್ ಹೇಳಿದರು.
ನಗರದ ರಾಯಚೂರು ರಸ್ತೆಯ ಆಟೋ ನಗರದ ಕ್ರಾಂತಿ ಕೇಂದ್ರದ ಕಚೇರಿಯಲ್ಲಿ ಬಹುತ್ವ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಸ್ವಾತಂತ್ರೃ ಸೇನಾನಿ ಭಗತ್‌ಸಿಂಗ್, ಸುಖದೇವ ಮತ್ತು ರಾಜಗುರು ಜಯಂತ್ಯುತ್ಸವದಲ್ಲಿ ಸೇನಾನಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಉಡುಪಿಯಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುತ್ತಿರುವ ಹಿಂದು ಪರ ಸಂಘಟನೆ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ಬಿ. ಅಲ್ತ್ಾ ಹುಸೇನ್, ಮರಿಸ್ವಾಮಿ ಬರಗೂರು, ಖಾನ್‌ಸಾಬ್, ಸಣ್ಣ ಹನುಮಂತಪ್ಪ ಹುಲಿಹೈದರ್, ವಸೀಮ್, ಅಬ್ದುಲ್ ಮತೀನ್, ಯಾಜ್ ಹುಸೇನ್, ವಿಜಯ್, ಮಂಜುನಾಥ, ಬಾಷಾ ಇತರರಿದ್ದರು.
ಎಐಡಿವೈಒ ತಾಲೂಕು ಘಟಕ:
ನಗರದ ನೆಹರು ಪಾರ್ಕ್ ಮುಂಭಾಗದಲ್ಲಿ ಎಐಡಿವೈಒ ತಾಲೂಕು ಘಟಕದಿಂದ ಭಗತ್ ಸಿಂಗ್ ಹುತಾತ್ಮ ದಿನ ಆಚರಿಸಲಾಯಿತು. ರಾಜ್ಯ ಸದಸ್ಯ ಶರಣು ಗಡ್ಡಿ ಮಾತನಾಡಿ, ಭಗತ್‌ಸಿಂಗ್ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು. ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಸದಸ್ಯರಾದ ಪ್ರಶಾಂತ ಗೂಳಪ್ಪ, ಮಹಾಂತೇಶ, ನಾಗರಾಜ್, ವಿದ್ಯಾರ್ಥಿಗಳಾದ ಐಶ್ವರ್ಯ, ಶಿವು, ರಮೇಶ, ತಿಪ್ಪೇಶ, ಗಣೇಶ ಇತರರಿದ್ದರು.