ಆಹ್ವಾನ ಬಂದಿಲ್ಲವೆನ್ನಬೇಡಿ ಎಲ್ಲರೂ ಬನ್ನಿ, ಶಾಸಕ ಗಾಲಿ ಜನಾರ್ದನರೆಡ್ಡಿ ಮನವಿ

Logo Release

ಗಂಗಾವತಿ: ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತಿದ್ದು, ಸಾಹಿತ್ಯಪೂರ್ಣ ವಾತಾವರಣ ನಿರ್ಮಿಸಲಾಗುವುದು ಎಂದು ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿ ಹೇಳಿದರು.

ನಗರದ ಕಸಾಪ ಭವನದಲ್ಲಿ ಕಸಾಪ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮತ್ತು ಕಚೇರಿ ಉದ್ಘಾಟಿಸಿ ಮತನಾಡಿದರು.

ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಿರ್ವಹಿಸಿದ ತಾಲೂಕಿನ ಸಾಹಿತ್ಯಸಕ್ತರು, ಜಿಲ್ಲಾ ಸಮ್ಮೇಳನವನ್ನು ಅದ್ದೂರಿಯಾಗಿ ನೆರವೇರಿಸಲಿದ್ದಾರೆ. ಇದುವರೆಗೂ ನಡೆದ ಸಾಹಿತ್ಯ ಪೂರಕ ಚಟುವಟಿಕೆಗಳು ವಿಲವಾದ ಉದಾಹರಣೆಗಳಿಲ್ಲ. ಭತ್ತದ ನಾಡಿಗೂ, ಸಾಹಿತ್ಯಕ್ಯೂ ಅವಿನಾಭಾವ ಸಂಬಂಧವಿದೆ.

ಮಾ.27 ಮತ್ತು 28ರಂದು ನಡೆವ ಸಮ್ಮೇಳನಾಧ್ಯಕ್ಷರನ್ನಾಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹಿರಿಯ ಸಾಹಿತ್ಯ ಸಾಧಕರನ್ನೇ ಆಯ್ಕೆ ಮಾಡಬೇಕಿದೆ. ನಾಡದೇವಿ ಭುವನೇಶ್ವರಿ ತಾಯಿ ಸೇವೆ ಎಂದು ಪ್ರತಿಯೊಬ್ಬರು ಭಾಗಿಯಾಗಬೇಕಿದ್ದು, ಆಹ್ವಾನ ಬಂದಿಲ್ಲ ಎಂದು ತಪ್ಪು ಭಾವಿಸಬಾರದು ಎಂದರು.

ಸಮ್ಮೇಳನದ ವೇದಿಕೆ, ಊಟ, ಮೆರವಣಿಗೆ, ಗೌರವ ಸನ್ಮಾನ ಸೇರಿ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗುವುದು ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕಿದ್ದು, ಕನ್ನಡ ಮನಸ್ಸುಗಳು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಮಾಜಿ ಸಂಸದ ಎಸ್. ಶಿವರಾಮನಗೌಡ, ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಉಪಾಧ್ಯಕ್ಷೆ ಪಾರ್ವತೆಮ್ಮ ದುರುಗೇಶ ದೊಡ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್, ಗೌರವ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಪದಾಧಿಕಾರಿಗಳಾದ ರಮೇಶ ಕುಲ್ಕರ್ಣಿ, ನಬೀಸಾಬ್, ಮಹೆಹಬೂಬ್, ಎಂ.ಜೆ.ಶ್ರೀನಿವಾಸ, ಸುರೇಶ ಕಲಾಪ್ರಿಯಾ, ಮೈಲಾರಪ್ಪ ಬೂದಿಹಾಳ, ಮಾರುತಿ ಐಲಿ, ಮಹೇಶ ಸಿಂಗನಾಳ, ಚಂದ್ರಶೇಖರ್ ಅಕ್ಕಿ, ಚನ್ನಬಸವ ಜೇಕಿನ್, ಟಿ. ಆಂಜನೇಯ, ವಿರೂಪಾಕ್ಷಿ ಶಿರವಾರ, ಪ್ರಸನ್ನ ದೇಸಾಯಿ ಇತರರಿದ್ದರು. ಇದಕ್ಕೂ ಮುನ್ನ ಸಮ್ಮೇಳನದ ಕಚೇರಿ ಉದ್ಘಾಟಿಸಲಾಯಿತು.

ಜಿಲ್ಲೆಯ ಚಿತ್ರಣ ಅನಾವರಣ: ಡಿಜಿಟಲ್ ಮೂಲಕ ಲಾಂಛನ ರಚಿಸಲಾಗಿದ್ದು, ಜಿಲ್ಲೆಯ ಐತಿಹಾಸಿಕ ಮತು ನೈಸರ್ಗಿಕ ತಾಣಗಳನ್ನು ಕಟ್ಟಿಕೊಡಲಾಗಿದೆ. ಭತ್ತದ ಪೈರಿದ್ದು, ಕೇಂದ್ರ ಸಾಹಿತ್ಯ ಪರಿಷತ್ತಿನ ಚಿಹ್ನೆ ಮೇಲೆ ಚಾಮರವಿದೆ. ನಾಡದೇವಿ ಭುವನೇಶ್ವರಿ, ನಾಡಬಾವುಟ, ಐತಿಹಾಸಿಕ ಅಂಜನಾದ್ರಿ ಬೆಟ್ಟ, ಇಟಗಿಯ ಮಹಾದೇವ ದೇಗುಲ, ಹಿರೇಬೆಣಕಲ್ಲಿನ ಮೋರೆರ್ ಬೆಟ್ಟ, ಪುರದ ಕೋಟಿ ಲಿಂಗೇಶ್ವರ, ಕನಕಗಿರಿ ಕನಕಾಚಲ, ಕೊಪ್ಪಳದ ಗವಿಮಠ, ಕುಮ್ಮಟದುರ್ಗದ ಗಂಡುಗಲಿ ಕುಮಾರಾಮನ ಕೋಟೆ, ಹನುಮಸಾಗರದ ಕಪಿಲತೀರ್ಥ ಜಲಪಾತ ಸೇರಿ ಜಿಲ್ಲೆಯ ಚಿತ್ರಣಗಳನ್ನೊಳಗೊಂಡಿದೆ.

ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಸಭೆ ಆಯೋಜಿಸಿ ಸಮ್ಮೇಳನಾಧ್ಯಕ್ಷರನ್ನು ಒಮ್ಮತದಿಂದ ಆಯ್ಕೆ ಮಾಡಲಾಗುವುದು. ಸಮ್ಮೇಳನ ಪೂರ್ಣಗೊಳ್ಳುವರೆಗೂ ಸಭೆ ಆಯೋಜಿಸಲಾಗುತ್ತಿದ್ದು, ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯ.
ಗಾಲಿ ಜನಾರ್ದನರೆಡ್ಡಿ, ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…