ಗಂಗಾವತಿ: ಒತ್ತುವರಿಯಾಗಿರುವ ಕೊಪ್ಪಳ ರಸ್ತೆಯ ಅಕ್ಟ್ರಾಯ್ ಗೇಟ್ ಕಟ್ಟಡ ತೆರವುಗೊಳಿಸುವಂತೆ ಒತ್ತಾಯಿಸಿ ತುಂಗಭದ್ರಾ ಲಾರಿ ಚಾಲಕರ ಮತ್ತು ಉಪಚಾಲಕರ ಸಂಘದ ತಾಲೂಕು ಸಮಿತಿ ಸದಸ್ಯರು ಸಿಐಟಿಯುನೊಂದಿಗೆ ನಗರಸಭೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ವ್ಯವಸ್ಥಾಪಕ ಷಣ್ಮುಖಪ್ಪಗೆ ಸಲ್ಲಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ನಗರದ ನಾಲ್ಕು ದಿಕ್ಕುಗಳಲ್ಲಿ ಟೋಲ್ ಮಾದರಿಯಲ್ಲಿ ಅಕ್ಟ್ರಾಯ್ ಗೇಟ್‌ಗಳಿದ್ದು, ನಗರಸಭೆಯಿಂದ ಸ್ವಂತ ಕಟ್ಟಡ ನಿರ್ಮಿಸಲಾಗಿತ್ತು. ಅಕ್ಟ್ರಾಯ್ ಪದ್ಧತಿ ರದ್ದುಗೊಂಡ ನಂತರ ಉದ್ದೇಶಿತ ಕಟ್ಟಡವನ್ನು ಚಾಲಕ, ಉಪಚಾಲಕರಿಗೆ ವಿಶ್ರಾಂತಿಗಾಗಿ ಮೀಸಲಿರಿಸಲಾಗಿತ್ತು.
ಕಟ್ಟಡವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು, ಕಬಳಿಸಲೆತ್ನಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಪರಿಶೀಲಿಸಿ, ಕಟ್ಟಡವನ್ನು ಚಾಲಕ, ಉಪಚಾಲಕರ ವಿಶ್ರಾಂತಿಗೆ ಮೀಸಲಿಡುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಮುತ್ತಣ್ಣ, ರಹೆಮಾನ್, ಮಹಾರಾಜ್, ಇಸಾಕ್ ಇತರರಿದ್ದರು.