More

  ಗಂಗಾಮತ ಸಮಾಜದಿಂದ ಗಂಗಾಪರಮೇಶ್ವರಿ ಜಯಂತುತ್ಸವ ಅದ್ದೂರಿ

  ಹೊಸಪೇಟೆ: ನಗರದಲ್ಲಿ ಗಂಗಾಮತ ಸಮಾಜದಿಂದ ಮಂಗಳವಾರ ಗಂಗಾಪರಮೇಶ್ವರಿ ಜಯಂತುತ್ಸವ ಅದ್ದೂರಿಯಾಗಿ ಆಚರಿಸಲಾಯಿತು.

  ಸಣ್ಣಕ್ಕಿ ವೀರಭದ್ರೇಶ್ವರ ಗುಡಿಯಿಂದ ಶ್ರೀ ಗಾಳೆಮ್ಮ ಶಂಕ್ರಮ್ಮ ದೇವಸ್ಥಾನದವರೆಗೆ ಗಂಗಾಮಾತೆಯ ಭಾವಚಿತ್ರದ ಮೆರವಣಿಗೆ ಡೊಳ್ಳು, ವಾದ್ಯ ತಂಡಗಳ ಮೂಲಕ ನಡೆಯಿತು. ಸಮಾಜದ ಮೂರು ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟರು. ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತೆ ಪಿ.ವರಲಕ್ಷ್ಮೀ ಭರತನಾಟ್ಯ ಪ್ರದರ್ಶಿಸಿದರು.

  ಇದನ್ನೂ ಓದಿ: ಶಿವರಾಜ ತಂಗಡಗಿಗೆ ಡಿಸಿಎಂ ಸ್ಥಾನ ನೀಡಲು ಗಂಗಾಮತ ಸಮಾಜ ಆಗ್ರಹ

  2022-23ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಕೆ.ಶ್ರೀನಿವಾಸ್, ಎಂ.ಗಾಳೆಮ್ಮ, ಮಹಾಲಕ್ಷ್ಮೀ ಹಾಗೂ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಪದ್ಮಾವತಿ, ಕೆ.ಪಿ.ಸಹನಾ, ಚಂದ್ರಶೇಖರ್‌ಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

  ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ವೈ.ಯಮುನೇಶ್, ನಗರ ಘಟಕದ ಅಧ್ಯಕ್ಷ ಎಸ್.ಗಾಳೆಪ್ಪ, ಉಪಾಧ್ಯಕ್ಷ ಮಡ್ಡಿ ಸಣ್ಣಕ್ಕೆಪ್ಪ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts