VIDEO: ಉತ್ತರಾಖಂಡದಲ್ಲಿ ಗಂಗಾ ನದಿ ಸ್ವಚ್ಛತೆ ಹಾಗೂ ಜಲಚರಗಳ ರಕ್ಷಣೆಗಾಗಿ ಗಂಗಾ ಪ್ರಹಾರಿಗಳ ನೇಮಕ: ಎನ್​ಎಂಸಿಜಿ

ನವದೆಹಲಿ: ಗಂಗಾ ನದಿಯ ಸ್ವಚ್ಛತೆ ಮತ್ತು ಜಲಚರಗಳ ರಕ್ಷಣೆಗಾಗಿ ತರಬೇತಿ ನೀಡಲ್ಪಟ್ಟ ಗಂಗಾ ಪ್ರಹಾರಿಗಳನ್ನು ನೇಮಿಸಲು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್​ನ (ಎನ್​ಎಂಸಿಜಿ) ಅಧಿಕಾರಿಗಳು ನಿರ್ಧರಿಸಿದ್ದಾರೆ.

ಎನ್​ಎಂಸಿಜಿಯ ಪ್ರಧಾನ ನಿರ್ದೇಶಕ ರಾಜೀವ್​ ರಂಜನ್​ ಮಿಶ್ರಾ ಈ ವಿಷಯ ತಿಳಿಸಿದ್ದಾರೆ. ಉತ್ತರಾಖಂಡದಲ್ಲಿ ಸ್ವಯಂಸೇವೆಯಲ್ಲಿ ತೊಡಗಿಕೊಂಡಿರುವ ಕೆಲವು ಯುವಕರಿಗೆ ನದಿ ನೀರಿನ ಸ್ವಚ್ಛತೆ ಕುರಿತು ಒಂದಷ್ಟು ತರಬೇತಿ ನೀಡಲಾಗಿದೆ. ಉತ್ತರಾಖಂಡದಲ್ಲಿ ಹರಿಯುವ ಗಂಗಾ ನದಿಯ ಸ್ವಚ್ಛತೆ ಕುರಿತು ಇವರೆಲ್ಲರೂ ನಿಗಾವಹಿಸಲಿದ್ದಾರೆ ಎಂದರು.

ಇವರೆಲ್ಲರೂ ನದಿಯಲ್ಲಿರುವ ಜಲಚರಗಳ ರಕ್ಷಣೆಯಲ್ಲೂ ತರಬೇತಿ ಪಡೆದಿರುತ್ತಾರೆ. ಜಲಚರಗಳು ಏನಾದರೂ ತೊಂದರೆಗೆ ಸಿಲುಕಿಕೊಂಡರೆ, ಅವುಗಳ ರಕ್ಷಣೆಗೂ ಇವರು ಮುಂದಾಗುತ್ತಾರೆ. ಅಲ್ಲದೆ, ನದಿಯನ್ನು ಕಲುಷಿತಗೊಳಿಸದಂತೆ ಹಾಗೂ ಅದರ ಸ್ವಚ್ಛತೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲವನ್ನೂ ಇವರು ಮಾಡಲಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರದ ಅತ್ಯಂತ ಪವಿತ್ರ ನದಿಗಳಲ್ಲಿ ಒಂದಾದ ಗಂಗಾ ನದಿಯ ನೀರು ಕುಡಿಯಲು ಇರಲಿ, ಸ್ನಾನಕ್ಕೆ ಬಳಸಲು ಯೋಗ್ಯವಾಗದಿರುವಷ್ಟು ಕಲುಷಿತಗೊಂಡಿದೆ. ಈ ನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆಯಾದರೂ ಅದು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎನ್​ಎಂಸಿಜಿ ಈ ಯೋಜನೆ ಕೈಗೊಂಡಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *