ಮೈಸೂರಲ್ಲಿ ಬೆಳ್ಳಂಬೆಳಗ್ಗೆ ಗ್ಯಾಂಗ್​ವಾರ್​: ಹಾಕಿಸ್ಟಿಕ್​, ಕ್ರಿಕೆಟ್​ ಬ್ಯಾಟ್​ ಹಿಡಿದು ಹಲ್ಲೆ ನಡೆಸಿದ ಪುಂಡರು

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಗ್ಯಾಂಗ್​ವಾರ್​ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹಾಕಿಸ್ಟಿಕ್​, ಕ್ರಿಕೆಟ್​ ಬ್ಯಾಟ್​, ಮಾರಕಾಸ್ತ್ರಗಳನ್ನು ಹಿಡಿದ ಪುಂಡರು ಆಟೋದಲ್ಲಿ ಕುಳಿತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಹಲ್ಲೆ ವಿಡಿಯೋ ವೈರಲ್​ ಆಗಿದ್ದು ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೇವರಾಜ ಮೊಹಲ್ಲಾದ ಯುವಕರಿಂದ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತವಾಗಿದೆ.