18 C
Bangalore
Friday, December 6, 2019

ಬ್ಯಾಂಕ್ ಅಧಿಕಾರಿಗೊಲಿದ ಮೂರ್ತಿ ರಚನಾ ಕೌಶಲ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ರತ್ನಾಕರ ಸುಬ್ರಹ್ಮಣ್ಯ
ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿರುವ ಕೃಷ್ಣಪ್ರಸಾದ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೃಣ್ಮಯ ಗಣಪನ ಮೂರ್ತಿಗಳನ್ನು ರಚಿಸುವ ಮೂಲಕ ಮನೆಮಾತಾಗಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದ ಕೃಷ್ಣಪ್ರಸಾದ್ 19 ವರ್ಷಗಳಿಂದ ದೇನಾ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಬ್ಯಾಂಕ್‌ನ ಚಿಕ್ಕಮಗಳೂರು ಶಾಖೆ ಪ್ರಬಂಧಕರು. ಎಳವೆಯಲ್ಲಿ ತಂದೆ ಪದ್ಮನಾಭ ಭಟ್, ಸಹೋದರ ವಾಸುದೇವ ಭಟ್ ಒಡಗೂಡಿ ಗಣಪತಿ ಮೂರ್ತಿ ರಚಿಸುತ್ತಿದ್ದರು. ಬಳಿಕ ಕುಕ್ಕೆ ದೇವಳದಲ್ಲಿ ಗಣಪನ ವಿಗ್ರಹ ರಚಿಸುತ್ತಿದ್ದ ಗೋಪಿ ಕಿಟ್ಟಣ್ಣ ಗರಡಿಯಲ್ಲಿ ರಚನೆ ಕೌಶಲ ಕರಗತ ಮಾಡಿಕೊಂಡರು. ಕೃಷ್ಣ ಅವರ ಮೂರ್ತಿ ರಚನಾ ಕಾರ್ಯಕ್ಕೆ ಸಹೋದರ ವಾಸುದೇವ ಭಟ್ ಸಾಥ್ ನೀಡುತ್ತಿದ್ದಾರೆ.

ಸುಬ್ರಹ್ಮಣ್ಯದಲ್ಲಿ 30 ವರ್ಷಗಳಿಂದ ಗಣಪನ ಮೂರ್ತಿ ತಯಾರಿಸುತ್ತಿದ್ದಾರೆ. 30 ವರ್ಷದಿಂದ ಕುಕ್ಕೆ ಸಾರ್ವಜನಿಕ ಗಣೇಶೋತ್ಸವ, ಸಂಪುಟ ನರಸಿಂಹ ಸ್ವಾಮಿ ಮಠ, ವಳಲಂಬೆ, ಗುತ್ತಿಗಾರು, ಹರಿಹರ ಸಾರ್ವಜನಿಕ ಗಣೇಶೋತ್ಸವಗಳಿಗೆ ಉಚಿತವಾಗಿ ಮೂರ್ತಿ ಒದಗಿಸಿದ್ದಾರೆ. ಬಣ್ಣ ರಹಿತ ಮಡಿ ಗಣಪತಿ ರಚಿಸಿರುವುದು ವಿಶೇಷ. ಗಣಪತಿ ಮೂರ್ತಿ ರಚನೆಗೆ ಸಂಭಾವನೆ ಪಡೆಯದೇ ಸೇವಾ ಮನೋಭಾವದಿಂದ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಪೈಂಟ್‌ಗೆ ತಗಲುವ ಮೊತ್ತವನ್ನು ಮಾತ್ರ ಕಾಣಿಕೆ ರೂಪದಲ್ಲಿ ಪಡೆಯುತಿದ್ದಾರೆ.

ಮಣ್ಣಿನಲ್ಲಿ ಕಲಾತ್ಮಕತೆ ಸೃಷ್ಟಿ: ಪೇಪರ್ ಬಳಸದೆ ಮಣ್ಣಿನ ಟೊಳ್ಳಾದ ಆಕೃತಿ ರಚಿಸಿ ವಿಗ್ರಹಕ್ಕೆ ಮೂರ್ತ ರೂಪ ನೀಡುತ್ತಾರೆ. ಚೆನ್ನೈನಲ್ಲಿ ಬ್ಯಾಂಕ್ ಕರ್ತವ್ಯದಲ್ಲಿದ್ದಾಗ ಒಂದು ತಿಂಗಳು ರಜೆ ಮಾಡಿ ಮೂರ್ತಿ ರಚನೆ ಮಾಡಿದ್ದರು. ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಶನಿವಾರ, ಭಾನುವಾರ, ರಜಾದಿನ, ಅಂತಿಮ ದಿನಗಳಲ್ಲಿ ಉದ್ಯೋಗಕ್ಕೆ ರಜೆ ಮಾಡಿ ಬರುತ್ತಿದ್ದಾರೆ.

ಗರಿಕೆ ಹುಲ್ಲಿನ ಪೈಂಟ್: ಪರಿಸರಕ್ಕೆ ಮಾರಕ ಎಂದು ಮೂರ್ತಿಗೆ ಈ ಬಾರಿ ರಾಸಾಯನಿಕ ಪೇಂಟ್ ಬಳಕೆ ನಿಲ್ಲಿಸಿದ್ದಾರೆ. ಗರಿಕೆ ಹುಲ್ಲಿನಿಂದ ತಯಾರಿಸಿದ ಪರಿಸರ ಸ್ನೇಹಿ ಬಣ್ಣ ಹಚ್ಚಲಿದ್ದಾರೆ. ಪ್ರಥಮ ಬಾರಿ ಈ ರೀತಿಯ ಬಣ್ಣ ಬಳಸುವುದರಿಂದ ಗಜಮುಖನ ಅಂದಕ್ಕೆ ತೊಡಕಾಗುವ ಭಯ ಇದ್ದರೂ ಪರಿಸರದ ಸೌಖ್ಯಕ್ಕಾಗಿ ಪ್ರಯೋಗ ಮಾಡಲಿದ್ದಾರೆ. ಅವರ ಇಂಜಿನಿಯರ್ ಸ್ನೇಹಿತ ಸುದರ್ಶನ್ ಆಚಾರ್ ಬಣ್ಣ ತಯಾರಿಕೆ ಜವಾಬ್ದಾರಿ ಹೊತ್ತಿದ್ದಾರೆ.

ಮೂರು ದಶಕಗಳಿಂದ ವಿಘ್ನವಿನಾಶಕ ವಿನಾಯಕನ ಮೂರ್ತಿ ರಚಿಸುತ್ತಿರುವ ಕೃಷ್ಣ ಪ್ರಸಾದ್ ಉತ್ತಮ ಕಲಾವಿದ. ಅವರ ಮೂರ್ತಿ ರಚನೆ ಭಕ್ತಿಗೆ ಪೂರಕವಾಗಿ ಪರಿಸರ ಸ್ನೇಹಿಯಾಗಿ ಮೂಡಿ ಬಂದಿದೆ. ಅಧಿಕಾರಿಯಾಗಿ ಹವ್ಯಾಸ ಮೂಲಕ ಭಗವಂತನಿಗೆ ಸಲ್ಲಿಕೆಯಾಗುವ ಸೇವೆ ಭಗವಂತನಿಗೆ ಪ್ರಿಯ.
ಕೆ.ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ ಕಲಾವಿದ

ಗಣಪ ಮೂರ್ತಿ ರಚನೆ ಹವ್ಯಾಸವಾಗಿದ್ದು, ಇದರೊಂದಿಗೆ ಸೇವಾ ಉದ್ದೇಶವಿದೆ. ಪರಿಸರ ಸ್ನೇಹಿ ಗಣಪನನ್ನು ಹಲವು ವರ್ಷಗಳಿಂದ ರಚಿಸುತ್ತಿದ್ದೇನೆ. ಈ ವರ್ಷ ರಾಸಾಯನಿಕ ರಹಿತವಾದ ಗರಿಕೆ ಪೈಂಟ್(ಬಣ್ಣ)ವನ್ನು ಬಳಸುವ ಮೂಲಕ ಪರಿಸರಕ್ಕೆ ಪೂರಕ ಕ್ರಮ ವಹಿಸಿದ್ದೇನೆ. ಹುಟ್ಟೂರಲ್ಲಿ ನನಗೆ ಈ ಅವಕಾಶ ದೊರಕುತ್ತಿರುವುದು ಸಂತಸ, ಭಗವಂತನ ಆಶೀರ್ವಾದ.
ಕೃಷ್ಣಪ್ರಸಾದ್ ಕಲಾವಿದರು

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...