More

    Ganesh Chaturthi: ಗಣೇಶ ಹಬ್ಬದ ವಿಶೇಷ ರೆಸಿಪಿ ಕಡಲೆಬೇಳೆ ಹೋಳಿಗೆ…

    ಯಾವುದೇ ಶುಭ ಕಾರ್ಯಕ್ಕೆ ಮೊದಲು ಗಣೇಶನಿಗೆ ಪೂಜೆ ಮಾಡುವುದು ವಾಡಿಕೆ. ಅದೇ ಗಣೇಶನ ಹಬ್ಬ ಬಂದ್ರೆ ಸಾಕು ಮನೆಯಲ್ಲಿ ಗಣೇಶನನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಬ್ಬದಂದು ಸಿದ್ಧಿವಿನಾಯಕನಿಗೆ ಇಷ್ಟವಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ರೂಪದಲ್ಲಿ ಇಡುತ್ತಾರೆ. ಗಣಪತಿಗೆ ಹೆಚ್ಚಾಗಿ ಸಿಹಿ ತಿಂಡಿಗಳನ್ನೇ ಇಷ್ಟಪಡುವುದರಿಂದ ಗಜಾನನಿಗೆ ನೈವೆದ್ಯಕ್ಕೆ ಇಡುವ ಒಬ್ಬಟ್ಟನ್ನು ಯಾವ ರೀತಿ ತಯಾರಿಸಬಹುದೆಂದು ತಿಳಿಯೋಣ ಬನ್ನಿ…

    ಬೇಕಾಗುವ ಸಾಮಾಗ್ರಿಗಳು:

    ಕಡಲೆಬೇಳೆ – 1 ಲೋಟ ( 2 – 3 ಘಂಟೆ ನೆನೆಸಿಕೊಳ್ಳಿ)
    ಬೆಲ್ಲ  – 1 ಕಪ್​
    ಉಪ್ಪು – ಸ್ವಲ್ಪ
    ಅರಿಶಿನ – ಅರ್ಧ ಮಚ
    ಮೈದಾಹಿಟ್ಟು – 1 ಕಪ್
    ಏಲಕ್ಕಿ ಪುಡಿ – 1 ಚಮಚ
    ಅಡುಗೆಎಣ್ಣೆ – ಅರ್ಧ ಕಪ್​ ಟೇಬಲ್ ಚಮಚ
    ನೀರು – ಸ್ವಲ್ಪ
    ತುಪ್ಪ- ಅರ್ಧ ಕಫ್​

    ಮಾಡುವ ವಿಧಾನ:
    * ಮೊದಲಿಗೆ ಒಂದು ಕುಕ್ಕರ್​ಗೆ ನೆನೆಸಿದ ಕಡ್ಲೆಬೇಳೆಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಂಡು ತಣ್ಣಗಾದ ನಂತರ ಮಿಕ್ಸಿಜಾರಿನಲ್ಲಿ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.

    *ಒಂದು ಬೌಲ್​ಗೆ ಎರಡು ಕಪ್ ಮೈದಾ ಹಿಟ್ಟು ,ಎರಡು ಚಮಚ ತುಪ್ಪ,ಚಿಟಿಕೆ ಉಪ್ಪು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.
    ನಂತರ ಒಂದು ಪ್ಯಾನ್​ಗೆ ಮೂರು ಚಮಚ ತುಪ್ಪ ಒಂದು ಕಪ್ ಬೆಲ್ಲ ಹಾಕಿ ಕರಗುವ ತನಕ ಕೈಯಾಡಿಸುತ್ತಿರಿ. ಬೆಲ್ಲ ಕರಗಿದ ನಂತರ ಅದಕ್ಕೆ ರುಬ್ಬಿದ ಕಡ್ಲೆಬೇಳೆಯನ್ನು ಸೇರಿಸಿ ಹೂರಣ ತಯಾರಿಸಿಕೊಳ್ಳಿ.

    * ಕಡ್ಲೆಬೇಳೆಯನ್ನು ಸೇರಿಸಿ ಹೂರಣ ತಣ್ಣಗಾದ ನಂತರ ಉಂಡೆಗಳನ್ನಾಗಿ ಮಾಡಿಕೊಳ್ಳಿ.

    * ನಾದಿಕೊಂಡಿರುವ ಮೈದಾವನ್ನು ಸಹ ಉಂಡೆಗಳನ್ನಾಗಿ ಮಾಡಿಕೊಂಡು ಅದರ ಒಳಗೆ ಕಡ್ಲೆಬೇಳೆ ಮಿಶ್ರಣವನ್ನಿಟ್ಟು ಮತ್ತೆ ಉಂಡೆ ಮಾಡಿಕೊಳ್ಳಿ.
    ಬಟರ್ ಪೇಪರ್​ನ ಮೇಲೆ ಒಂದೊಂದೇ ಉಂಡೆಗಳನ್ನಿಟ್ಟು ಚಪಾತಿ ರೀತಿ ಲಟ್ಟಿಸಿಕೊಳ್ಳಿ.

    * ನಂತರ ಒಂದು ಪ್ಯಾನ್​ಗೆ ತುಪ್ಪ ಹಾಕಿ ಲಟ್ಟಿಸಿದ ಒಬ್ಬಟ್ಟನ್ನು ಎರಡೂ ಬದಿ ಚೆನ್ನಾಗಿ ಕಾಯಿಸಿಕೊಂಡರೆ ರುಚಿಯಾದ ಒಬ್ಬಟ್ಟು ಸವಿಯಲು ಸಿದ್ಧವಾಗುತ್ತದೆ.

    * ತೆಳ್ಳಗಿನ ತುಪ್ಪ ಮತ್ತು ಸಕ್ಕರೆ ಪಾಕ ಈ ಹೋಳಿಗೆಗೆ ಒಳ್ಳೆಯ ಕಾಂಬಿನೇಶನ್!

    Ganesh Chaturthi: ಗಣೇಶನಿಗೆ ಗರಿಕೆ ಹುಲ್ಲು ಯಾಕೆ ಇಷ್ಟ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts