ಕ್ರೀಡೆಯಿಂದ ಆರೋಗ್ಯ ವೃದ್ಧಿ

ರಬಕವಿ/ಬನಹಟ್ಟಿ: ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ರಬಕವಿ ಅರವಳಿಕೆ ತಜ್ಞ ಡಾ. ರವಿ ಜಮಖಂಡಿ ಹೇಳಿದರು.

ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ರಬಕವಿ- ಬನಹಟ್ಟಿ ತಾಲೂಕು ಕೇಂದ್ರವಾಗಿದ್ದು, ಇಂತಹ ಒಳಾಂಗಣ ಕ್ರೀಡಾಂಗಣಗಳ ಅವಶ್ಯಕತೆ ಇಂದಿನ ಯುವ ಪೀಳಿಗೆಗೆ ಅವಶ್ಯವಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಶಿವಶಿಂಪಿ ಸಮಾಜದ ಹಿರಿಯ ಸಿದ್ದಣ್ಣ ಸಣಕಲ್ಲ ಕ್ರೀಡಾಂಗಣಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡಾವಿಭಾಗದ ಅನೇಕ ಕ್ರೀಡಾ ಪರಿಕರಿಗಳನ್ನು ಸಂಸ್ಥೆ ವತಿಯಿಂದ ನೀಡಲಾಗುತ್ತದೆ ಎಂದರು.

ಚಿಕ್ಕ ಮಕ್ಕಳ ತಜ್ಞ ಡಾ. ಅಭಿನಂದನ ಡೋರ್ಲೆ, ರಾಜು ತೆಲಸಂಗ, ಚಿದಾನಂದ ಸೊಲ್ಲಾಪುರ, ದಾನಪ್ಪ ತುಂಗಳ, ಶ್ರೀಶೈಲ ಭುಯ್ಯಾರ, ಚಂದ್ರು ಭುಯ್ಯಾರ, ಐ.ಎ. ಮುಲ್ಲಾ, ಚಂದ್ರಶೇಖರ ಚೆನ್ನಿ, ರಾಜು ಉಮದಿ, ಸಿ.ಬಿ. ತೆಗ್ಗಿ, ಆರ್.ಎಸ್. ಸಿಂಪಿ, ಎಸ್.ಎಸ್. ಹಿರೇಮಠ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *