More

    ಗಮಕ ಕಲಿಕೆಗೆ ನಿರಾಸಕ್ತಿ, ಪರಿಷತ್ ಅಧ್ಯಕ್ಷರ ಬೇಸರ

    ಚಿತ್ರದುರ್ಗ:ಪ್ರಸ್ತುತ ಗಮಕ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ವ್ಯಾಪಕವಾಗಿ ಕ್ಷೀಣಿಸಿದೆ ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ವಿಷಾದಿಸಿದರು. ನಗರದ ಶಾರದಾಭವನದಲ್ಲಿ ಶನಿವಾರ ಪರಿಷತ್, ಚಿತ್ರದುರ್ಗ ಗಮಕ ಕಲಾಭಿಮಾನಿಗಳ ಸಂಘ ಹಾಗೂ ಬ್ರಾಹ್ಮಣ ಸಂಘ ಕನ್ನಡದ ಮಹಾಕವಿ ಕುಮಾರ ವ್ಯಾಸ ಜಯಂತಿ ಅಂಗವಾಗಿ ಆಯೋಜಿಸಿದ್ದ ಗಮಕ ವಾಚನ, ವ್ಯಾಖ್ಯಾನ ಮತ್ತು ಸಾಹಿತ್ಯ ಸಮಾರಾಧನೆ ಕಾರ‌್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕನ್ನಡ ಕಲಿಕೆಗೆ ನಿರಾಸಕ್ತಿ ಇರುವ ಇಂದಿನ ಸನ್ನಿವೇಶದಲ್ಲಿ, ಗಮಕ ಕಲಿಯಲು ಹೇಗೆ ಮುಂದೆ ಬಂದಾರು. ವಿದ್ಯಾರ್ಥಿಗಳಲ್ಲಿದೆ ಪರಿಷತ್ ನಡೆಸುವುದೇ ಕಷ್ಟವಾಗಿದೆ. ಮೊದಲೆಲ್ಲ 10 ವಿದ್ಯಾರ್ಥಿಗಳಿಗೆ ಒಂದು ಕೇಂದ್ರ ಹಾಗೂ ಗಮಕ ಕುರಿತು ಪ್ರಥಮ,ಪ್ರವೇಶ, ಪ್ರೌಢ ಇತ್ಯಾದಿ ಐದು ಪರೀಕ್ಷೆಗಳ ನಿಯಮಗಳನ್ನೂ ಸಡಿಲಗೊಳಿಸಿದ್ದರು ಕಲಿಸುವವರು ಹಾಗೂ ಕಲಿಯುವವರು ಹಾಗೂ ಪರಿಷತ್ ಪ್ರಕಟಿಸಿದ ಪಠ್ಯ ಇತ್ಯಾದಿ ಕೃತಿಗಳನ್ನು ಖರೀದಿಸುವವರು ಇಲ್ಲದೆ ಪರಿಷತ್ ನಡೆಸುವುದೇ ಕಷ್ಟವಾಗುತ್ತಿದೆ ಎಂದು ಬೇಸರಿಸಿದರು.

    ಕುಮಾರವ್ಯಾಸ ಪ್ರಶಸ್ತಿಯೊಂದಿಗೆ ಘೋಷಿಸಿರುವ ಐದು ಲಕ್ಷ ರೂ.ಗಳನ್ನು ಪರಿಷತ್ ಕಟ್ಟಡಕ್ಕೆ ಕೊಡುವುದಾಗಿ ಹೇಳಿದ್ದೇನೆ, ಆದರೆ ಸರ್ಕಾರದಿಂದ ಇನ್ನು ಹಣ ಬಂದಿಲ್ಲವೆಂದರು. ಕಾರ‌್ಯಕ್ರಮ ಉದ್ಘಾಟಿಸಿ ಗಮಕಿ ಎ.ವಿ.ಪ್ರಸನ್ನ ಮಾತನಾಡಿ,ಗಮಕದಿಂದ ಸಾಹಿತ್ಯ ಸ್ವಾರಸ್ಯವನ್ನು ಅರಿಯಲು ಸಾಧ್ಯವಾಗುತ್ತದೆ. ಗಮಕ ಕಾರ‌್ಯಕ್ರಮಗಳಿಗೆ ರಾಜ್ಯದೆಲ್ಲಿಂದಲೇ ಆಹ್ವಾನ ಬಂದರೂ ತೆರಳಲು ಸಿದ್ದ, ಖಂಡಿತಾ ನಮಗೆ ಬಸ್‌ಚಾರ್ಜ್,ಸಂಭಾವನೆ ಕೊಡುವುದು ಅಗತ್ಯವಿಲ್ಲವೆಂದರು. ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್,ಡಾ.ರಾಜೀವ್‌ಲೋಚನ, ರಮಾದೇವಿ, ಶಾಂತಗೋಪಾಲ ಮತ್ತಿತರರು ಇದ್ದರು.
    ————–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts