ಬದುಕಿನ ಪುಟದಲ್ಲಿ ಹೊಸ ಅಧ್ಯಾಯ ಬರೆಯಲು ಬಯಸಿದ್ದೇನೆ: ಕುತೂಹಲ ಕೆರಳಿಸಿದ ರೆಡ್ಡಿ ಫೇಸ್​ಬುಕ್​​ ಪೋಸ್ಟ್​

ಬೆಂಗಳೂರು: 2019ರ ಹೊಸ ವರ್ಷದಲ್ಲಿ ನನ್ನ ಬದುಕಿನ ಪುಟದಲ್ಲಿ ಹೊಸ ಅಧ್ಯಾಯ ಬರೆಯಬೇಕೆಂದು ಬಯಸಿದ್ದೇನೆ ಎಂಬ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಫೇಸ್​ಬುಕ್​ ಫೋಸ್ಟ್ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.​

ಇಂದು 52ನೇ ವಸಂತಕ್ಕೆ ಕಾಲಿಟ್ಟಿರುವ ರೆಡ್ಡಿ ಅವರಿಗೆ ರಾಜಕೀಯ ನಾಯಕರು ಸೇರಿದಂತೆ ಅಭಿಮಾನಿಗಳು ಹಾಗೂ ಹಿತೈಷಿಗಳು ಶುಭಕೋರಿದ್ದಾರೆ. ಈ ಮಧ್ಯೆ ರೆಡ್ಡಿ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ವಿಷಯ ಮತ್ತೆ ರಾಜಕೀಯಕ್ಕೆ ಮರಳುವ ಸೂಚನೆಯನ್ನು ನೀಡಿದೆ.

ರೆಡ್ಡಿ ಅವರ ಫೇಸ್​ಬುಕ್​ ಪೋಸ್ಟ್​ ಹೀಗಿದೆ…
ಈಸ ಬೇಕು ಇದ್ದು ಜಯಿಸಬೇಕು ಎಂದು ದಾಸರು ಹೇಳಿದಂತೆ ಹಲವು ಏಳು ಬೀಳುಗಳ ನಡುವೆಯೂ ನಿಮ್ಮೆಲ್ಲರ ಶುಭ ಹಾರೈಕೆಯಿಂದ ನಿರಂತರ ಹೊಸ ಭರವಸೆಯೊಂದಿಗೆ ಮುನ್ನಡೆಯುತ್ತಿರುವ ನಾನು ಇಂದು 52ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ.

2004, ಡಿಸೆಂಬರ್ 31ರಂದು ನನ್ನ ತಾಯಿಯವರು ಸ್ವರ್ಗಸ್ಥರಾದ ವರ್ಷದಿಂದ ನಾನು ಬಹಿರಂಗವಾಗಿ ಜನ್ಮದಿನ ಆಚರಿಸಿಕೊಳ್ಳದೆ ಕೇವಲ ದೇವರ ಪೂಜೆ, ಧ್ಯಾನ ಹಾಗೂ ಸಮಾಜದ ಸಮಸ್ತ ಜನರ ಹಿತಕ್ಕಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡುವ ಮೂಲಕ ಅತ್ಯಂತ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇನೆ.

ಈ ವರ್ಷವೂ ಯಾವುದೇ ಬಹಿರಂಗ ಕಾರ್ಯಕ್ರಮ ಹಮ್ಮಿಕೊಳ್ಳದೆ ಎಂದಿನಂತೆ ಸರಳವಾಗಿ ದೇವರ ಪೂಜೆಯೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ನನ್ನ ಹಿತೈಷಿಗಳು, ಆತ್ಮೀಯರು ನಮ್ಮ ಮನೆಯ ಬಳಿ ಶ್ರಮವಹಿಸಿ ಬಂದು ನಿರಾಶರಾಗದೆ ಇದ್ದಲ್ಲಿಂದಲೇ ಶುಭ ಹಾರೈಸಿ ಆಶೀರ್ವದಿಸಬೇಕು ಎಂದು ಕೋರುತ್ತೇನೆ.
ಸಾರ್ವಜನಿಕ ಜೀವನದಲ್ಲಿ ಮುಂಚೂಣಿಗೆ ಬಂದು ಮತ್ತೆ ನಿಮ್ಮೆಲ್ಲರ ಸೇವೆ ಮಾಡಲು ನಾನು ಮಾನಸಿಕವಾಗಿ ಸಿದ್ಧನಿದ್ದು, 2019ರಲ್ಲಿ ನನ್ನ ಬದುಕಿನ ಪುಟದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯಬೇಕು ಎಂದು ಬಯಸಿದ್ದೇನೆ. ನಿಮ್ಮ ಶುಭ ಹಾರೈಕೆ, ಆಶೀರ್ವಾದದಿಂದ ಆ ಕನಸು ಈಡೇರಲಿ ಎಂದು ಬಯಸುತ್ತೇನೆ.
ಧನ್ಯವಾದಗಳು – ಗಾಲಿ ಜನಾರ್ದನ ರೆಡ್ಡಿ

ನಿಮ್ಮ ಹಾರೈಕೆ ನನಗೆ ಶ್ರೀರಕ್ಷೆಈಸ ಬೇಕು ಇದ್ದು ಜಯಿಸಬೇಕು ಎಂದು ದಾಸರು ಹೇಳಿದಂತೆ ಹಲವು ಏಳು ಬೀಳುಗಳ ನಡುವೆಯೂ ನಿಮ್ಮೆಲ್ಲರ ಶುಭ…

Gali Janardhan Reddy ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜನವರಿ 10, 2019

Leave a Reply

Your email address will not be published. Required fields are marked *