ಜಾನಪದ ಸಂಶೋಧನೆಗೆ ನಾಂದಿ ಹಾಡಿದ ತಜ್ಞ ಗದ್ದಗಿಮಠ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಬಿ.ಎಸ್​. ಗದ್ದಗಿಮಠ ಜಾನಪದ ಸಂಶೋಧನೆಗೆ ನಾಂದಿ ಹಾಡಿದ ಜಾನಪದ ತಜ್ಞರು. ಜಾನಪದ ಸಾಹಿತ್ಯ ಶ್ರೀಮಂತಗೊಳಿಸಿದ ಕೀರ್ತಿ ಇವರದಾಗಿದೆ ಎಂದು ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಡಾ. ಬಿ.ಎಸ್​. ಗದ್ದಗಿಮಠ ದತ್ತಿ ಉದ್ಘಾಟನೆ, ಡಾ. ಬಿ. ಎಸ್​. ಗದ್ದಗಿಮಠ, ಅನಸೂಯಾದೇವಿ ಗದ್ದಗಿಮಠ ಪ್ರತಿಷ್ಠಾನ ಉದ್ಘಾಟನೆ ಹಾಗೂ ಬಿ.ಎಸ್​. ಗದ್ದಗಿಮಠ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಏನೂ ಸೌಲಭ್ಯಗಳಿಲ್ಲದ ಸಮಯದಲ್ಲಿ ಗದ್ದಗಿಮಠ ಉತ್ತರ ಕರ್ನಾಟಕದ ಹಳ್ಳಿ, ಹಳ್ಳಿಗಳಿಗೆ ಎತ್ತಿನ ಬಂಡೆಯಲ್ಲಿ ಸಂಚರಿಸಿ ಲಕ್ಷಾ೦ತರ ಜಾನಪದ ಹಾಡುಗಳನ್ನು ಸಂಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಬಂಧ ಮಂಡಿಸಿ ಪಿಎಚ್​ಡಿ ಪದವಿ ಪಡೆದರು. ಜಾನಪದ ಕ್ಷೇತ್ರದಲ್ಲಿ ಕವಿವಿಯಿಂದ ಪಿಎಚ್​ಡಿ ಪಡೆದವರಲ್ಲಿ ಇವರೇ ಮೊದಲಿಗರು. ಇವರು ಜಾನಪದಕ್ಕೆ ವಿಶ್ವ ವಿದ್ಯಾಲಯದ ಮಾನ್ಯತೆ ತಂದುಕೊಟ್ಟ ಧೀಮಂತರು ಎಂದರು.
ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಮಾತನಾಡಿ, ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದು ಮುಖ್ಯವಲ್ಲ. ಬದುಕಿದ ರೀತಿ, ನೀತಿ ಮುಖ್ಯ. ಡಾ. ಬಿ.ಎಸ್​. ಗದ್ದಗಿಮಠರು ಬಾಳಿದ್ದು 43 ವರ್ಷ ಮಾತ್ರ. ಆದರೆ ಅವರ ಸಾಧನೆ ಅಪಾರ. ಅವರದು ಸಾರ್ಥಕದ ಬದುಕು ಎಂದರು.
ಎಸ್​.ಆರ್​. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಎಸ್​.ಗದ್ದಗಿಮಠ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ದತ್ತಿದಾನಿ ಡಾ. ನಿಜಗುಣದೇವ ಗದ್ದಗಿಮಠ, ಪುಲಕೇಶಿ ಗದ್ದಗಿಮಠ, ಪ್ರಮೀಳಾ ಹಟ್ಟಿಹೊಳಿ, ಬಾಬಣ್ಣ ಗದ್ದಗಿಮಠ, ಡಾ. ಎಸ್​.ಎಂ. ಶಿವಪ್ರಸಾದ, ಕಿರಣ ಶಿಂಧೆ, ಶಿವಕುಮಾರ ಗೌಡರ, ಪ್ರಭು ನರಕೆ, ಶಿವಕುಮಾರ ಚಿಕ್ಕಮಠ, ಶಾರದಾ ಚಿಗಟೇರಿ, ಹರ್ಷ ದೇಸಾಯಿ, ಪ್ರಭು ಕುಂದರಗಿ, ಗದ್ದಗಿಮಠ ಕುಟುಂಬಸ್ಥರು, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಉಷಾ ಗದ್ದಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಎಂ. ಎಂ. ಚಿಕ್ಕಮಠ ವಂದಿಸಿದರು.

Share This Article

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…

ವಾರದಲ್ಲಿ ಎರಡು ಬಾರಿ ಈ ಜ್ಯೂಸ್​ ಕುಡಿದರೆ ಸಾಕು ನಿಮ್ಮ ಕಿಡ್ನಿಗಳು ಫುಲ್​ ಕ್ಲೀನ್​ ಆಗಿಬಿಡುತ್ತವೆ! Kidney Health

Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು…

ನಿಮ್ಮ ಸಿಬಿಲ್​ ಸ್ಕೋರ್​ ಕುಸಿದಿದ್ಯಾ? ರಾಕೆಟ್​ನಂತೆ ಜಿಗಿಯಲು ಈ​ ಸಿಂಪಲ್​ ಟಿಪ್ ಅನುಸರಿಸಿ​ | CIBIL Score

Cibil Score: ಇತ್ತೀಚಿನ ದಿನಗಳಲ್ಲಿ ಯಾರಿಗೆ ಹಣದ ಅವಶ್ಯಕತೆ ಇಲ್ಲ ಹೇಳಿ? ಬಡವನಿಂದ ಹಿಡಿದು ಶ್ರೀಮಂತರವರೆಗೂ…