More

  ಬಲೆಗೆ ಬಿದ್ದ ಗ್ಯಾದರ್ ಮೀನು: 14,000 ರೂಪಾಯಿಗೆ ಮಾರಾಟ

  ಭಟ್ಕಳ: ಬೃಹತ್ ಗಾತ್ರದ ಗ್ಯಾದರ್ ಜಾತಿಯ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದ್ದು, ಒಂದೇ ಮೀನು ಸಾವಿರಾರು ರೂ. ಗಳಿಗೆ ಮಾರಾಟವಾಗಿದೆ.

  ಸುಮಾರು 72 ಕೆಜಿ ತೂಕದ ಈ ಮೀನು ಭಟ್ಕಳದ ಪವನಸುತ ಹೆಸರಿನ ಬೋಟು ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬಲೆಗೆ ಸಿಲುಕಿಕೊಂಡಿದ್ದು, ಎಸ ಎಫ್ ಬಿ ಮಾರಾಟ ಕಂಪನಿಗೆ 14 ಸಾವಿರ ರೂಪಾಯಿಗೆ ಖರೀದಿಸಿದೆ. ವಿಶೇಷ ಎಂದರೆ ಇದೇ ಬೋಟಿಗೆ 68 ಕೆಜಿ ತೂಕದ ಇನ್ನೊಂದು ಗ್ಯಾದರ್ ಮೀನು ಸಿಕ್ಕಿದೆ.

  ಮತ್ಸ್ಯ ಕ್ಷಾಮ ವಿಪರೀತವಾಗಿರುವ ಈ ಸಂದರ್ಭದಲ್ಲಿ ಭಟ್ಕಳದ ಇನ್ನೊಂದು ಬೋಟಿಗೆ ಹೌರಿ ಎನ್ನುವ ಮೀನು ಸಿಕ್ಕಿದ್ದು, ಇದು ಕೂಡ ಸುಮಾರು 9 ಸಾವಿರ ರೂ. ಗೆ ಮಾರಾಟ ಆಗಿದೆ ಎನ್ನಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts