ಪರಿಪೂರ್ಣ ಜೀವನಕ್ಕೆ ಸಾಹಿತ್ಯದ ಅರಿವು ಅಗತ್ಯ; ವಚನ ಸಾಹಿತ್ಯ ಅದ್ಭುತ ಸಾಹಿತ್ಯ ಪ್ರಕಾರ

ಬಸವಕಲ್ಯಾಣ: ಪರಿಪೂರ್ಣ ಬದುಕಿಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅರಿವು ಅವಶ್ಯ. ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ಇಂಥ ವೇದಿಕೆ ಪೂರಕ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ ಹೇಳಿದರು.

ಗದಲೇಗಾಂವ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವಕಲ್ಯಾಣ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸುಂದರ ಜೀವನಕ್ಕೆ ಸಾಹಿತ್ಯ ತೀರ ಅಗತ್ಯ. ಜಗತ್ತಿನಲ್ಲಿ ಮೊದಲಿಗೆ ಸ್ತ್ರೀ ಸಮಾನತೆ ಕೊಟ್ಟವರು ಬಸವಣ್ಣನವರು. ವಚನ ಸಾಹಿತ್ಯ ಜಗತ್ತಿನ ಅದ್ಭುತ ಸಾಹಿತ್ಯ ಪ್ರಕಾರ. ಈ ಬಗ್ಗೆ ವಿದೇಶಗಳ ವಿವಿಗಳಲ್ಲೂ ಅಧ್ಯಯನ ನಡೆಯುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಆಶೀರ್ವಚನ ನೀಡಿ, ವಚನ ಸಾಹಿತ್ಯ ರಚನೆಯಾದ ಪವಿತ್ರ ನೆಲ ಕಲ್ಯಾಣ. ದಾಸ ಸಾಹಿತ್ಯ, ಜನಪದ ಸಾಹಿತ್ಯ ರಚನೆಯಾದ ನೆಲ ಕನ್ನಡ. ಕವಿರಾಜ ಮಾರ್ಗ ಕೃತಿ ರಚನೆಯಾದ ನೆಲ ಕಲ್ಯಾಣ ಕರ್ನಾಟಕ ಎಂದು ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ ವೈಭವವನ್ನು ಕೊಂಡಾಡಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಗೌರವ ಬಂದಿದೆ ಎಂದರು.

ಹಿರನಾಗಾಂವದ ಶ್ರೀ ಜಯಶಾಂತಲಿಂಗ ಶಿವಾಚಾರ್ಯ, ಸಮ್ಮೇಳನ ಸವರ್ಾಧ್ಯಕ್ಷ ವಿಶ್ವನಾಥ ಮುಕ್ತಾ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಜಿಪಂ ಸದಸ್ಯರಾದ ರಾಜಶೇಖರ ಮೇತ್ರೆ, ಸುಧೀರ ಕಾಡಾದಿ, ಜಿಪಂ ನಿವೃತ್ತ ಉಪ ಕಾರ್ಯದಶರ್ಿ ಬಿ.ಕೆ. ಹಿರೇಮಠ, ಪ್ರಮುಖರಾದ ಸಿದ್ರಾಮಪ್ಪ ಗುದಗೆ, ಮಲ್ಲಿನಾಥ ಹಿರೇಮಠ, ಪಿಎಸ್ಐ ವಾಸೀಮ್ ಪಟೇಲ್, ರಮೇಶ ಉಮ್ಮಾಪುರೆ, ಶರಣಬಸಪ್ಪ ಬಿರಾದಾರ, ಜಗನ್ನಾಥ ಪತಂಗೆ, ರಾಜಕುಮಾರ ಬಿರಾದಾರ, ನರಸಿಂಗರೆಡ್ಡಿ ಗದಲೇಗಾಂವ, ಶ್ರೀದೇವಿ ಕಾಕನಾಳೆ, ಪ್ರೊ.ಎಸ್.ಜಿ. ಕಣರ್ೆ, ಸೂರ್ಯಕಾಂತ ಪಾಟೀಲ್, ದೇವೇಂದ್ರ ಬರಗಾಲೆ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಡಾ.ರುದ್ರಮಣಿ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶರಣಬಸಪ್ಪ ಬಿರಾದಾರ, ಚೆನ್ನಬಸಪ್ಪ ಬಿರಾದಾರ ನಿರೂಪಣೆ ಮಾಡಿದರು.