ವಿಜಯವಾಣಿ ಸುದ್ದಿಜಾಲ ಗದಗ
ರಾಜಯೋಗಿ ವೇಮನರು ಆಂದ್ರದ ಕಡಪ ಜಿಲ್ಲೆಯ ಗಂಡಿಕೋಟದಲ್ಲಿ ಜನಿಸಿದರು. ತಮ್ಮ ಆರಂಭಿಕ ಜೀವನದಲ್ಲಿ ಭೋಗಿಯಾಗಿ ಐಶಾರಾಮಿ ಜೀವನ ಕಳೆಯುತ್ತಾ ಮೋಹಪಾಶಕ್ಕೆ ಒಳಗಾಗಿದ್ದರು. ನಂತರ ಅತ್ತಿಗೆ ಹೇಮರಡ್ಡಿ ಮಲ್ಲಮ್ಮನ ಮಾತುಗಳಿಂದ ಪ್ರಭಾವಿತರಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಸನ್ಯಾಸಿಯಾಗಿ ಯೋಗಿಯಾದರು ಎಂದು ದೈಹಿಕ ಶಿಣಶಾಸ್ತ್ರ ಶಿಕಿ ಪಿ.ಕೆ. ಅವರಡ್ಡಿ ಹೇಳಿದರು.
ತಾಲೂಕಿನ ಹುಲಕೋಟಿ ಗ್ರಾಮದ ಜಿಸಿಟಿಎಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತಿಚೆಗೆ ಜರುಗಿದ ವೇಮನರ 613ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೇಂನರು ಸಂಚಾರ ಮಾಡುತ್ತ ತಮ್ಮ ವಚನಗಳು ಮೂಲಕ ಸಮಾಜದಲ್ಲಿ ಮೇಲು ಕೀಳೆಂಬ ಭಾವನೆ, ಜಾತಿ ಪದ್ಧತಿಯನ್ನು, ಮೂಢನಂಬಿಕೆಗಳನ್ನು, ಅಜ್ಞಾನವನ್ನು, ಪ್ರಾಣಿಬಲಿಯನ್ನು ಕೊನೆಗಾಣಿಸಲು ಪ್ರಯತ್ನಿಸಿದರು. ಇಂತಹ ಅಧ್ಯಾತ್ಮಿಕ ಚಿಂತಕರು ವೇಮನರಾಗಿದ್ದರು. ಕನ್ನಡದಲ್ಲಿ ಸರ್ವ, ತಮಿಳುನಾಡಿನಲ್ಲಿ ತಿರುವಳ್ಳುವರ್ ಅವರಂತೆ ವೇಮನರು ಆಂದ್ರಪ್ರದೇಶದಲ್ಲಿ ನೆಲೆಸಿ 15000ಕ್ಕೂ ಹೆಚ್ಚು ವಚನಗಳ ಮೂಲಕ ಸಾಮಾಜಿಕ, ಧಾಮಿರ್ಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಿದರು ಎಂದರು.
ಕಾಲೇಜಿನ ಶೈಣಿಕ ಸಲಹಾ ಸಮಿತಿ ಚೇರಮನ್ನ ಡಿ. ಬಿ. ಓದುಗೌಡರ ಮಾತನಾಡಿ, ಕೇವಲ ಪಠ್ಯಶಿಣವಲ್ಲದೇ ಜೀವನ ಶಿಣವನ್ನು ಕಲಿಯಬೇಕು. ರಾಜಯೋಗಿ ವೇಮನರ ಸಂದೇಶಗಳು, ತತ್ವಗಳು ನಮಗೆ ಮಾರ್ಗದರ್ಶಕ ಆಗಿವೆ. ನಾವು ಸಾತ್ವಿಕ ಬದುಕು ಹೊಂದಲು ದಾರ್ಶನಿಕರ ಪುಸ್ತಕ ಅಧ್ಯಯನ ಮಾಡಬೇಕು ಎಂದರು.
ಇತಿಹಾಸ ಉಪನ್ಯಾಸಕ ಕೆ. ಎಂ. ಗರಗ ಮಾತನಾಡಿ, ವೇಮನರ ವಚನಗಳಲ್ಲಿಯ ಮಾನವೀಯ ಮೌಲ್ಯಗಳಾದ ಸತ್ಯ, ಆತ್ಮಪರಿಶುದ್ಧತೆ, ಪರಿಶ್ರಮ, ಕರ್ತವ್ಯನಿಷ್ಠೆ, ಸರಳತೆಯನ್ನು ವಿದ್ಯಾಥಿರ್ಗಳು ರೂಢಿಸಿಕೊಳ್ಳಬೇಕು ಎಂದರು.
ಕೀರ್ತನಾ ಭದ್ರಾಪೂರ, ಅಂಕಿತಾ ಜಾಧವ ನಂದಿನಿ ಅಕ್ಕಿ, ಭಾಗ್ಯಶ್ರೀ ಕರಿಗಾರ, ನಸರೀನ್ ಶೇಖಬಾಯಿ, ಸಂಧ್ಯಾ ಮೇಗುಂಡಿ, ವಿದ್ಯಾಶ್ರೀ ನಾಯ್ಕರ ಇತರರು ಇದ್ದರು.