More

    ವಿಧಿಯಾಟದಲ್ಲಿ ನನಸಾಗದೇ ಉಳಿದ ಯೋಧನ ಕನಸು: ರೈಲಿನಿಂದ ಬಿದ್ದು ಮೃತಪಟ್ಟ ಸೈನಿಕನ ಮನಕಲಕುವ ಕತೆ ಇದು

    ಗದಗ: ದೇಶ ಸೇವೆ ಆಯ್ತು ಇನ್ನು ನಾಡಿನ ಸೇವೆ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದ ಯೋಧ, ಪತ್ನಿಯನ್ನು ಉನ್ನತ ಹುದ್ದೆಯಲ್ಲಿ ಸೇರಿಸಬೇಕೆಂದು ತಯಾರಿ ಕೂಡ ಮಾಡಿದ್ದ. ಆದರೆ, ವಿಧಿ ಆಟವೇ ಬೆರೆಯಾಗಿತ್ತು ಅನಿಸುತ್ತದೆ. ಕನಸು ನುಚ್ಚ ನೂರಾಗಿ ಬದುಕಿನ ಪಯಣ ಅಂತ್ಯಗೊಳಿಸಿದ ಯೋಧನ ಮನ ಕಲಕುವ ಕತೆ ಇದು.

    ಗದಗ ತಾಲೂಕಿನ ಮುಳಗುಂದ ಪಟ್ಟಣದ ಯೋಧ ಬಸವರಾಜ್ ಶಂಕ್ರಯ್ಯ ಹಿರೇಮಠ ರಜೆಗೆಂದು ಒಂದು ತಿಂಗಳು ಊರಿಗೆ ಬಂದಿದ್ದರು. ಭಾನುವಾರವಷ್ಟೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ತೆರಳಿದ್ದರು. ಆದರೆ, ಸೋಮವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಹರಾಷ್ಟ್ರದ ಪುಣೆಯ ಘೋರ್ಪಡೆ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಕಾಲುಜಾರಿ ಬಿದ್ದು ರೈಲಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಬಸವರಾಜ್ ಶಂಕ್ರಯ್ಯ ಹಿರೇಮಠ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

    ಶಂಕ್ರಯ್ಯ ಹಿರೇಮಠ 2004 ರಲ್ಲಿ ಆರ್ಮಿಗೆ ಆಯ್ಕೆಯಾಗಿ ಕಳೆದ 16 ವರ್ಷ 3 ತಿಂಗಳು ಸೇವೆ ಸಲ್ಲಿಸುತ್ತಿದ್ದರು. ಸದ್ದಯ ಪುಣೆಯ ಸಿಗ್ನಲ್ ರೆಜಿಮೆಂಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ದಿಂದ ನಿವೃತ್ತಿಯಾಗಲು ಇನ್ನು ಕೇವಲ 9 ತಿಂಗಳು ಮಾತ್ರ ಬಾಕಿ ಉಳಿದಿತ್ತು. ಇದರ ನಡುವೆ ರಜೆಗೆಂದು ಮಳಗುಂದ ಪಟ್ಟಣಕ್ಕೆ ಬಂದಿದ್ದರು. ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಬೆಕಿದ್ದ ಯೋಧ ಪುಣೆಯಲ್ಲಿ ಸಾವನ್ನಪ್ಪಿದ್ದಾರೆ.

    ನಿನ್ನೆ ರಾತ್ರಿ 9 ತಿಂಗಳ ಸೇವೆ ಮುಗಿಸಿ ಬರ್ತೀನಿ ಎಂದು ಪತ್ನಿ ಸಾವಿತ್ರಿಗೆ ಹೇಳಿದ ಬಸವರಾಜ್ ಇಂದು ಜೀವನದ ಸೇವೆ ಮುಗಿಸಿಯೇ ಊರಿಗೆ ವಾಪಸ ಆಗುವ ವಿಪರ್ಯಾಸ ಬಂದಿದೆ. ದೇಶ ಸೇವೆ ಬಳಿಕ ನಾಡ ಸೇವೆ ಮಾಡುವ ಹುಮ್ಮಸ್ಸು ಕನಸು ಬಸವರಾಜ್ ಕಂಡಿದ್ದ. ಮಡದಿ ಸಾವಿತ್ರಿಯನ್ನು ರಾಜ್ಯದ ಉನ್ನತ ಹುದ್ದೆಗೆ ಸೇರಿಸಬೇಕು. ಮಡದಿ ಕೂಡ ನಾಡಿನ ಸೇವೆಯನ್ನು ಮಾಡಬೇಕು ಎಂದು ಕನಸನ್ನು ಕಂಡಿದ್ದ. ಹುತಾತ್ಮ ಯೋಧ ಕೆಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದನಂತೆ. ಆದರೆ, ವಿಧಿಯಾಟ ಬೇರೆಯಾಗಿತ್ತು. ಯೋಧ ಇವತ್ತು ಶವವಾಗಿ ಮನೆಗೆ ಮರಳುವಂತಾಗಿದೆ.

    ಯೋಧ ಬಸವರಾಜ್ 2014 ರಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವ ತಾಲೂಕು ಕುನ್ನೂರ ಗ್ರಾಮದ ಸಾವಿತ್ರಿ ಎನ್ನುವರನ್ನು ಮದುವೆಯಾಗಿದ್ದರು. ಯೋಧ ಬಸವರಾಜ್​ಗೆ ಮೂರು ವರ್ಷದ ಚೇತನ ಎಂಬ ಗಂಡು ಮಗುವಿದೆ. ನನ್ನ ಗಂಡ ಬರುತ್ತಾರೆ. ನಿವೆಲ್ಲರೂ ಸುಳ್ಳು ಹೆಳುತ್ತಿದ್ದಿರಿ ಅಂತಾ ಕಣ್ಣಿರು ಹಾಕ್ತಿರೋ ಹೆಂಡತಿ ರೋದನೆ ಹೇಳತೀರದಾಗಿದೆ. ಯೋಧ ಬಸವರಾಜ್ ಮರಣವನ್ನಪ್ಪಿದ ಸುದ್ದಿ ಗ್ರಾಮವನ್ನು ಹಬ್ಬುತಿದ್ದಂತೆ ಪಟ್ಟಣದಲ್ಲಿ ನಿರವಮೌನ ಆವರಿಸಿದೆ.

    ಯೋಧ ಬಸವರಾಜ್ ಪಾರ್ಥೀವ ಶರೀರ ಇಂದು ಸ್ವಗ್ರಾಮದ ಮುಳಗುಂದಕ್ಕೆ ಆಗಮಿಸಲಿದ್ದು, ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts