ವಿಜಯವಾಣಿ ಸುದ್ದಿಜಾಲ ಗದಗ
ಹತ್ತೊಂಬತ್ತನೆ ಶತಮಾನದ ಉತ್ತರಾರ್ಧದಲ್ಲಿ ಮುಂಬೈ ಕರ್ನಾಟಕ ಭಾಗದಲ್ಲಿ ಮರಾಠಿ ಹಾಗೂ ಇಂಗ್ಲೀಷ್ ಭಾಷಾ ಪ್ರಾಭಲ್ಯ ಇದ್ದ ಸಂದರ್ಭದಲ್ಲಿ ಕನ್ನಡ ಭಾಷೆ, ಶಿಣ, ಸಾಹಿತ್ಯ ಮತ್ತು ಸಂಸತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ಚೆನ್ನಬಸಪ್ಪನ್ನವರು ನಾಂದಿ ಹಾಡಿದರು ಎಂದು ರಾಜೀವಗಾಂಧಿ ನಗರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾದ್ಯಾಯ ಎಸ್. ಬಿ.ಬಾಗೇವಾಡಿ ಹೇಳಿದರು.
ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಸಂಭ್ರಮ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಅವರು, ಕುಲ, ನೆಲಗಳ ಉಜ್ವಲ ಅಭಿಮಾನಿಗಳಾಗಿ, ಶಿಣ ತರಾಗಿ, ಗಣಿತ ಶಾಸ್ತ್ರಜ್ಞರಾಗಿ, ಶ್ರೇಷ್ಠ ವಾಗ್ಮಿಗಳಾಗಿ, ಶೇಕ್ಸಪಿಯರ್ ನನ್ನು ಕನ್ನಡಕ್ಕೆ ಪರಿಚಯಿಸಿದ ಪ್ರಥಮ ಲೇಖಕರಾಗಿ ಚೆನ್ನಬಸಪ್ಪನವರು ಕನ್ನಡ ಸೇವೆ ಮಾಡಿದ್ದಾರೆ. ಕರ್ನಾಟಕದ ಪ್ರಥಮ ಮತ್ತು ಪ್ರಮುಖ ಶಿಣ ತರಬೇತಿ ಸಂಸ್ಥೆಯ ಮೊದಲ ಪ್ರಾಚಾರ್ಯರಾಗಿ, ಶತಮಾನೋತ್ಸವವನ್ನು ಅಚರಿಸಿದ ಕನ್ನಡದ ಏಕಮೇವ ಶೈಣಿಕ ಪತ್ರಿಕೆ “ಜೀವನ ಶಿಣ’ ಪತ್ರಿಕೆಯ ಸ್ಥಾಪಕರಾಗಿ ಚನ್ನಬಸಪ್ಪನವರು ಕನ್ನಡವನ್ನು ಬೆಳೆಯುವಂತೆ ಮಾಡಿದ್ದಾರೆ ಎಂದರು.
ನೋಡಲ್ ಶಿವಾನಂದ ಗಿಡ್ನಂದಿ ಮಾತನಾಡಿ, ವಿದ್ಯಾಥಿರ್ಗಳಿಗಾಗಿ ಕನ್ನಡ ನಾಡು, ನುಡಿ, ಸಂಸತಿ ಕುರಿತು ಅಭಿಮಾನ ಮೂಡಿಸುವುದು ಮತ್ತು ಕರ್ನಾಟಕದ ಹಿರಿಮೆ ಗರಿಮೆಗಳನ್ನು ತಿಳಿಸುವ ಭಾಷಣ, ಪ್ರಬಂಧ, ಕನ್ನಡ ರಸಪ್ರಶ್ನೆ ಕಾರ್ಯಕ್ರಮ, ಕನ್ನಡ ನಾಡಗೀತೆಗಳನ್ನು ಹಾಡುವ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಏರ್ಪಡಿಸಿ ಕನ್ನಡ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರಿ ಶಾಲೆ ಮಾಡುತ್ತಿದೆ ಎಂದರು.
ವೈ. ಎಸ್. ಬಮ್ಮನಾಳ, ಎಂ. ಎಸ್. ಕುಚಬಾಳ, ಎಲ್. ಬಿ. ಕಾಲವಾಡ, ವಿ. ಎಸ್. ಚೂರಿ ಇತರರು ಇದ್ದರು.