ಅಬ್ಬಿಗೇರಿ ‘ಕೂಸಿನ ಮನೆ’ ತಾಲೂಕಿಗೆ ಮಾದರಿ :ಚಂದ್ರಶೇಖರ ಬಿ ಕಂದಕೂರ

blank
ಕೂಸಿನ ಮನೆ:  ಗ್ರಾಮದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವರದಾನ
Gadag:  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯ ನಿರ್ವಹಿಸಲುರುವ ಕೂಲಿ ಕಾರ್ಮಿಕ ಮಹಿಳೆಯರಿಗೆ ತಮ್ಮ ಮಕ್ಕಳ ಆರೈಕೆಯ ಚಿಂತೆಯಿಂದ ಮುಕ್ತಿ ನೀಡುವ ಸಲುವಾಗಿ ರಾಜ್ಯ ಸರ್ಕಾರವು ‘ಕೂಸಿನ ಮನೆ’ ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದು ಇದು ಅಬ್ಬಿಗೇರಿ ಗ್ರಾಮದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆದಿದ್ದು ತಾಲೂಕಿನಲ್ಲೆ ಮಾದರಿ ಕೂಸಿನ ಮನೆಯಾಗಿದೆ ಅಂತಾ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಹೇಳಿದರು..
ಅಬ್ಬಿಗೇರಿ ಗ್ರಾಮ ಪಂಚಾಯತಿ ಯಲ್ಲಿ ಇರುವ ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಬ್ಬಿಗೇರಿ ಗ್ರಾಮದಲ್ಲಿ ಕೂಸಿನ ಮನೆ ಬಹಳ ಚನ್ನಾಗಿ ನಡೆದಿದೆ, ಇಲ್ಲಿನ ಕೂಲಿ ಕಾರ್ಮಿಕರು ತಮ್ಮ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಪ್ರತಿದಿನ ಬಿಟ್ಟು ಕೆಲಸಕ್ಕೆ ಹೋಗಿ ಇದರಿಂದ ಮಹಿಳಾ ಕಾರ್ಮಿಕರು ಯಾವುದೇ ಚಿಂತೆಯಿಲ್ಲದೆ ತಮ್ಮ ಕೆಲಸದಲ್ಲಿ ತೊಡಗಿ ಕೊಳ್ಳಬಹುದು.
ಈ ಮೊದಲು ಗ್ರಾಮೀಣ ಭಾಗದಲ್ಲಿ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಮಕ್ಕಳನ್ನು ಯಾರೊಡನೆ ಬಿಟ್ಟು ಹೋಗುವುದು ಎಂಬುದು ದೊಡ್ಡ ಸವಾಲಾಗಿತ್ತು. ‘ಕೂಸಿನ ಮನೆ’ ಈ ಸಮಸ್ಯೆಗೆ ಪರಿಹಾರವಾಗಿದ್ದು, ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಮಕ್ಕಳಿಗೆ ಇಲ್ಲಿ ವರ್ಣರಂಜಿತ ಕಟ್ಟಡಗಳು, ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಚಿತ್ರಗಳು, ಆಟಿಗೆ ಸಾಮನುಗಳು ಹಾಗೂ ಪೌಷ್ಟಿಕ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಅಬ್ಬಿಗೇರಿ ಗ್ರಾಮದಲ್ಲಿ ಪ್ರತಿದಿನ 2000 ಕ್ಕೂ ಅಧಿಕ ಜನರು ನರೇಗಾ ಸಾಮೂಹಿಕ ಕಾಮಗಾರಿಯಡಿ ಕೆಲಸಕ್ಕೆ ಬರುತ್ತಾರೆ, ಅದರಲ್ಲಿ ಕೆಲವು ಅವಿಭಕ್ತ ಕುಟುಂಬ ಗಳಲ್ಲಿ ವಾಸಿಸುವ ಜನರು ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊಗುತ್ತಾರೆ, ಇನ್ನು ಕೆಲವು ವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಜನರು ತಮ್ಮ ಮಕ್ಕಳನ್ನು ಎಲ್ಲಿ ಬಿಟ್ಟು ಹೋಗಬೇಕು ಎಂಬ ಚಿಂತೆ ಅವರನ್ನು ಕಾಡುತಿತ್ತು ಆದರೆ ಅದಕ್ಕೆ ಪರಿಹಾರ ಎಂಬಂತೆ ಕೂಸಿನ ಮನೆ ಕಾರ್ಯ ನಿರ್ವಹಿಸುತ್ತದೆ ಗ್ರಾಮದಲ್ಲಿ
ಪ್ರತಿ ದಿನ ಕೂಸಿನ ಮನೆಗೆ 15 ಕ್ಕೂ ಹೆಚ್ಚು ಮಕ್ಕಳನ್ನು ಪಾಲಕರು ಇಲ್ಲಿ ಬಿಟ್ಟು ಹೋಗುತ್ತಾರೆ. ಆರೈಕೆದಾರರಾದ ಐಶ್ವರ್ಯ ದೊಡ್ಡಮನಿ, ಹಾಗೂ ಲಕ್ಷ್ಮಿ ತಲ್ಲೂರ ಸಹ ಮಕ್ಕಳನ್ನು ದಿನನಿತ್ಯ ಆಟವಾಡಿಸುತ್ತಾ ಉತ್ಕೃಷ್ಟ ಮಟ್ಟದ ಆಹಾರವನ್ನು ಮಕ್ಕಳಿಗೆ ತಿನ್ನಿಸುತ್ತಾ ಮಕ್ಕಳ ಲಾಲನೆ ಪಾಲನೆ ಮಾಡುತ್ತಾರೆ..
 *ಕೊಟ್*
ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಕೂಸಿನ ಮನೆಯನ್ನು ಕೈಲಾದ ಮಟ್ಟಕ್ಕೆ ಚನ್ನಾಗಿ ನೋಡಿಕೊಳ್ಳಲು ಶ್ರಮ ಪಡುತ್ತಿದ್ದೇವೆ, ಕೂಸಿನ ಮನೆಯು ನರೇಗಾ ಮಹಿಳಾ ಕಾರ್ಮಿಕರ ಸಬಲೀಕರಣಕ್ಕೆ ಮಹತ್ವದ ಕೊಡುಗೆಯಾಗಿದೆ. ಇದು ಕೇವಲ ಮಕ್ಕಳ ಆರೈಕೆಗೆ ಮಾತ್ರವಲ್ಲ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
 *ಲೋಹಿತ ಎಂ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅಬ್ಬಿಗೇರಿ*
 *ಕೊಟ್*
ನಮ್ಮ ಗ್ರಾಮದ ಕೂಸಿನ ಮನೆಯಿಂದ ಮಹಿಳಾ ಕೂಲಿ ಕಾರ್ಮಿಕರಿಗೆ ಬಹಳಷ್ಟು ಅನುಕೂಲವಾಗಿದೆ, ಪ್ರತಿ ದಿನ ದುಡಿಯಲಿಕ್ಕೆ ಹೋಗುವ ತಾಯಂದಿರು ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಚಿಂತೆಯಿಲ್ಲದೆ ಕೆಲಸಕ್ಕೆ ಹೋಗುತ್ತಾರೆ, ಇಲ್ಲಿಯೂ ಸಹ ಮಕ್ಕಳಿಗೆ ಚನ್ನಾಗಿ ಆಟ ಆಡಿಸಿ, ಊಟ ಮಾಡಿಸುತ್ತಾರೆ ಕೆಲಸದಿಂದ ಬಂದ ಬಳಿಕ ಮಕ್ಕಳನ್ನು ಕರೆದುಕೊಂಡು ಹೊಗುತ್ತಾರೆ ಇದರಿಂದ ಬಹಳಷ್ಟು ಅನುಕೂಲವಾಗಿದೆ ಅಂತಾ ಮಹಿಳಾ ಕಾರ್ಮಿಕರು ನನ್ನ ಬಳಿ ಖುಷಿ ವ್ಯಕ್ತಪಡಿಸುತ್ತಾರೆ…
 *ಲಲಿತಾ ರಾಠೋಡ, ಗ್ರಾಮ ಪಂಚಾಯತಿ ಅಧ್ಯಕ್ಷರು ಅಬ್ಬಿಗೇರಿ*
 *ಕೊಟ್*
ಈ ಮೊದಲು ನಾವು ಕೆಲಸ ಮಾಡುವ ಸಂದರ್ಭದಲ್ಲಿ ಕೂಸಿನ ಮನೆ ಇರಲಿಲ್ಲಾ ಕಳೆದ ಬಾರಿ ಈ ಬಾರಿ ಕೂಸಿನ ಮನೆ ಆಗಿದೆ, ಮೊದಲೆಲ್ಲಾ ನಮ್ಮ ಮಕ್ಕಳನ್ನು ಇನ್ನೊಬ್ಬರ ಬಳಿ ಹೇಗೆ ಬಿಟ್ಟು ಹೋಗಬೇಕು ಎಂಬ ಚಿಂತೆ ಕಾಡುತಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಲಿತಾ ರಾಠೋಡ ಅವರು ನಮಗೆ ತಿಳಿ ಹೇಳಿದರು, ನಾವು ಒಂದೆರಡು ದಿನ ಬಿಟ್ಟು ಮಕ್ಕಳು ಇರುತ್ತಾರೋ ಇಲ್ಲವೋ ಎಂಬುದರ ಕುರಿತು ಪರೀಕ್ಷೆ ಮಾಡಿದೆವು, ಆದರೆ ಮಕ್ಕಳು ಉಳಿದ ಮಕ್ಕಳ ಜೊತೆಗೆ ಸೇರಿ ಆಟ ವಾಡುತ್ತಾ, ಉಟ ಮಾಡುತ್ತಾ ಕಾಲ ಕಳೆಯುತ್ತಾರೆ. ಕೆಲಸ ಮುಗಿಸಿ ಬರುವ ಸಂದರ್ಭದಲ್ಲಿ ಮಕ್ಕಳನ್ನು ನಾವು ಮನೆಗೆ ಕರೆದುಕೊಂಡು ಹೊಗುತ್ತೇವೆ…
 *ರೇಖಾ ರಾಜೂರ, ಅಬ್ಬಿಗೇರಿ ಗ್ರಾಮದ ಕೂಲಿ ಕಾರ್ಮಿಕರು*
TAGGED:
Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…