ಪಡಿತರ ಅಂಗಡಿ ಮಾಲೀಕರ ಸುದ್ದಿಗೋಷ್ಟಿ!  ದೇಶದಾದ್ಯಂತ ಏಕರೂಪ ಕಮೀಷನ್ ಜಾರಿ ಮಾಡಬೇಕು: ಟಿ. ಕೃಷ್ಣಪ್ಪ

blank

ವಿಜಯವಾಣಿ ಸುದ್ದಿಜಾಲ, ಗದಗ
ದೇಶಾದ್ಯಂತ ಇರುವ ಏಕರೂಪದ ಆಹಾರ ಭದ್ರತೆ ಯೋಜನೆಯಂತೆ ಎಲ್ಲ ರಾಜ್ಯಗಳಲ್ಲೂ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಏಕ ರೂಪದ ಕಮಿಷನ್ ನೀಡುವ ಯೋಜನೆ ಜಾರಿ ಆಗಬೇಕು ಎಂದು ನ್ಯಾಯಬೆಲೆ ಪಡಿತರ ವಿತರಕ ಸಂಘದ ರಾಷ್ಟ್ರೀಯ ಕಾರ್ಯಧ್ಯಕ್ಷ ಟಿ. ಕೃಷ್ಣಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆಥಿರ್ಕವಾಗಿ ಸ್ವಾವಲಂಬಿ ಆಗಿಸುವ ಉದ್ದೇಶದಿಂದ ದೇಶದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಏಕರೂಪದ ಕಮಿಷನ್ ನೀಡುವ ಯೋಜನೆ ಜಾರಿ ಆಗಬೇಕು. ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಮಾದರಿಯಲ್ಲಿ ಪಡಿತರ ನೀಡುವ ರೂಢಿ ಇದೆ. ಕೆಲ ರಾಜ್ಯಗಳಲ್ಲಿ ಅಕ್ಕಿ ಜತೆ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಅದೇ ಮಾದರಿ ಅನುಸರಿಸಿದರೇ ಕಬ್ಬ ಬೆಳೆಗಾರರಿಗೆ, ಇತರೆ ಕೃಷಿ ಉತ್ಪನ್ನ ಪಡೆಯುವ ರೈತರಿಗೆ ಅನುಕೂಲ ಆಗುತ್ತದೆ ಮತ್ತು ರೈತರು ಆಥಿರ್ಕ ಸ್ವಾವಲಂಭಿಗಳಾಗುತ್ತಾರೆ. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದರು.
ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಮೊತ್ತದ ಕಮಿಷನ್ ನೀಡುವ ಯೋಜನೆ ಜಾರಿಯಲ್ಲಿದೆ. ಗೋವಾ ರಾಜ್ಯದಲ್ಲಿ ಪ್ರತಿ ಕ್ವಿಂಟಾಲ್ ಗೆ 300 ರೂ, ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕೇವಲ 150 ರೂ. ಸರ್ಕಾರದಿಂದ ಕಮಿಷನ್ ವಿತರಣೆ ಆಗುತ್ತಿದೆ. ದೇಶಾದ್ಯಂತೆ ಆಹಾರಭದ್ರತೆ ಯೋಜನೆಯಡಿ ಪ್ರತಿಯೊಬ್ಬರಿಗೂ 5 ಕೆಜಿ ಅಕ್ಕಿ ನೀಡುವ ಕೇಂದ್ರ ಸರ್ಕಾರ, ಅದೇ ಮಾದರಿಯಂತೆ ಏಕ ರೂಪ ಕಮಿಷನ್ ಯೋಜನೆ ಜಾರಿ ಮಾಡಬೇಕು. ರಾಜ್ಯದಲ್ಲಿ ಇರುವ ಕಮಿಷನ್ ದರವನ್ನು ಅಧಿಕಗೊಳಿಸಬೇಕು ಎಂದರು.
ನಗದು ವರ್ಗಾವಣೆ ಕೈಬಿಡಿ:
ಪಡಿತರ ಬದಲಾಗಿ ಡಿಬಿಟಿ ಮೂಲಕ ನಗದು ವರ್ಗಾವಣೆ ಯೋಜನೆಯನ್ನು ಕೈಬಿಡಲು ಆಗ್ರಹಿಸಿದ ಕೃಷ್ಣಪ್ಪ ಅವರು, ರಾಜ್ಯ ಸರ್ಕಾರ ಪಡಿತರ ವಿತರಣೆ ಕುರಿತು ಸಮೀಕ್ಷೆ ನಡೆಸಿದೆ. ಪಡಿತರ ಬೇಕೋ? ಪಡಿತರ ಪರವಾಗಿ ಹಣ ಬೇಕೋ? ಎಂದು ಸಮೀಕ್ಷೆ ನಡೆಸಲಾಗಿದ್ದು, ಶೇ. 95 ಕ್ಕೂ ಅಧಿಕ ಜನರು ಹಣದ ಬದಲಾಗಿ ಪಡಿತರ ಬೇಕು ಎಂದು ಆಗ್ರಹಿಸಿದ್ದಾರೆ. ಸಮಿಾ ವರದಿ ಸರ್ಕಾರದ ಕೈ ಸೇರಿದೆ ಮತ್ತು ಎರಡೂ ಬಾರಿ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಆದರೂ ಸರ್ಕಾರ ವರದಿಯನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ಜನರ ಮನ್ನಣೆ ಮತ್ತು ಆಗ್ರಹಕ್ಕೆ ಸರ್ಕಾರ ಗೌರವ ನೀಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಚುನಾವಣೆ ವೇಳೆ ನೀಡಿದ ಭರವಸೆಯಂತೆ ನಗದು ವರ್ಗಾವಣೆ ಬದಲಾಗಿ ಪಡಿತರ ವಿತರಿಸಬೇಕು ಎಂದು ಕೃಷ್ಣ ಆಗ್ರಹಿಸಿದರು.
ಮುನಿಯಪ್ಪ ಸಿಎಂ ಆಗಬೇಕು:
ಪಡಿತರ ವಿತರಣೆ ಕುರಿತು ರಾಜ್ಯ ಸರ್ಕಾರ ತನ್ನದೇ ವರದಿಯನ್ನು ಸ್ವೀಕರಿಸುವುದನ್ನು ಗಮನಿಸಿದರೇ ಆಹಾರ ಸಚಿವ ಮುನಿಯಪ್ಪ ಅವರ ಜತೆ ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರೆ ಎಂದು ಅನಿಸುತ್ತಿದೆ. ಮುನಿಯಪ್ಪ ಅವರ ಸೇವೆ ಪರಿಗಣಿಸಿದರೆ ಅವರು ಸಿಎಂ ಆಗುವ ಅಭ್ಯಥಿರ್. ಹಾಗಾಗಿ ಅವರ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಿಷ್ಕಾಳಜಿ ಇದೆ. ಮುನಿಯಪ್ಪ ಅವರಿಗೆ ನಗದು ವರ್ಗಾವಣೆ ಬದಲಾಗಿ ಪಡಿತರ ನೀಡಬೇಕೆಂದು ಆಶಯವಿದೆ. ಆದರೆ ಸಿದ್ದರಾಮಯ್ಯ ಅವರು ತಿರಸ್ಕಾರ ಮಾಡುತ್ತಿದ್ದಾರೆ ಎಂದು ಕೃಷ್ಣಪ್ಪ ಆರೋಪಿಸಿದರು.
ಚನ್ನಕೇಶವ ಗೌಡ, ಪ್ರಭು ಶೆಟ್ಟರ, ದೇವರಾಜು, ನವೀನ ನಾಲವಾಡ, ಬಸವರಾಜ ಜಿ, ನರೇಶ ಬುರುಬುರೆ, ಲಿಂಗಯ್ಯ ಧನ್ನೂರಮಠ, ಗೋಪಾಲ್ ಕಲಬುಗಿರ್, ಮುತ್ತನಗೌಡ ಪಾಟೀಲ ಇತರರು ಇದ್ದರು.
====
ಸುದ್ದಿಗೋಷ್ಟಿ ಹೈಲೆಟ್ಸ್:
*ದೇಶಾದ್ಯಂತ ಪಡಿತರ ಅಂಗಡಿ ಮಾಲೀಕರಿಗೆ ಏಕರೂಪದ ಕಮಿಷನ್ ಯೋಜನೆ ಜಾರಿ ಆಗ್ರಹ
* ಜುಲೈ ತಿಂಗಳ ಕಮಿಷನ್ ಹಣ ಆದಷ್ಟು ಬೇಗ ಬಿಡುಗಡೆ ಮಾಡಲು ಒತ್ತಾಯ
* ಪಡಿತರದಲ್ಲಿ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಸೇರಿಸಲು ಆಗ್ರಹ
* ಪಡಿತರ ಬದಲಾಗಿ ನಗದು ವರ್ಗಅವಣೆ ರದ್ದುಗೊಳಿಸಿ ಪಡಿತರ ವಿತರಿಸುವಂತೆ ಮನವಿ

TAGGED:
Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…