ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಂಸತ್ ಉದ್ಘಾಟನೆ

Gadag: ನಿಂಗಮ್ಮ ಎಸ್.ಹೂಗಾರ ಪದವಿಪೂರ್ವ ವಿಜ್ಞಾನ,ವಾಣೀಜ್ಯ ಮತ್ತು ಕಲಾ ಕಾಲೇಜು, ಅಣ್ಣೀಗೇರಿಯಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸಂಸತ್ ಉದ್ಘಾಟನೆ ಸಮಾರಂಭವು ಜರುಗಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರು ಹಾಗೂ ಎನ್.ಎಸ್.ಎಸ್ ಘಟಕದ ಮುಖ್ಯಸ್ಥರು ಆದಂತಹ ಶ್ರೀ ಬಿ.ಎ. ನಲವಡಿ ಗುರುಗಳು ಆಯ್ಕೆ ಎನ್ನುವುದು ವಿದ್ಯಾರ್ಥಿಗಳ ಕೈಯಲ್ಲಿರುತ್ತೇ ಪ್ರತಿಯೊಂದು ಆಯ್ಕೆಯೂ ಒಳ್ಳೆಯ ಆಯ್ಕೆ ಆಗಿರಬೇಕು, ಗಳಿಸಬೇಕು, ಬಳಸಬೇಕು, ಉಳಿಸಬೇಕು ಎಂಬ ೩ ಅಂಶಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ನಮ್ಮ ಪರಿಸರ ಉಳಿಸಿ, ಬೆಳೆಸಿ ಶಿಕ್ಷಣದ ಜೊತೆಗೆ ಈ ಪರಿಸರುಳಿದರೆ ನಮ್ಮ ಜೀವನ ರೂಡಿಸಿಕೊಳ್ಳಲು ಸಾಧ್ಯ ತಂದೆ- ತಾಯಿಗೆ ಗೌರವಿಸಿರಿ ಎಂದು ಮಕ್ಕಳನ್ನು ಉದ್ದೇಶಿಸಿ ಹಿತನ್ಮಡಿಗಳನ್ನಾಡಿದರು.
ಹೆಣ್ಣು ಮಕ್ಕಳ ಮೆಟ್ರಿಕ್ ನಂತರದ ಬಿ.ಸಿ.ಎಮ್. ಹಾಸ್ಟೇಲ್ ಮೇಲ್ವಿಚಾರಕ ಸೈರಾಬಾನು ಸನ್ನೂಬಾಯಿ ಅವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ನಮ್ಮ ವಸತಿ ನಿಲಯದಲ್ಲಿ ಶ್ರೀಮತಿ ನಿಂಗಮ್ಮ ಎಸ್ ಹೂಗಾರ ಕಾಲೇಜಿನ ೬೪ ವಿದ್ಯಾರ್ಥಿಗಳು ಇದ್ದು ಎಲ್ಲರೂ ಒಳ್ಳೆಯ ವಿದ್ಯಾರ್ಥಿಗಳೆಂದು ಹೆಸರಿಗೆ ಪಾತ್ರರಾಗಿದ್ದಾರೆ, ಒಳ್ಳೆಯ ಹವ್ಯಾಸ ಇದ್ದರೆ ಜೀವನ ಉತ್ತಮವಾಗುತ್ತದೆ ಎಂದು ನುಡಿದರು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀ ಜಯರಾಮ ಪಿ. ಲಮಾಣಿ ಪ್ರಾಚಾರ್ಯರು ಶಂಕರ ಪದವಿ ಪೂರ್ವ ಕಾಲೇಜು ನವಲಗುಂದ ಇವರು ತಮ್ಮ ಅಥಿತಿ ಭಾಷಣದಲ್ಲಿ ಆದುನಿಕ ಜಗತ್ತು ಸ್ಪರ್ಧಾತ್ಮಕ ಜಗತ್ತು, ನೀವು ಯಾವುದೇ ರೀತಿಯ ಶಿಕ್ಷಣ ಪಡೆಯಿರಿ, ಪ್ರತಿಯೊಂದು ಸ್ಪರ್ಧಾತಕ ಪರೀಕ್ಷೆಗಳಲ್ಲಿ ಭಾಗವಸಿ ಉದ್ಯೋಗ ಪಡೆಯಿರಿ. ಜೀವನದಲ್ಲಿ ಏಳು ಬಿಳು ಇದ್ದೇ ಇರುತ್ತದೆ ಅದರಲ್ಲಿಯೇ ನಾವು ಜೀವನವನ್ನು ರೂಡಿಸಿಕೊಳ್ಳ ಬೇಕೆಂದು ಮಕ್ಕಳಿಗೆ ತಿಳಿಸಿದರು. ನಮ್ಮ ಬೆಳವಣಿಗೆ, ವ್ಯಕ್ತಿತ್ವ ರೂಡಿಸಿಕೊಳ್ಳಲಿಕ್ಕೆ ಅವಶ್ಯಕವಾದ ಜ್ಞಾನ ಮಾತ್ರ ನಾವು ಅಳವಡಿಸಿಒಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು. ಸಮಯ ಬಹಳ ಮುಖ್ಯ ಸಮಯ ಕಳೆದುಕೊಳ್ಳ ಬೇಡಿರಿ, ಸಾಧನೆಗೆ ಶಿಕ್ಷಣ, ಸಮಯ ಎರಡು ಮುಖ್ಯವೆಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರು ಪ್ರೊ. ಎಸ್. ಎಸ್. ಹರ್ಲಾಪೂರ ಗುರುಗಳು ಮಕ್ಕಳಿಗೆ ನಿಮ್ಮ ಬದುಕು ಸುಂದರವಾಗಬೇಕೆAದೆ ನಿಮ್ಮಲ್ಲಿರುವ ಜ್ಞಾನ, ಸಾಮರ್ಥ್ಯದಿಂದ ಮಾತ್ರ ಸಾಧ್ಯ ಸ್ವಯಂ ಸಾಧನೆ ನಿಮ್ಮ ಬದುಕಿಗೆ ದಾರಿದೀಪ ಎಲ್ಲ ವಿದ್ಯಾರ್ಥಿಗಳು ವಿನದಿಂದ ಬದುಕಿದರೆ ವಿಧ್ಯೆ ನಮಗೆ ಎತ್ತರಕ್ಕೆ ಕರೆದೊಯ್ಯುವುದು ಎಂದು ಮಕ್ಕಳಿಗೆ ತಿಳಿಸಿದರು. ವಿದ್ಯೆ ನಮ್ಮ ಸಂಗಾತಿ ಇದ್ದ ಹಾಗೆ ಅದನ್ನು ಯಾರೂ ಸಹ ಕಿತ್ತು ಕೊಳ್ಳಲು ಸಾಧ್ಯವಿಲ್ಲ ಆ ವಿದ್ಯೆಯಿಂದಲೇ ನಾವು ಸಾಧನೆ ಮಾಡಲು ಸಾಧ್ಯ. ಯಾವುದೇ ಕಾಯಕ ಮಾಡಿದರೂ ನಿಮಗೆ ಕಾಯಕ ತೃಪ್ತಿ ನೀಡುವಂತೆ ನೀವು ಬಾಳಿರಿ ಎಂದು ನುಡಿದರು, ತಂದೆ- ತಾಯಿಯರನ್ನು ನಿತ್ಯ ನೆನೆದು ಗೌರವಿಸಿ ಊಟ ಮಾಡಬೇಕು. ಪಾಠದ ಜೊತೆಗೆ ಪಟ್ಟೇತ್ತರ ಚಟುವಟಿಕೆಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಮಕ್ಕಳನ್ನು ಉದ್ದೇಶಿಸಿ ತಮ್ಮ ಅಧ್ಯಕ್ಷಿಯ ಬಾಷಣÀದಲ್ಲಿ ಹೆಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋದಕ-ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಕುಮಾರಿ ವಿಜಯಲಕ್ಷಿö್ಮ ಭೂಮನ್ನವರ ನಿರೂಪಿಸಿದರು, ಕುಮಾರಿ ಸಂಜನಾ ಬೆನಕೊಪ್ಪರ ಸ್ವಾಗತಿಸಿದರು, ಕುಮಾರಿ ನಸೀಮಾ ಅತ್ತಾರ ಪುಪ್ಪಾರ್ಪಣೆ ಕುಮಾರಿ ಅಂಕಿತಾ ದಾಸರ ವಂದಿಸಿದರು.

TAGGED:
Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…