ಗದಗ: ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿ, ತನ್ನ ಇಡೀ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮೀಸಲಿಟ್ಟು ಕೊನೆಗೆ ದೇಶಕ್ಕಾಗಿ ವೀರಮರಣ ಹೊಂದಿದ ಕ್ರಾಂತಿಕಾರಿ ಹೋರಾಟಗಾರ ಸಂಗೋಳ್ಳಿ ರಾಯಣ್ಣನವರ ಪುಣ್ಯಸ್ಮರಣೆ ಅಂಗವಾಗಿ ಜ. 26ರಂದು ಸಂಜೆ 6.30ಕ್ಕೆ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಕ್ರಾಂತಿಸೇನಾ ಸಂಟನೆಯ ಗೌರವಾಧ್ಯಕ್ಷ ಪ್ರವಿಣ ಹಬೀಬ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಕ್ರಾಂತಿಸೇನಾ ಸಂಟನೆ ಹಾಗೂ ಸಂಗೋಳ್ಳಿ ರಾಯಣ್ಣನ ಅಭಿಮಾನಿಗಳಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೆರವಣಿಗೆಯು ಕಿತ್ತೂರ ಚೆನ್ನಮ್ಮ ಸರ್ಕಲ್ ನಿಂದ ಅರಂಭವಾಗಿ, ಪೋಸ್ಟ್ ಆಫೀಸ್ ಮುಂಬಾಗ, ಪಂಚರೌಂಡ್, ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ನಡೆಯಲಿದೆ ಎಂದರು.
ಕಿರಣ ನಾಯ್ಕರ, ಪ್ರದಿಪ್ ಸರ್ವಾದೆ, ರಾಮು ಗಡಾದ, ಕುಮಾರ ಮಾರನಬಸರಿ, ಶ್ರೀಕಾಂತ ಹೊಸಮನಿ ಇದ್ದರು.
TAGGED:*ಗದಗ