ಎಲ್ಲಾ ದಾನಕ್ಕಿಂತ ಮತದಾನ ಪವಿತ್ರವಾದ ಕಾರ್ಯ: ಹಿಡ್ಕಿಮಠ
ಗದಗ: ದಾನದಲ್ಲಿಯೇ ಶ್ರೇಷ್ಠದಾನ ಮತದಾನವಾಗಿದ್ದು ಎಲ್ಲಾ ದಾನಕ್ಕಿಂತ ಮತದಾನ ಪವಿತ್ರವಾದ ಕಾರ್ಯವಾಗಿದೆ ಎಂದು ಉಪನ್ಯಾಸಕ ಗಂಗಾಧರ್ ಹಿಡ್ಕಿಮಠ ಅವರು ಹೇಳಿದರು.
ಡಾ. ಪುಟ್ಟರಾಜ ಗವಾಯಿಗಳವರ ಅಂದರ ಶಿಕ್ಷಣ ಸಮಿತಿಯ ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಮತದಾರರ ದಿನಾಚರಣೆ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ಪ್ರತಿಯೊಬ್ಬ ಪ್ರಜೆಯೂ ಮತದಾನದ ಮಹತ್ವವನ್ನು ಅರಿತುಕೊಳ್ಳಬೇಕು ಫಲಾ ಅಪೇಕ್ಷೆ ಇಲ್ಲದೆ ಮತದಾನ ಮಾಡುವುದು ಒಂದು ಶ್ರೇಷ್ಠವಾದ ಕಾರ್ಯವಾಗಿದ್ದು ಪ್ರತಿಯೊಬ್ಬರು ಮತದಾನ ಮಾಡುವುದರ ಜೊತೆಗೆ ಎಲ್ಲರಿಗೂ ಮತದಾನದ ಜಾಗೃತಿಯನ್ನು ಮೂಡಿಸಬೇಕು ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹಾಗೂ ಮತದಾರರಿಗೆ ಅತ್ಯಂತ ಗೌರವ ಸ್ಥಾನವನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಖ್ಯಾತ ವೈಲಿನ್ ವಾದಕ ಹಾಗೂ ಉಪನ್ಯಾಸಕರಾದ ಡಾ ಎನ್ ವಿ ಅಕ್ಕಸಾಲಿ ಅವರು ಮಾತನಾಡಿ ಡಾ. ಪುಟ್ಟರಾಜ ಕವಿ ಗವಾಯಿಗಳವರು ಮತದಾನ ದಿನದಂದು ಬೇಗನೆ ಸಿದ್ದರಾಗಿ ಇಂದು ಮತದಾನ ಇದೆ ಎಂದು ಮತದಾನ ಸ್ಥಳಕ್ಕೆ ಹೋಗಿ ತಪ್ಪದೇ ಮತದಾನ ಮಾಡುತ್ತಿದ್ದರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತದಾನ ಮಾಡುವುದು ಒಂದು ಶ್ರೇಷ್ಠ ಕಾರ್ಯ ಎಂದು ತಿಳಿದು ತಪ್ಪದೇ ಮತದಾನ ಮಾಡಬೇಕು ಮತ್ತು ಮತದಾನದ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮೃತ್ಯುಂಜಯ ಮಠದ, ವಾ ಯರ್ ಮೂಲಿಮನಿ , ವಿರುಪಾಕ್ಷಿ ಪಟ್ಟದಕಲ್, ವಿ ಕೆ ಜೋಶಿ, ಬಿ ಹೆಚ್ ಜೋಕ್ ರೆಡ್ಡಿ, ಹರ್ಷತ್ ಕುಮಾರ್, ರಂಜಿತಾ ಬಡಿಗೇರ್, ಎಂ ಎಂ ಎಮ್ಮಿ ಎವರ್, ಪವಾರ್, ಶಿವಯೋಗಿ ಹಿರೇಮಠ್, ಉಪಸ್ಥಿತರಿದ್ದರು,
TAGGED:*ಗದಗ