26ಲಕ್ಷ ರೂ. ಹಣ ಸೀಜ್ ಕೇಸ್: ಮನನೊಂದ ಸಂಗಮೇಶ ಆತ್ಮಹತ್ಯೆಗೆ ಯತ್ನ!

blank
ಗದಗ: ಬಡ್ಡಿ ದಂಧೆಯ ಆರೋಪದಲ್ಲಿ ಪೊಲೀಸರಿಂದ 26 ಲಕ್ಷ ರೂಪಾಯಿ ಹಣ ಸೀಜ್ ಪ್ರಕರಣದಲ್ಲಿ ಇದೀಗ ತಿರುವು ಸಿಕ್ಕಿದ್ದು, ಮಗುವಿನ ಲಿವರ್ ಚಿಕಿತ್ಸೆಗೆ ತಂದಿಟ್ಟಿದ್ದ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇದರಿಂದಾಗಿ ಸಂಗಮೇಶ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಸಂಗಮೇಶ ದೊಡ್ಡಣ್ಣವರ್ ನಿನ್ನೆ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗದಗ ನಗರದ ಕಾಶಿ ವಿಶ್ವನಾಥ ಕಾಲೋನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ರಕ್ಷಣೆ ಮಾಡಿ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಎಸ್ ಡಿ ಎಂ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆನ್ನು ಮೂಳೆ ಕಟ್ ಆಗಿರೋ ಸಾಧ್ಯತೆ ಇದ್ದು, ಸಂಗಮೇಶ್ ಸ್ಥಿತಿ ಚಿಂತಾಜನಕವಾಗಿದೆ.
ಸೀಜ್ ಮಾಡಿರೋ ಹಣ ಬಡ್ಡಿ ದಂಧೆಯದ್ದಲ್ಲ, ಮಗನ ಚಿಕಿತ್ಸೆಗೆ ಹೊಂದಿಸಿದ್ದ ಹಣ ಅಂತ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗಮೇಶನ ಮಗನ ಲಿವರ್ ಆಪರೇಷನ್‌ ಗಾಗಿ 25 ಲಕ್ಷ ರೂ  ಹಣ ಹೊಂದಿಸಲಾಗಿತ್ತು. ಆದರೆ  ಹಣ ಸೀಜ್ ಆಗಿದ್ದಕ್ಕೆ ಸಂಗಮೇಶ ಮನನೊಂದಿದ್ದ ಎನ್ನಲಾಗಿದೆ.
ಕಳೆದ ಫೆ.9ನೇ ತಾರೀಖು ಗದಗ- ಬೆಟಗೇರಿ ಅವಳಿ ನಗರದ 12 ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿದ್ದು,
ದಾಳಿ ವೇಳೆ ಸಂಗಮೇಶ್ ಮನೆಯಲ್ಲಿ 26 ಲಕ್ಷ 57 ಸಾವಿರ ನಗದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದರು. ಅಂದು ಸಂಗಮೇಶ್ ಸೇರಿದಂತೆ 12 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
TAGGED:
Share This Article

ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಒಮ್ಮೆ ಹೀಗೆ ಮಾಡಿ ನೋಡಿ..Gastric Problem

Gastric Problem: ಪ್ರಸ್ತುತ ಯುಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಅನೇಕ ಜನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಅನಾರೋಗ್ಯಕರ…

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…

ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…