ಮೌಲ್ಯವೇ ಜನಪದ ಸಾಹಿತ್ಯ: ಜ್ಯೋತಿರ್ಲಿಂಗ ಹೊಸಕಟ್ಟಿ

blank

ವಿಜಯವಾಣಿ ಸುದ್ದಿಜಾಲ ಗದಗ
ಭಾರತದದಲ್ಲಿ ಕೃಷಿ ಪ್ರಾಧ್ಯನತೆ ಇರುವುದರಿಂದ ಜಾನಪದವು ಹುಟ್ಟಿನಿಂದ ಸಾಯುವವರೆಗೂ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜನಪದದಲ್ಲಿ ನವರಸಗಳು ತುಂಬಿವೆ. ಜನಪದ ಒಳ್ಳೆಯ ಸಂಸ್ಕಾರವನ್ನು ನೀಡುತ್ತದೆ ಎಂದು ಬೆಂಗಳೂರಿನ ಸಿಸಿಬಿ ವಿಭಾಗದ ಸಿಪಿಐ ಜ್ಯೋತಿರ್ಲಿಂಗ ಹೊಸಕಟ್ಟಿ ಹೇಳಿದರು.
ನಗರದ ಕನಕದಾಸ ಶಿಣ ಸಮಿತಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪದ ಸಾಹಿತ್ಯ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ನಮ್ಮ ಸಂಸತಿಯ ಮೂಲ ಬೇರುಗಳು ಜನಪದ ಸಾಹಿತ್ಯದಲ್ಲಿವೆ. ಹಳಸದೇ ಇರುವ ಸಾಹಿತ್ಯವೆಂದರೇ ಅದು ಜನಪದ ಸಾಹಿತ್ಯ. ಅಲ್ಲಿನ ಒಳ್ಳೆಯ ಸಂಸ್ಕಾರವನ್ನು ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕಾರವಿಲ್ಲದ ಬದುಕು ವ್ಯರ್ಥ ಎಂದರು.
ಜನಪದ ಸಾಹಿತ್ಯಕ್ಕೆ ತ್ರಿಪದಿಗಳ ಕೊಡುಗೆ ಅಪಾರವಾಗಿದೆ. ಅದು ಜನಪದರ ನಾಲಿಗೆಯ ಮೇಲೆ ಸದಾಕಾಲ ರಾರಾಜಿಸುತ್ತದೆ. ತ್ರಿಪದಿಗಳು ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಜೀವನದಲ್ಲಿ ಯಾವುದೂ ಶಾಸ್ವತವಲ್ಲ. ಏರಿಳಿತಗಳು ಇದ್ದೇ ಇರುತ್ತವೆ. ಎದೆ ಗುಂದದೇ ಛಲದಿಂದ ಮುನ್ನುಗ್ಗಬೇಕು. ಶಿಣ ಕಲಿತವರು ಭ್ರಷ್ಟರಾಗಬಹುದು. ಆದರೆ, ಒಳ್ಳೆಯ ಶಿಣದ ಜೊತೆಗೆ ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗಲಾರರು. ಯಾವ ವಿಶ್ವವಿದ್ಯಾಲಯಗಳು ಕೊಡದ ಶಿಣವನ್ನು ಬಡತನ ಮತ್ತು ಹಸಿವು ಕೊಡುತ್ತವೆ ಎಂದು ಹೇಳಿದರು.
ಕನಕದಾಸ ಶಿಣ ಸಮಿತಿಯ ಕಾರ್ಯದಶಿರ್ ರವೀಂದ್ರನಾಥ ದಂಡಿನ ಮಾತನಾಡಿ, ಬದುಕನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ತಾಂತ್ರಿಕ ಜ್ನಾನವನ್ನು ವಿದ್ಯಾಥಿರ್ಗಳು ಬಳಸಿಕೊಳ್ಳಬೇಕು. ಈ ತಾಂತ್ರಿಕ ಜ್ಞಾನದ ಜೊತೆಗೆ, ಕನ್ನಡ ಸಾಹಿತ್ಯ ಮತ್ತು ಜನಪದ ಸಾಹಿತ್ಯದಲ್ಲಿಯ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ನಾಗರಿಕ ಆಗಬೇಕು. ಬದುಕಿನಲ್ಲಿ ಮಹತ್ತರವಾದ ಸಾಧನೆ ಮಾಡಬೇಕಾದರೆ ಒಳ್ಳೆಯ ಗುರಿ ಇಟ್ಟುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ಡಾ. ಡಿ. ಬಿ. ಗವಾನಿ, ಡಾ. ಜಿ. ಸಿ. ಜಂಪಣ್ಣನವರ, ಪ್ರೊ. ಎಸ್​. ಎಸ್​. ರಾಯಕರ, ಪ್ರೊ. ಐ. ಕೆ. ಪಟ್ಟಣಶೆಟ್ಟಿ, ಡಾ. ಎ. ಕೆ. ಪೂಜಾರ, ಪ್ರೊ. ಸತೀಶ ಅಳಗುಂಡಗಿ. ಪ್ರೊ, ರೇವಡಕುಂದಿ ಇತರರು ಇದ್ದರು.

 

TAGGED:
Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…