ವಿಜಯವಾಣಿ ಸುದ್ದಿಜಾಲ ಗದಗ
ನೇಕಾರರಿಗೆ, ಜವಳಿ ಉತ್ಪಾದಕರಿಗೆ ಸರ್ಕಾರ ಪ್ರೋತ್ಸಾಹ, ಸೌಲಭ್ಯ ನೀಡುವ ಮೂಲಕ ಪಾರಂಪರಿಕ ವೃತ್ತಿ ಮುನ್ನಡೆಗೆ ಅನುಕೂಲ ವಾತಾವರಣ ನಿಮಿರ್ಸಬೇಕು ಎಂದು ಜವಳಿ ಉತ್ಪಾದಕ ಬಲರಾಮ ಬಸವಾ ಹೇಳಿದರು.
ಬಸವಾ ಸಮೂಹ ಸಂಸ್ಥೆಯಿಂದ ಬೆಟಗೇರಿಯ ಮಗ್ಗದ ಮನೆಯ ಪ್ರಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಾರಂಭದಲ್ಲಿ ಹಿರಿಯ ಕೈಮಗ್ಗ ನೇಕಾರರನ್ನು ಗೌರವಿಸಿ ಮಾತನಾಡಿದರು.
ನೇಕಾರಿಕೆ ಮತ್ತು ಜವಳಿ ಉತ್ಪಾದನೆಗೆ ದೇಶದಲ್ಲಿಯೇ ಗದಗ, ಬೆಟಗೇರಿ ನಗರ ಹೆಸರಾಗಿತ್ತು. ದೆಹಲಿಯ ಕೆಂಪುಕೋಟೆಯ ಮೇಲೆ ವಿರಾಜಮಾನವಾಗಿ ಹಾರಾಡಿದ ತ್ರಿವರ್ಣ ಧ್ವಜ ಬೆಟಗೇರಿಯ ನೇಕಾರರು ನೇಯ್ದಿದ್ದರು ಎಂಬುದು ಇತಿಹಾದ. ನಾಲ್ಕೆದು ತಲೆಮಾರಿನಿಂದ ಸಾಗಿ ಬಂದಿರುವ ಕೈಮಗ್ಗ ಕಸುಬು ಕಾಲಕ್ರಮೇಣ ಸುಧಾರಿಸುತ್ತ ಬಂದು ಆಧುನಿಕತೆಯ ಭರಾಟೆಯಲ್ಲಿ ಪವರ್ಲೂಮ್ ಆಗಿ ಪರಿವರ್ತನೆಗೊಂಡಿವೆ. ಆಧುನಿಕತೆಯ ಭರಾಟೆಯಲ್ಲಿ ಕೈಮಗ್ಗಗಳು ಬೆಟಗೇರಿಯಲ್ಲಿ ಇನ್ನೂ ಜೀವಂತಿಕೆ ಆಗಿವೆ ಎಂಬುದು ಹೆಮ್ಮೆ ಎಂದರು.
ಸರ್ಕಾರವು ನೇಕಾರರಿಗೆ ನೀಡುವ ಸನ್ಮಾನ ನಿಧಿಯನ್ನು 5 ಸಾವಿರದಿಂದ 20 ಸಾವಿರಕ್ಕೇ ಹೆಚ್ಚಿಸಬೇಕು. 60 ವರ್ಷ ಮೇಲ್ಪಟ್ಟ ನೇಕಾರ ಕುಟುಂಬಕ್ಕೆ ಭವಿಷ್ಯ ನಿಧಿ ರೂಪಿಸಬೇಕು. ನೇಕಾರರ ಮಕ್ಕಳಿಗೆ ಉನ್ನತ ಶಿಣದವರೆಗೆ ಸರ್ಕಾರ ಉಚಿತ ಶಿಣ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಲಕ್ಷಿ$್ಮ ಶ್ಯಾವಿ, ಪಿತಾಂಬರವ್ವ ಮಾದಗುಂಡಿ, ಪರಶುರಾಮ ಮೈಲಿ, ಪಾಂಡಪ್ಪ ಮಾದಗುಂಡಿ, ಶಾಂತಾ ಭೂಮಪಲ್ಲಿ ಅವರನ್ನು ಸನ್ಮಾನಿಸಲಾಯಿತು.
ಸಂಕಣ್ಣ ಹಾದಿಮನಿ, ತುಕಾರಾಮ ಕಬಾಡಿ, ನಾಗಪ್ಪ, ಸುಭಾಸ, ಲತಾ, ಶ್ರನಿವಾಸ, ಕೃಷ್ಣಾ ಹಲವರು ಇದ್ದರು.
ನೇಕಾರಿಗೆ ಸರ್ಕಾರ ಪ್ರೋತ್ಸಾಹ, ಸೌಲಭ್ಯ ನೀಡಲಿ: ಬಲರಾಮ
ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್ ಬರೋದು ಪಕ್ಕಾ! ಇರಲಿ ಎಚ್ಚರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…