blank

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅರ್ಥರ್ಪೂಣ: ನೀಲಮ್ಮ ತಾಯಿ

blank

ಗದಗ: ಮಾರ್ಚ ತಿಂಗಳ ಜಗತ್ತಿನಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸ್ತ್ರೀಯರ ವ್ಯಕ್ತಿತ್ವವನ್ನು ಕುರಿತು ಸಂಭ್ರಮದಿಂದ ಎಲ್ಲ ದೇಶಗಳಲ್ಲಿ ಆಚರಿಸುವುದು ಶ್ಲಾನೀಯ ಎಂದು ಆಧ್ಯಾತ್ಮ ವಿದ್ಯಾಶ್ರಮದ ನೀಲಮ್ಮ ತಾಯಿ ಅಸುಂಡಿ ಹೇಳಿದರು.
ಅರಸಿಕೇರಿ ತಾಲೂಕಿನ ಕೋಡಿ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ತ್ರೀಯರ ಮಹತ್ವವನ್ನು ಕುರಿತು- ಶ್ರೀರಾಮಚಂದ್ರ “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು ಹೇಳಿದ್ದಾರೆ. ಮನು ಮಹಷಿರ್ಗಳು “ಯತ್ರನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ’ ಎಂದು ಹೇಳಿದ್ದಾರೆ. ಗಾಂಧೀಜಿಯವರು “ಅಹಿಂಸೆ ಬಾಳಿನ ಧರ್ಮವಾದರೆ ಭವಿಷ್ಯ ಮಹಿಳೆಗೆ ಮೀಸಲು’ ನುಡಿದ್ದಿದ್ದರು ಎಂದು ನೀಲಮ್ಮ ತಾಯಿ ಅವರು ಹೇಳಿದರು.
ಶರಣರು “ಹೆಣ್ಣು ಹಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ ಕಪಿಲಸಿದ್ಧಮಲ್ಲಿಕಾರ್ಜುನಾ’ ಎಂದು ಹೇಳಿ ಸ್ತ್ರೀ ಕುಲಕ್ಕೆ ಗೌರವ ತೋರಿಸಿದರು. ಹೀಗೆ ಭಾರತೀ ಸಂಸತಿಯಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಸ್ಥಾನ ಮಾನ ನೀಡುತ್ತ ಬಂದಿದ್ದಾರೆ. ವೇದಗಳ ಕಾಲದಲ್ಲಿ ಕೆಲವೇ ಕೆಲವು ಸ್ತ್ರೀಯರು ವ್ಯಕ್ತಿಗತವಾಗಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮುಂದೆ ಬಂದರು. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಸ್ತ್ರೀಕುಲವನ್ನು ಎತ್ತಿ ಹಿಡಿದರು. ಅದರ ಪರಿಣಾಮವಾಗಿ ಮಹದೇವಿಯಕ್ಕ, ಮುಕ್ತಾಯಕ್ಕನಂತಹ ಶಿವಶರಣೆಯರನ್ನು ಅನುಭವ ಮಂಟಪ ಸ್ವಾಗತಿಸಿತು. 33 ಜನ ವಚನಕಾತಿರ್ಯರು ಹೊರಹೊಮ್ಮಿದರು ಎಂದರು.
ಶಿವಾನಂದ ರಾಜಯೋಗೀಂದ್ರ ಶ್ರೀಗಳು, ಕೋಡಿಮಠ ಹಾರನಹಳ್ಳಿ ಶ್ರೀಗಳು, ಕಲ್ಲಿನಾಥ ಶಾಸ್ತ್ರಿಗಳು ಇದ್ದರು.

 

TAGGED:
Share This Article

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…