More

    ಗದಗ ನಗರಸಭೆಯಲ್ಲಿ ಆಪರೇಷನ್ ಕಾಂಗ್ರೆಸ್?

    ಶಿವಾನಂದ ಹಿರೇಮಠ ಗದಗ
    ಕಾಂಗ್ರೆಸ್‌ಗಿಂತ ಕೇವಲ ಒಂದೇ ಒಂದು ಅಧಿಕ ಸದಸ್ಯ ಬಲದಿಂದ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಈಗ ಅಧಿಕಾರ ಕೈತಪ್ಪುವ ಭೀತಿ ಎದುರಾಗಿದೆ. ಚುನಾವಣೆಯಲ್ಲಿ ಎಚ್.ಕೆ. ಪಾಟೀಲ ಜಯಭೇರಿ ಬಾರಿಸುತ್ತಿದ್ದಂತೆ ಬಿಜೆಪಿಗೆ ಮರ್ಮಾಘಾತ ನೀಡಲು ಕಾಂಗ್ರೆಸ್ ಯುದ್ಧಭೂಮಿಯನ್ನು ಸನ್ನದ್ಧುಗೊಳಿಸಿದೆ. ಹೀಗೊಂದು ಮಾತು ನಗರಸಭೆ ವಲಯದಲ್ಲಿ ಆರ್ಭಟಿಸುತ್ತಿದೆ.
    ಹೌದು. ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗುತ್ತಿದ್ದಂತೆ ಈ ವಿಷಯ ಈಗ ಮುನ್ನೆಲೆಗೆ ಬಂದಿದೆ. ಬಿಜೆಪಿಯ ಕೆಲಸ ಸದಸ್ಯರಿಗೂ ಈ ವಿಷಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಪಕ್ಷದ್ರೋಹ ಎಸಗಿದ ಸದಸ್ಯರೇ ಪಕ್ಷಾಂತರ ಆಗಲಿದ್ದಾರೆ ಎಂಬು ಮಾತುಗಳು ಕೇಳಿ ಬರುತ್ತಿವೆ.
    ಚುನಾವಣೆ ಪೂರ್ವದಲ್ಲೇ ಕೆಲ ಬಿಜೆಪಿ ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ಸದಸ್ಯರು ಸಲರಾಗಿದ್ದರು. ನಗರಸಭೆಯಲ್ಲಿ ಬಿಜೆಪಿಯ ಅತೃಪ್ತ ಸದಸ್ಯರ ದೊಡ್ಡ ಬಳಗವೇ ಇದೆ. ಅವರನ್ನು ‘ಪಕ್ಷಾಂತರ’ಗೊಳಿಸುವ ಕಾಮಗಾರಿಗೆ ಗುದ್ದಲಿ ಪೂಜೆಯೂ ಸುಸುತ್ರವಾಗಿ ಜರುಗಿತ್ತು. ಈ ವಿಷಯ ಗುಟ್ಟಾಗೇನೂ ಉಳಿದಿರಲಿಲ್ಲ.
    ಆದರೆ, ಜಿಲ್ಲಾ ಕಾಂಗ್ರೆಸ್ ಮಖಂಡರೇ ಈ ಪ್ರಕ್ರಿಯೆಗೆ ತಡೆ ನೀಡಿದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಿರುವಂತೆ ಸಂದೇಶ ನೀಡಿದ್ದರು. ನಗರಸಭೆಯಲ್ಲಿ ಬಿಜೆಪಿ ಆಡಳಿತ ಇರುವ ಕಾರಣ ನಗರದಲ್ಲಿ ಆಡಳಿತ ವಿರೋಧಿ ಅಲೆ ಉಲ್ಭಣಗೊಂಡಿದೆ ಎಂದು ಗಮನಿಸಿದ್ದ ಕಾಂಗ್ರೆಸ್ ಮುಖಂಡರು ತಾಳ್ಮೆ ವಹಿಸಿದ್ದರು. ತಾಳ್ಮೆಯ ಲ ಪಡೆದ ಕಾಂಗ್ರೆಸ್ಸಿಗೆ ಈಗ ಹಾದಿ ಸುಗಮಗೊಂಡಿದೆ.
    ಗದಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ ಜಯಭೇರಿ ಬಾರಿಸುತ್ತಿದ್ದಂತೆ ಬಿಜೆಪಿಯ ಅತೃಪ್ತರಿಗೂ ಅನುಕೂಲ ವಾತಾವರಣ ಸೃಷ್ಟಿಯಾಗಿದೆ. ಸಂಪುಟ ರಚನೆಯಾಗಿ ಸರ್ಕಾರ ಸೂಸುತ್ರವಾಗಿ ನಡೆಯುತ್ತಿದ್ದಂತೆ ಇತ್ತಕಡೆ ನಗರಸಭೆ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಹಸಿರು ನಿಶಾನೆ ತೋರಲಾಗುತ್ತದೆ ಎಂದು ಕಾಂಗ್ರೆಸ್ ವಲಯ ಖಚಿತಪಡಿಸಿವೆ. ಇನ್ನು ನಗರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದರೆ ಲಾಭ-ನಷ್ಟದ ತುಲನಾತ್ಮಕ ಚರ್ಚೆಯಲ್ಲೂ ಕಾಂಗ್ರೆಸ್ ಸದಸ್ಯರು ತೊಡಗಿದ್ದಾರೆ.
    ಬಿಜೆಪಿ ಸದಸ್ಯರ ಒಳಒಪ್ಪಂದ?
    ಬಿಜೆಪಿಯ ಕೆಲ ನಗರಸಭೆ ಸದಸ್ಯರು, ಎರಡನೇ ಹಂತದ ನಾಯಕರು ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ ಎಂಬ ಮಾತುಗಳನು ಬಿಜೆಪಿ ವಲಯದಲ್ಲೇ ಪರಾಮರ್ಶೆಗೆ ನಾಂದಿ ಹಾಡಿದೆ. ನಗರಸಭೆ ಕೆಲ ಬಿಜೆಪಿ ಸದಸ್ಯರ ನಡವಳಿಕೆಯೂ ಕೂಡ ಇದಕ್ಕೆ ಪೂರಕವೆಂಬಂತೆ ಬಿಂಬಿತವಾಗುತ್ತಿವೆ. ಬಿಜೆಪಿಯಲ್ಲಿರುವ ವಿರೋಧಿ ಬಳಗವು ಚುನಾವಣೆ ನಂತರ ಬಿಜೆಪಿ ಅಭ್ಯರ್ಥಿಯಡೆಗೆ ಸುಳಿಯುತ್ತಿಲ್ಲ ಎಂಬುದು ಹಲವು ಸದಸ್ಯರ ವಾದ. ಕಾಂಗ್ರೆಸ್ ಕೂಡ ಪ್ರಮುಖ 5 ಸದಸ್ಯರಿಗೆ ಬಲೆ ಬೀಸಿದ್ದು, ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಜತೆಗೆ ಒಡಂಬಡಿಕೆ ಕುದಿರಿಸಿದ್ದಾರೆ ಎಂದು ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಚರ್ಚೆಯಾಗಿದೆ.

    ಕಾಂಗ್ರೆಸ್ಸಿಗೆ ಲಾಭ/ನಷ್ಟ:

    • ನಗರಸಭೆ ತೆಕ್ಕೆಗೆ. ಡಂಬಲ್ ಇಂಜಿನ್ ಸರ್ಕಾರ ಸ್ಥಾಪನೆ
    • ಕಾಂಗ್ರೆಸ್ ಶಾಸಕರೇ ಇರುವ ಹಿನ್ನೆಲೆ ಆಡಳಿತದ ಮೇಲೆ ಹಿಡಿತ
    • ಲೋಕಸಭಾ ಚುನಾವಣೆ ಇರುವ ಹಿನ್ನೆಲೆ ಆಡಳಿತ ವಿರೊಧಿ ಅಲೆ ಸಾಧ್ಯತೆ
    • ನೀರಿನ ಸಮಸ್ಯೆ ಬಗೆಹರಿಸುವ ಸವಾಲು

    ಬಿಜೆಪಿಗೆ ಲಾಭ/ನಷ್ಟ

    • ಚುನಾವಣೆ ಪರಾಭವ ಹಿನ್ನೆಲೆ ಆಡಳಿತದಿಂದ ದೂರ ಸರಿಯುವ ಲೆಕ್ಕಾಚಾರ
    • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬುಗಿಲೇಳಲು ಅಸ
    • ಆಪರೇಷನ್ ಕಾಂಗ್ರೆಸ್‌ನಿಂದ ಭವಿಷ್ಯದಲ್ಲಿ ಪಕ್ಷ ಸಂಘಟನೆ ಅಸಾಧ್ಯ
    • ಎರಡನೇ ಹಂತದ ನಾಯಕರು ಪಕ್ಷದಿಂದ ದೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts