ಗುರುವಿನ ಕಾಂತಿಯಿಂದಲೇ ಜಗತ್ತು ಪ್ರಕಾಶಿಸುತ್ತಿರುವುದು: ನೀಲಕಂಠೇಶ್ವರ ಶ್ರೀ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಮುಕ್ಕಣ್ಣೇಶ್ವರ ಮಠದಲ್ಲಿ ಮುಕ್ಕಣ್ಣೇಶ್ವರ ಶ್ರೀಗಳ 100ನೇ ಪುಣ್ಯಾರಾಧನೆ ನಿಮಿತ್ಯ ಸೋಮವಾರ 5ನೇ ದಿನದ ಚರಿತಾಮೃತ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮ ಜರುಗಿತು
ಸಾನ್ನಿಧ್ಯ ವಹಿಸಿದ್ದ ನೀಲಕಂಠ ಶ್ರೀಗಳು ಮಾತನಾಡಿ, ಸದ್ಗುರುವಿನಿಂದಲೇ ಜಗವು ಸ್ಥಿರವಾಗಿ ಕಾಣುವುದು. ಸ್ವಯಂ ಪ್ರಕಾಶನಾದ ಗುರುವಿನ ಕಾಂತಿಯಿಂದಲೇ ಜಗತ್ತು ಪ್ರಕಾಶಿಸುತ್ತಿದೆ. ಸರ್ವರೂ ಆನಂದ ರೂಪಿಯಾದ ಗುರುವಿನಿಂದಲೇ ಸಂತೋಷವಾಗಿದ್ದಾರೆ. ಗುರುಶಕ್ತಿಯೇ ಪರಬ್ರಹ್ಮಶಕ್ತಿಯು. ಗುರುಸ್ವರೂಪವೇ ಬ್ರಹ್ಮಸ್ವರೂಪವು. ಗುುನಾಥನು ವಾಸವಾಗಿರುವ ಸ್ಥಳವು ಕಾಶೀಯಂತೆಯು, ಆತನ ಪಾದತೀರ್ಥವು ಗಂಗೆಯಂತೆಯು, ಗುರುವಿನ ನಿಜರೂಪವ ವಿಶ್ವನಾಥನ ಸ್ವರೂಪವೇ ಆಗಿದೆ ಎಂದು ಹೇಳಿದರು.
ಮಾತೋಶ್ರಿ ಮುಕ್ತಾತಾಯಿ ಪ್ರವಚನ ನೀಡಿ, ಜನ್ಮಗಳ ಪುಣ್ಯದ ಲದಿಂದ ಭೂಮಿಗೆ ಸಂತರ ಜನ್ಮವಾಗುತ್ತದೆ. ಸದ್ಗುರು ಮುಕ್ಕಣ್ಣೇಶ್ವರರು ಶಿವನ ಆಣತಿಯಂತೆ ಭೂಮಿಗೆ ಬಂದು ಗುರುವಿನ ಆಶೀರ್ವಾದ ಮತ್ತು ಅನುಗ್ರಹ ಪಡೆದುಕೊಂಡು ಸಂಚಾರ ಮಾಡುತ್ತ ಗದುಗಿಗೆ ಬಂದು ಜಪ ಅನುಷ್ಠಾನ ದೇವಿ ಪುರಾಣ ಪಾರಾಯಣ ಮಾಡಿ ಜಗನ್ಮಾತೆಯಾದ ಕರಿಯಮ್ಮ ದೇವಿಯನ್ನು ಸಾಾತ್ಕರಿಸಿಕೊಂಡು ಇಲ್ಲಿ ಬರುವಂತ ಭಕ್ತರ ಅಭಿಲಾಷೆಗಳನ್ನು ಈಡೇರಿಸುವಂತೆ ಪ್ರಾರ್ಥನೆ ಮಾಡಿದರು. ಸಂತರ ಚರಿತ್ರೆ ಕೇಳುವದರಿಂದ ಕಿವಿ ಪಾವನವಾಗುತ್ತವೆ. ಕಣ್ಣು ಶುದ್ಧವಾಗುತ್ತವೆ. ಮನಸ್ಸು ಶುದ್ಧಿಯಾಗಿ ತಿಳಿಯಾಗುತ್ತದೆ ಎಂದರು.
ಶರಂಕರಾನಂದ ಶ್ರೀಗಳು ಮಾತನಾಡಿ, ಸಕಲಕ್ಕೂ ಸದ್ಗುರುನಾಥನು ಆದಿಯಿರುವನು. ಗುರುವಿಗಿಂತ ಆದಿಯೂ ಯಾವುದೂ ಇಲ್ಲ. ಗುರುವಿಗಿಂತ ಹಿರಿದಾದ ದೈವತವಿಲ್ಲ. ಅದಕ್ಕಾಗಿ ಸದ್ಗುರುವು ಜಗದಲ್ಲಿ ಶ್ರೇಷ್ಠನಿರುವನು ಎಂದರು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ನಾಲ್ಮಡಿ ಶ್ರೀನಿಲಕಂಠ ಪಟ್ಟದಾರ್ಯ ಶ್ರೀಗಳು, ಗುರುಬಸಯ್ಯ ಗಡ್ಡದಮಠ, ಶ್ರೀಕಾಂತ ಹೂಲಿ, ಜಿ. ಜಿ. ಕುಲಕಣಿರ್, ಸಿ. ಕೆ. ಮಾಳಶೆಟ್ಟರ, ಐ. ಬಿ. ಮೈದರಗಿ ಇತರರು ಇದ್ದರು.