More

    ತಂಬಾಕು ಮುಕ್ತಿಗೆ ಸಹಕಾರ ಅಗತ್ಯ: ಡಾ. ಗೋಪಾಲ ಸುರಪುರ

    ಗದಗ : ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರ ಸಹಕಾರ ಅಗತ್ಯವಾಗಿದೆ. ತಂಬಾಕಿನಿಂದ ಆರೋಗ್ಯದ ಮೇಲೆ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸಿಕೊಂಡು ಇತರರಿಗೂ ತಿಳಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು  ಜಿಲ್ಲಾ  ಸಲಹೆಗಾರರು  ರಾಷ್ಟ್ರೀಯ  ತಂಬಾಕು ನಿಯಂತ್ರಣಾ ಕೋಶದ ಅಧಿಕಾರಿ ಡಾ. ಗೋಪಾಲ ಸುರಪುರ ಹೇಳಿದರು. 

    ಶಹರದ ಕೆ.ಎಲ್.ಇ ಸಂಸ್ಥೆಯ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಕಾಲೇಜಿನ ಎನ್.ಎಸ್.ಎಸ್. ಘಟಕ ಮತ್ತು ಯೂತ್ ರೇಡ್ ಕ್ರಾಸ್ ವತಿಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

    ಕೆಡುಕಿಗೆ ಆಕರ್ಷಣೆ ಹೆಚ್ಚು. ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ, ಇದು ಕೇವಲ ಜೀವನ ನಷ್ಟವಷ್ಟೇ ಆಲ್ಲ; ಆರ್ಥಿಕ ನಷ್ಟವನ್ನೂ ತರುತ್ತದೆ ಎಂದು ಹೇಳಿದರೂ ಧಮ್‌ ಹೊಡೆಯುವವರ ಪ್ರಮಾಣವೇನೂ ಕಡಿಮೆಯಾಗಿಲ್ಲ.  ಅಚ್ಚರಿಯ ವಿಷಯವೆಂದರೆ ಪ್ರತಿವರ್ಷ ಧೂಮಪಾನದ ಚಟಕ್ಕೆ ಬಹುಬೇಗ ಒಲಿಯುವವರ ವಯಸ್ಸಿನಲ್ಲಿ ತೀವ್ರ ಇಳಿತವಾಗುತ್ತದೆ.ಯುವಕ-ಯುವತಿ ಯರು ವಿದೇಶಿ ಸಿಗರೇಟ್‌ ಸೇದುವುದು ಸ್ಟೈಲ್‌ ಎಂದು ಭಾವಿಸಿ ಅವುಗಳಿಗೆ ದಾಸರಾಗುತ್ತಿದ್ದಾರೆ. ತಮ್ಮ ಆರೋಗ್ಯದ ಜೊತೆಗೆ, ಇನ್ನಿತರರ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. 

    ಸಾರ್ವಜನಿಕವಾಗಿ ತಂಬಾಕು ಬಳಕೆ ನಿಷೇಧ: ಸಿಗರೇಟ್ ಮತ್ತು 

     ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಪ್ರಕಾರ ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ಹೋಟೆಲ್ಗಳು, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು, ಚಲನಚಿತ್ರ ಮಂದಿರಗಳು ಮತ್ತಿತರ ಪ್ರದೇಶಗಳಲ್ಲಿ ತಂಬಾಕು ಸೇವನೆ ಮತ್ತು ಮಾರಾಟ ನಿಷೇಧಿಸಲಾಗಿದೆ. ಹಾಗೊಮ್ಮೆ ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.

    ಕಟ್ಟುನಿಟ್ಟಿನ ಕಾನೂನು ಜಾರಿ: ತಂಬಾಕು ನಿಷೇಧಕ್ಕೆ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಪ್ರಾಣಕ್ಕೆ ಹಾನಿ ಉಂಟುಮಾಡುವಂತಹ ತಂಬಾಕು ಮತ್ತು ತಂಬಾಕಿನ ಇತರೆ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರದ ಸಂಸ್ಥೆಗಳು ಕಡಿವಾಣ ಹಾಕಬೇಕು. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಬೀಡಿ, ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆಯ ಸಂದೇಶಗಳು ಇದೆ. ಆದರೂ ಈ ಹಾನಿಕಾರಕ ವಸ್ತುಗಳ ಬಳಕೆಯ ಇರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ತಂಬಾಕು ಮತ್ತು ಅದರ ಉತ್ಪನ್ನಗಳಿಂದಾಗುವ ದುಷ್ಪರಿ ಣಾಮಗಳ ಕುರಿತು ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುವ ಅವಶ್ಯಕತೆ ಇದೆ ಎಂದರು.

    ಪ್ರಾಚಾರ್ಯರಾದ ಡಾ.‌ಎಸ್. ಆರ್. ಪಾಟೀಲ ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮೇ 31ನ್ನು ವಿಶ್ವ ತಂಬಾಕು ವಿರೋಧಿ ದಿನವನ್ನಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇಡೀ ವಿಶ್ವದಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಸಾಗುತ್ತಿದೆ. ಇಷ್ಟು ಅರಿವು ಮೂಡಿಸಿದರು ತಂಬಾಕು ಸೇವನೆ ತಪ್ಪಿಲ್ಲ, ಪ್ರಾಣ ಹಾನಿಯೂ ತಪ್ಪಿಲ್ಲ. ಇತ್ತೀಚೆಗೆ ಹುಕ್ಕಾ ಬಳಕೆ ಹೆಚ್ಚಾಗುತ್ತಿದ್ದು, ಯುವ ಸಮುದಾಯ ಈ ಆಕರ್ಷಣೆಯಿಂದ ದೂರ ಉಳಿಯಬೇಕು ಎಂದರು.

    ನಂತರ ನಡೆದ ವಿಶ್ವ ತಂಬಾಕು ರಹಿತ  ಜಾಥಾ ಕಾರ್ಯಕ್ರಮವು ಕಾಲೇಜಿನಿಂದ ಪ್ರಾರಂಭವಾಗಿ, ಹಾತಲಗೇರಿ ನಾಕಾ, ಚೇತನಾ ಕ್ಯಾಂಟೀನ್ ಸೇರಿದಂರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. 

    ಪ್ರಾಧ್ಯಾಪಕರಾದ ಜೈ ಹನುಮಾನ ಎಚ್.ಕೆ, ಎಸ್.ಟಿ. ಮೂರಶಿಳ್ಳಿನ, ಬಿ.ಎ. ಹಿರೇಮಠ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

    ದೈಹಿಕ ನಿರ್ದೇಶಕಾರ ಡಾ. ಸಿ.ಬಿ. ರಣಗಟ್ಟಿಮಠ ಸ್ವಾಗತಿಸಿದರು. ವಿದ್ಯಾರ್ಥಿ ಚೈತ್ರಾ ಗೌಡ್ರ ಪ್ರಾರ್ಥಿಸಿದರು. ವಿದ್ಯಾರ್ಥಿ ಬಸವರಾಜ ಗಾಂಜಿ ನಿರೂಪಿಸಿದರು. ಉಪನ್ಯಾಸಕರಾದ ಡಾ. ವಿಜಯ ಮುರದಂಡೆ ವಂದಿಸಿದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts