ಲಕ್ಷೆ್ಮೕಶ್ವರ: ಹೇಮರಡ್ಡಿ ಮಲ್ಲಮ್ಮ ಕುಟುಂಬದ ಜವಾಬ್ದಾರಿ ನಿರ್ವಹಣೆ ಜತೆಗೆ ಮಹಾಶಿವಶರಣೆಯಾಗಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾಳೆ. ಸ್ತ್ರೀಕುಲದ ಅರ್ನ್ಯಘ ರತ್ನವಾಗಿದ್ದು, ಮಲ್ಲಮ್ಮಳ ಹೆಸರು ಸೂರ್ಯ-ಚಂದ್ರರಿರುವವರೆಗೆ ಶಾಶ್ವತವಾಗಿರುತ್ತದೆ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದಲ್ಲಿ ರಡ್ಡಿ ಸಮಾಜದಿಂದ ಶನಿವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಳ್ಳದಕೇರಿ ಓಣಿಯ ಮಾರುತಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ವಾದ್ಯ ವೈಭವಗಳು ಹಾಗೂ ನೂರಾರು ಪೂರ್ಣ ಕುಂಭಗಳನ್ನು ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಸುನೀಲ ಮಹಾಂತಶೆಟ್ಟರ, ನಿಂಗಪ್ಪ ಬನ್ನಿ, ನವೀನ ಬೆಳ್ಳಟ್ಟಿ, ಶಂಕ್ರಪ್ಪ ಗೊರವರ, ಬಸವಣ್ಣೆಪ್ಪ ಹಾದಿಮನಿ, ಕೊಟ್ರಪ್ಪ ಅಮರಶೆಟ್ಟಿ, ಚಂಡ್ರೆಪ್ಪ ಅಮರಶೆಟ್ಟಿ, ನಿಂಬಣ್ಣ ಮುಗಳಿ, ಸಂಗಯ್ಯ ಪೂಜಾರ, ನಿಂಗಯ್ಯ ಪೂಜಾರ, ಮಹೇಶ ಹಾದಿಮನಿ, ಶಂಕ್ರಣ್ಣ ಬೂದಿಹಾಳ, ಮಂಜುನಾಥ ಮುಗಳಿ, ಹನುಮಂತಗೌಡ ಪಾಟೀಲ, ವೆಂಕಣ್ಣ ಚವರಡ್ಡಿ, ವೆಂಕಟೇಶ ಪಾಟೀಲ, ವೆಂಕಟೇಶ ಕಳ್ಳಿಮನಿ, ಶಿವನಗೌಡ ಪಾಟೀಲ, ಮುದಕಣ್ಣ ಬೂದಿಹಾಳ, ಶಿವಣ್ಣ ಕಟಗಿ, ಪ್ರಕಾಶ ಗೊರವರ, ವಿರೂಪಾಕ್ಷ ಅಮರಶೆಟ್ಟಿ, ಡಾ. ಅಮರಶೆಟ್ಟಿ, ಶ್ರೀಕಾಂತ ಪಾಟೀಲ, ಬಸವರರಡ್ಡಿ ದಾನಿ, ರಂಗಣ್ಣ ಪಾಟೀಲ, ರವಿ ಪಾಟೀಲ, ಪ್ರಕಾಶ ಗೊರವರ, ಗಿರೀಶ ಚವರಡ್ಡಿ, ಇತರರು ಇದ್ದರು.
