ಗದಗ:
ದೆಹಲಿ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಗೆ ತೀವ್ರ ಮುಖಭಂಗವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಶೂನ್ಯ ಸುತ್ತಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೆ.ಪಿ. ಕೋಟಿಗೌಡರ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ದೇಶದಲ್ಲಿ ಪ್ರಜಾಪ್ರಭುತ್ವದ ಯಶಸ್ವಿಗಾಗಿದೆ. ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದಾದ್ಯಂತ ನಶಿಸಿ ಹೋಗುತ್ತಿದೆ. ಕುಂಬಮೇಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವಹೇಳನ ಮಾಡಿದ್ದಕ್ಕೆ ಜನರು ಕಾಂಗ್ರೆಸ್ ಪಕ್ಷವನ್ನು ಶೂನ್ಯದ ಸುತ್ತ ಗಿರಕಿ ಹೊಡೆಯುವಂತೆ ಜನರು ಪಾಠ ಕಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಾಕರಾತ್ಮಕ ರಾಜಕಾರಣಕ್ಕೆ ಜನ ಸರಿಯಾದ ಪೆಟ್ಟು ಕೊಟ್ಟು ಸೋಲಿನ ಹಾದಿ ತೋರಿಸಿದ್ದಾರೆ. ಭ್ರಷ್ಟಚಾರ ವಿರೋಧಿ ಆಂದೋಲನದಲ್ಲಿ ಬಂದು ಭ್ರಷ್ಟತನವನ್ನೇ ಆಧಾರ ಮಾಡಿಕೊಂಡು ಆರಾಜಕತೆ ಸೃಷ್ಟಿಸಿವರಿಗೆ ಜನ ಕಾಪಾಳ ಮೋಕ್ಷ ಮಾಡಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ದೇಶದಾದ್ಯಂತ ನಶಿಸಿ ಹೋಗುತ್ತಿದೆ. ಇದು ದುರ್ದೈವದ ಸಂಗತಿ ಎಂದು ತಿಳಿಸಿದ್ದಾರೆ.