ವಿಜಯವಾಣಿ ಸುದ್ದಿಜಾಲ ಗದಗ
ನಗರದ 35 ವಾರ್ಡಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಣಾ ವೇದಿಕೆ (ಟಿ. ಎ. ನಾರಾಯಣಗೌಡ್ರ ಬಣ) ನಗರಸಭೆ ಪೌರಾಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿತು.
ಕರವೇ ಜಿಲ್ಲಾಧ್ಯ ಹನಮಂತಪ್ಪ ಅಬ್ಬಿಗೇರಿ ಮಾತನಾಡಿ, ನಗರಸಭೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಮುಂಜಾಗ್ರತೆ ಕ್ರಮವಾಗಿ ವ್ಯವಸ್ಥೆ ಮಾಡಬೇಕು. ನಗರಸಭೆ 35 ವಾರ್ಡಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಸರಿಯಾದ ಸ್ವಚ್ಛತೆಯ ಗಟಾರ ವ್ಯವಸ್ಥೆ ಮಾಡುವುದು, ಉದ್ಯಾನವನಗಳ ನಿರ್ವಹಣೆ, ನಗರವನ್ನು ಸ್ವಚ್ಚತೆಗೊಳಿಸುವ ಕಾರ್ಯ ಜರುಗಬೇಕು ಎಂದು ಮನವಿ ಮಾಡಿದರು.
ನಿಂಗನಗೌಡ ಮಾಲಿಪಾಟೀಲ, ನಜೀರಸಾಬ ಹದ್ಲಿ, ಮುಸ್ತಾಕ ಡಾವಣಗೇರಿ, ಯಲ್ಲಪ್ಪ ಭೋವಿ, ತೌಸಿ ಢಾಲಾಯತ, ಶಂಭು ಹಿರೇಮಠ, ನಾಗಪ್ಪ ಅಣ್ಣಿಗೇರಿ, ಅಕ್ಕಮಹಾದೇವಿ ದೊಡ್ಡಗೌಡರ, ಚಂದ್ರಶೇಖರ ಶ್ಯಾಗೋಟಿ, ಸಿರಾಜ ಹೊಸಮನಿ, ಶಿವಾನಂದ ಮಡಿವಾಳರ, ಅಕ್ಬರಸಾಬ ದೊಡ್ಡಮನಿ, ಆನಂದ ಹಂಡಿ, ಯಮನೂರಸಾಬ ನದಾ, ಅಶೋಕ ಅಣ್ಣಿಗೇರಿ, ಗೌಸುಸಾಬ ಶಿರಹಟ್ಟಿ, ಹೇಮಂತ ಹಕಾಕಿ, ರಮೇಶ ಅಬ್ಬಿಗೇರಿ, ಇಾರ್ನ ತಾಳಿಕೋಟಿ, ಸುಲೇಮಾನ ಮುಂಜಲಾಪೂರ, ಸಲೀಂ ಬೋದ್ಲೆಖಾನ, ಹುಸೇನ ಕುಂಡಾಲಿ, ಮುಸ್ತಾಕ ಡಾವಣಗೇರಿ, ದಾವಲಸಾಬ ತಹಶೀಲ್ದಾರ, ವಿನಾಯಕ ಬದಿ, ಶಬ್ಬೀರ ಚೌತಾಯ, ಅಕ್ಬರ ದೊಡ್ಡಮನಿ, ಕುಮಾರ ರ್ಯಾವಣ್ಣವರ ಹಲವರು ಇದ್ದರು.