ಗದಗ:
ವಿದ್ಯಾಥಿರ್ಗಳ ಶೈಣಿಕ ಅಭಿವೈದ್ಧಿಗೆ ಮಾನಸಿಕ ಹಾಗೂ ದೈಹಿಕ ಸದೃಢತೆ ಅವಶ್ಯಕ. ಆಟ ಪಾಟಗಳೊಂದಿಗೆ ನಿರಂತರ ಒದು ಬರಹ ವಿದ್ಯಾಥಿರ್ಗಳಲ್ಲಿ ಆಸಕ್ತಿದಾಯಕ ಕಲಿಕೆ ಅಭಿವೃದ್ಧಿ ಪಡಿಸುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ನಗರದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 1ರಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಲ್ಲಿ ಶಾಲೆಗೆ ಖುಚಿರ್, ಟೇಬಲ್, ನೀರಿನ ಬಾಟಲ್, ಗ್ರಂಥಾಲಯದ ಪುಸ್ತಕಗಳು, ರ್ಯಾಕ್, ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಇನ್ನರ್ವ್ಹಿಲ್ ಸಂಸ್ಥೆಯಿಂದ ಈ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗೆ ಬೇಕಾದ ಸಾಮಗ್ರಿಗಳನ್ನು ಹಾಗೂ ಶಾಲೆಯ ಬೌತಿಕ ಅವಶ್ಯಕತೆಗಳನ್ನು ಪೂರೈಸಿ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುವಲ್ಲಿ ಸಂಸ್ಥೆ ಶ್ರಮೀಸುತ್ತದೆ ಎಂದರು.
ಕ್ಲಬ್ ಅಧ್ಯೆ ನಾಗರತ್ನಾ ಮಾರನಬಸರಿ ಮಾತನಾಡಿ ಗದಗ ಶಹರದ 4 ಹಾಗೂ ಗ್ರಾಮೀಣ ಭಾಗದ 1 ಶಾಲೆಯನ್ನು ಈ ವರ್ಷಕ್ಕೆ ದತ್ತು ಪಡೆಯಲಾಗಿದೆ ಶಾಲೆಯ ಕಲಿಕಾ ಚಟುವಟಿಕೆಗಳಿಗೆ ಪೂರಕವಾಗಿ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂದರು.
ಸುಮಾ ಪಾಟೀಲ, ಅನ್ನರ್ಪೂಣ ವರವಿ, ಶಾಂತಾ ನಿಂಬಣ್ಣವರ, ಮೀನಾ ಕೊರವನವರ, ಪ್ರೇಮಾ ಗುಳಗೌಡ್ರ, ವೀಣಾ ತಿರ್ಲಾಪೂರ, ಪುಷ್ಪಾ ಬಂಡಾರಿ, ವಿಜಯಾ ಜಕರಡ್ಡಿ, ಪವಿತ್ರಾ ಹಿರೇಮಠ ಇತರರು ಇದ್ದರು.