ಗದಗ: ಬೇಸಿಗೆಯ ಬಿಸಿಲಿನ ತಾಪಮಾನದಿಂದ ಚರ್ಮಕ್ಕೆ ಹಾನಿಯಾಗದಂತೆ ಸಂರಣೆ, ಉಪಚಾರ ಹೊಂದಲು ವೈದ್ಯಕಿಯ ೇತ್ರದಲ್ಲಿ ಹಲವಾರು ಹೊಸ ಆವಿಷ್ಕಾರಗಳಾಗಿವೆ ಎಂದು ಚರ್ಮ ತಜ್ಞೆ ಡಾ. ಸರೋಜಾ ಪಾಟೀಲ ಹೇಳಿದರು.
ಐಎಂಎ ಸಭಾಂಗಣದಲ್ಲಿ ಭಾರತೀಯ ವೈದ್ಯಕಿಯ ಸಂ ಗದಗ ಹಾಗೂ ಚರ್ಮರೋಗ ತರ ಸಂದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಿರಂತರ ವೈದ್ಯಕಿಯ ಶಿಣ (ಸಿ.ಎಂ.ಇ) ಕಾರ್ಯಕ್ರಮದಲ್ಲಿ ಸನ್ಸ್ಕ್ರೀನ್ ವಿಷಯವಾಗಿ ಉಪನ್ಯಾಸ ನೀಡಿ ಮಾತನಾಡಿದರು.
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದವರು ತ ವೈದ್ಯರ ಸಲಹೆ ಪಡೆದು ಕ್ರೀಮ್, ಲೋಷನ್ಗಳನ್ನು ಬಳಸಬೇಕು. ಚರ್ಮದ ಮೇಲೆ ಪರಿಣಾಮ ಬೀರುವಂತಿರಬಾರದು. ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿದ್ದಾಗ ತಲೆ, ಮುಖ ಇತರ ಅಂಗಾಂಗಗಳ ಮೇಲೆ ಹಾನಿ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಚರ್ಮ ರೋಗ ತಜ್ಞೆ ಡಾ.ಅಪೂರ್ವ ರೇಶ್ಮೆ ಅವರು ಮೊಡವೆಗಳ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು. ಹದಿಹರೆಯದ ಮತ್ತು ಮಧ್ಯ ವಯಸ್ಕರರಲ್ಲಿ ಮೊಡವೆಗಳ ನಿರ್ವಹಣೆ ಹಾಗೂ ಕೆಗೊಳ್ಳಬೇಕಾದ ಕ್ರಮ ಕುರಿತು ವಿವರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕೋವಿಡ್ ಸಂದರ್ಭದಲ್ಲಿ ನಿಧನರಾದ ವೈದ್ಯರಿಗೆ ಮೇಣಬತ್ತಿ ಬೆಳಗುವ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. ಡಾ. ಗಿರೀಶ್ ನಾಗರಾಳ, ಡಾ. ಪ್ರಕಾಶ ಕೊಲೋಳಗಿ, ಡಾ. ತುಕಾರಾಮ ಸೋರಿ, ಡಾ. ಬಿಡಿನಹಾಳ, ಡಾ.ಪ್ರಶಾಂತಕುಮಾರ ದೇಸಾಯಿ, ಡಾ. ತುಕಾರಾಮ ಸೋರಿ ಇತರರು ಇದ್ದರು.