ಗದಗ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಗದಗ ಜಿಲ್ಲಾ ಘಟಕ, ಬಸವೇಶ್ವರ ನಗರದಲ್ಲಿ ನಿವೃತ್ತ ನೌಕರರ ಸಂಘದ ಜುಲೈ ತಿಂಗಳಲ್ಲಿ ಜನಿಸಿದ ಸಂಘದ ಸದಸ್ಯರ ಹುಟ್ಟು ಹಬ್ಬದ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಶ್ರೀ ಟಿ.ಇ.ಕಾಳೆ, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಜುಲೈ ತಿಂಗಳಲ್ಲಿ ಜನಿಸಿದ ಸಂಘದ ಸದಸ್ಯರ ಹುಟ್ಟುಹಬ್ಬದ ನಿಮಿತ್ಯ ಅವರನ್ನು ಸತ್ಕರಿಸಿ ಮಾತನಾಡಿದರು. ಅವರು ಹಿರಿಯ ನಾಗರೀಕರಿಗೆ ಕಾನೂನಿಸಲ್ಲಿರುವ ಅವಕಾಶಗಳನ್ನು ವಿವರಿಸಿದರು. ಅವರು ಮುಂದುವರೆದು ಮಾತನಾಡುತ್ತಾ ನಿವೃತ್ತ ನೌಕರರ ಭವನ ಸ್ಥಾಪಿಸುವಾಗ ಸದಸ್ಯರು ಒಕ್ಕಟ್ಟಾಗಿ ಪ್ರಯತ್ನಿಸಿದ ಪರಿಯನ್ನು ನೆನಪಿಸಿದರು. ನಿವೃತ್ತ ನೌಕರರ ಸಂಘ ಸ್ಥಾಪನೆಯಾಗಿ, ತನ್ನ ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ ಸಹಾಯ ಹಸ್ತವನ್ನು ನೀಡಿದ ಮಹನೀಯರಾದ ಅಂದಿನ ಲೋಕಸಭಾ ಸದಸ್ಯರಾದ ಶ್ರೀ ವಿಜಯ ಸಂಕೇಶ್ವರರನ್ನು ಸ್ಮರಿಸಿದರು. ಸಂಘವು ಉತ್ತರೋತ್ತರ ಅಭಿವೃದ್ದಿಯಾಗುತ್ತಿರುವುದು ಸಂತೋಷವನ್ನುoಟು ಮಾಡುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಎಲ್ಲ ಸದಸ್ಯರಿಗೆ ಅಭಿನಂದಿಸಿ, ದೇವರು ಎಲ್ಲರಿಗೂ ಆಯುರಾರೋಗ್ಯ, ಸುಖ, ಸಂತೋಷವನ್ನು ನೀಡಲೆಂದು ಹಾರೈಸಿದರು. ಇನೋರ್ವ ಅತಿಥಿಗಳಾದ ಕರ್ನಾಟಕ ಬ್ಯಾಂಕ ಅಧಿಕಾರಿ ಶ್ರೀ ವಿಜಯ ನಟೇಗಲ್ ಅವರು ಮಾತನಾಡಿದರು. ಅವರು ಕರ್ನಾಟಕ ಬ್ಯಾಂಕನಲ್ಲಿ ಹಿರಿಯ ನಾಗರೀಕರು ಉಳಿತಾಯ ಖಾತೆ ಆರಂಭಿಸಿದರೆ ಪ್ರಿಮಿಯಂ ರಹಿತ ಆರೋಗ್ಯ ವಿಮೆ ನೀಡುವ ಮತ್ತು ಆಧಿಕ ಬಡ್ಡಿ ದರದ ಸೌಲಭ್ಯ ಮುಂತಾದ ಅನೇಕ ಯೋಜನೆಗಳನ್ನು ವಿವರಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅದ್ಯಕ್ಷರಾದ ಪ್ರೋ. ಕೆ.ಎಚ್.ಬೇಲೂರ ಅವರು ವಹಿಸಿಕೊಂಡಿದ್ದರು. ಅವರು ತಮ್ಮ ಅದ್ಯಕ್ಷೀಯ ನುಡಿಗಳನ್ನು ಆಡುತ್ತಾ ನಮ್ಮ ಸಂಘದಲ್ಲಿ ಪ್ರತಿ ತಿಂಗಳು ಆಯಾ ತಿಂಗಳಲ್ಲಿ ಜನಿಸಿದ ಸದಸ್ಯರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಬಹಳ ವಿಶೇಷ ಎಂದರು. ಹಿರಿಯರು ತಮ್ಮ ಆರೋಗ್ಯ ಕಾಯ್ದುಕೊಳ್ಳಲು ನಿತ್ಯ ವಾಯುವಿಹಾರ, ದ್ಯಾನ, ಪ್ರಾಣಾಯಾಮ, ಸಂಗೀತ ಮುಂತಾದವುಗಳ ಕಡೆಗೆ ಒಲವು ತೋರಬೇಕು ಎಂದರು. ಜುಲೈ ತಿಂಗಳಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಎಲ್ಲ ಸದಸ್ಯರಿಗೆ ಶುಭ ಹಾರೈಸಿದರು. ಜುಲೈ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಶ್ರೀ. ಎಂ. ಶಂಕರಪ್ಪ, ವ್ಹಿ.ಎಂ. ಬಾಂಡಗೆ, ಆರ್.ಎಂ. ಕುಲ್ಕರ್ಣಿ, ಎಂ. ವ್ಹಿ. ಐಹೊಳಿ, ಎಸ್. ಎಂ. ಮಾನೇದ, ಎಸ್. ಐ. ಸತ್ತಿಗೇರಿ, ಆರ್. ಎಸ್. ಕೊಪ್ಪಳಕರ, ಬಂಡಿಹಾಳ ಸರ. ಶ್ರೀಮತಿಯರಾದ ಎಸ್.ಎಸ್. ಬಿಜಲಿ, ಆರ್. ವ್ಹಿ. ಪುರಂದರ, ಎಸ್. ಕೆ. ಪಾಟೀಲ, ಎಸ್.ಜಿ. ಮುದಗಲ್ಲ, ಮುಂತಾದವರೊAದಿಗೆ ಒಟ್ಟು ೩೨ ಜನ ಸದಸ್ಯರಿಗೆ ಹುಟ್ಟು ಹಬ್ಬದ ಪ್ರಯುಕ್ತ ನೆನಪಿನ ಕಾಣಿಕೆಗಳನ್ನು ನೀಡಿ, ಗೌರವಿಸಿ ಶುಭಕೋರಲಾಯಿತು.
ನಿವೃತ್ತ ನೌಕರರ ಸಂಘದಲ್ಲಿ ಹಿರಿಯ ನಾಗರೀಕರ ಹುಟ್ಟು ಹಬ್ಬ ಆಚರಣೆ
ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್ ಬರೋದು ಪಕ್ಕಾ! ಇರಲಿ ಎಚ್ಚರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…