ಗದಗ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಗದ್ದುಗೆ ಗುದ್ದಾಟ

ಶಿವಾನಂದ ಹಿರೇಮಠ, ಗದಗ
ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೌರಾಡಳಿತ ಇಲಾಖೆ ಮೀಸಲು ಪ್ರಕಟಿಸಿದ ನಂತರ ಅಧ್ಯಕ್ಷಗಿರಿಗೆ ಗದ್ದುಗೆ ಗುದ್ದಾಟ ಶುರುವಾಗಿದೆ. ತಮ್ಮ ಬಲಾಬಲಗಳನ್ನು ಜಿಲ್ಲಾ ನಾಯಕರ ಮುಂದೆ ಪ್ರಸ್ತಾವನೆ ಸಲ್ಲಿಸುತ್ತಿರುವ ಸ್ಥಳಿಯ ಸಂಸ್ಥೆ ಜನಪ್ರತಿನಿಧಿಗಳು, ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಜಿಲ್ಲಾ ನಾಯಕರಿಗೆ ಮನವಿ ಮಾಡುತ್ತಿದ್ದಾರೆ. ಈ ನಡುವೆ ಆ.9 ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕ ನಿಗದಿಪಡಿಸಿ ಹೈಕೊರ್ಟ್​ಗೆ ಪವರಾಡಳಿತ ಇಲಾಖೆ ವರದಿ ಸಲ್ಲಿಸಲಿದೆ. ಹಾಗಾಗಿ ಜಿಲ್ಲೆಯಿಮದಲೂ ಚುನಾವಣೆ ದಿನಾಂಕ ನಿಗದಿಪಡಿಸಿ ಪೌರಾಡಳಿತ ಇಲಾಖೆಗೆ ವರದಿ ಕಳುಹಿಸಲಾಗಿದೆ.

ನಂಬರ್​ ಗೇಮ್​ ಶುರು:
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಜು. 24ರಂದು ರ್ಪೂಣಗೊಂಡಿತ್ತು. ಬಿಜೆಪಿ ಸದಸ್ಯರ ಸಂಖ್ಯೆ ಅಧಿಕ ಇರುವ ನಗರಸಭೆಯಲ್ಲಿ ಸ್ವಾಭಾವಿಕವಾಗಿ ಬಿಜೆಪಿ ಮತ್ತೆ ತನ್ನ ಅಧಿಕಾರ ಉಳಿಸಿಕೊಳ್ಳುವ ಭರವಸೆ ಮೂಡಿದೆ. ಈ ನಡುವೆ ತೆರೆಮರೆಯಲ್ಲಿ ಆಪರೇಷನ್​ ಹಸ್ತದ ಬೀತಿ ಬಿಜೆಪಿ ವಲಯವನ್ನು ಕಾಡುತ್ತಿದೆ. ಜತೆಗೆ ನಗರಸಭೆ ಅಧ್ಯಯ ಚುನಾವಣೆಗೆ ಮತ ಚಲಾಯಿಸಲು ನಂಬರ್​ ಗೇಮ್​ ಆರಂಭವಾಗಿದೆ. ವಿಧಾನ ಪರಿಷತ್​ ಸದಸ್ಯ ಸಲೀಂ ಅಹಮ್ಮದ ಗದಗ ವಿಧಾನಸಭೆ ಕ್ಷೇತ್ರದ ಮತಪಟ್ಟಿಗೆ ಸೇರ್ಪಡೆಗೊಳ್ಳಲು ಅಜಿರ್ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಜಿಲ್ಲಾ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಆ.16 ರಂದು ವಿಧಾನಪರಿಷತ್​ ಸದಸ್ಯ ಸಲೀಂ ಅಹಮ್ಮದ ಅವರ ಮತವನ್ನು ಗದಗ ವಿಧಾನಸಭಾ ಕ್ಷೇತ್ರದ ಪಟ್ಟಿಗೆ ಸೇರ್ಪಡೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಅದೇ ರೀತಿ ವಿಧಾನಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಅವರ ಮತವನ್ನು ಕ್ಷೇತ್ರದ ಮತಪಟ್ಟಿ ಸೇರ್ಪಡೆ ಸಂಬಂಧ ಕಾಂಗ್ರೆಸ್​ ನಾಯಕರು ತಕರಾರು ತೆಗೆದಿದ್ದಾರೆ. ಈ ಕುರಿತು ಆ.17 ರಂದು ಉಪ ವಿಭಾಗಾಧಿಕಾರಿ ಕೋರ್ಟನಲ್ಲಿ ವಿಚಾರಣೆ ನಡೆಯಲಿದೆ.

ಯಾರು ಮತ ಚಲಾಯಿಸುವರು:
ನಗರಸಭೆಯಲ್ಲಿ ಕೇವಲ ಒಂದೇ ಮತದಾನದಲ್ಲಿ ಅಧಿಕಾರ ಬದಲಾಗುವ ಸಾಧ್ಯತೆ ಇದೆ. ನಗರಸಭೆಯ 35 ಸದಸ್ಯರ ಪೈಕಿ 18 ಬಿಜೆಪಿ, 15 ಕಾಂಗ್ರೆಸ್​, 2 ಪಕ್ಷೇತರರಿದ್ದಾರೆ. ಪಕ್ಷೇತರರರು ಕಾಂಗ್ರೆಸ್​ ಪಕ್ಷಕ್ಕೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್​ ಸಂಖ್ಯೆ 17ಕ್ಕೆ ಏರಿಕೆ ಆಗಿದೆ. ಮುಂದುವರಿದು, ಸಂಸದ ಬಸವರಾಜ ಬೊಮ್ಮಾಯಿ ಬಿಜೆಪಿ ಪರ, ಸಚಿವ ಎಚ್​.ಕೆ. ಪಾಟೀಲ ಕಾಂಗ್ರೆಸ್​ ಪರ ಮತಚಲಾಯಿಸಿದರೂ ಸಹ ಬಿಜೆಪಿ ಸಂಖ್ಯೆ 19ಕ್ಕೆ, ಕಾಂಗ್ರೆಸ್​ ಸಂಖ್ಯೆ 18ಕ್ಕೆ ಏರಿಕೆ ಆಗಲಿದ್ದು, ಸ್ವಾಭಾವಿಕವಾಗಿ ನಗರಸಭೆ ಅಧಿಕಾರವು ಬಿಜೆಪಿ ತೆಕ್ಕೆಗೆ ಒಲಿಯಲಿದೆ.

ಜಿದ್ದಾಜಿದ್ದಿ?
ಉಪವಿಭಾಗಾಧಿಕಾರಿ ಕಚೇರಿಯಲ್ಲಿ ವಿಚಾರಣೆಗೆ ಇರುವ ವಿಧಾನಪರಿಷತ್​ ಸದಸ್ಯ ಸಲೀಂ ಅಹಮ್ಮದ ಮತ್ತು ಎಸ್​.ವಿ. ಸಂಕನೂರು ಮತ ನೋಂದಣಿ ಪ್ರಕ್ರಿಯೆ ಈಗ ಕುತೂಹಲ ಮೂಡಿಸಿದೆ. ಕಳೆದ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮತ ಚಲಾವಣೆ ಸಂದರ್ಭದಲ್ಲೂ ಸಲೀಂ ಅಹಮ್ಮದ ಸೇರಿದಂತೆ 4 ಜನ ಕಾಂಗ್ರೆಸ್​ ಮುಖಂಡರು ಸ್ಥಳಿಯ ಮತಪಟ್ಟಿಗೆ ಸೇರ್ಪಡೆಗೊಳ್ಳಲು ಅಜಿರ್ ಸಲ್ಲಿಸಿದ್ದರು. ಈ ಪ್ರಕ್ರಿಯೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಬಾಡಿಗೆ ಕರಾರು ಪತ್ರ ಹೊರತುಪಡಿಸಿ ಸಲಿಂ ಅಹಮ್ಮದ ಅವರು ಸ್ಥಳಿಯ ನಿವಾಸಿ ಎಂಬುದಕ್ಕೆ ಸಾಗಳಿಲ್ಲ ಎಂಬ ಕಾರಣಕ್ಕೆ ೆ 1, 2022 ರಂದು ಕಾಂಗ್ರೆಸ್​ ಮುಖಂಡರ ಅಜಿರ್ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ತಿರಸತವಾಗಿತ್ತು. ಅದೇ ರೀತಿ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ ಕಾಂಗ್ರೆಸ್​ ಮುಖಂಡರ ಅಜಿರ್ಯನ್ನು ಮೆ.18, 2022 ರಂದು ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದರು. ಸಲೀಂ ಅಹಮ್ಮದ ಗದಗ ನಗರ ನಿವಾಸಿ ಅಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಹಾಗಾಗಿ ಬಿಜೆಪಿಗೆ ಎರಡೂ ನ್ಯಾಯಾಲಯದಲ್ಲಿ ಗೆಲುವಾಗಿತ್ತು. ಈ ಬಾರಿಯು ಬಿಜೆಪಿಗೆ ಅಧಿಕಾರಿ ಹಿಡಿಯುವ ಭರವಸೆಯಲ್ಲೇ ಇದೆ. ಆದರೆ, ಬಿಜೆಪಿಗೂ ಒಳ ಏಟು ನೀಡಲು ಕಾಂಗ್ರಸ್​ ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಆಪರೇಷನ್​ ಹಸ್ತದ ಮೂಲಕ ಕೆಲ ಬಿಜೆಪಿ ಸದಸ್ಯರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದೆ ಎನ್ನಲಾಗಿದೆ. ಎಲ್ಲದಕ್ಕೂ ಮತದಾನದ ದಿನವೇ ಉತ್ತರ ಸಿಗಲಿದೆ.

ಪೈಪೋಟಿ ಯಾರಿಗೆ?
ಗದಗ ನಗರಸಭೆಯಲ್ಲಿ ಹಿರಿಯ ವಿನಾಯಕ ಮಾನ್ವಿ, ಎರಡನೇ ಬಾರಿ ಸದಸ್ಯರಾದ ರಾವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ ಮತ್ತು ಚಂದ್ರು ತಡಸದ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿಯಲ್ಲಿ ಇದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 9 ಮಹಿಳಾ ಸದಸ್ಯರಲ್ಲಿ ಯಾರನ್ನಾದರೂ ನೇಮಿಸಬಹುದು. ಉಪಾಧ್ಯಕ್ಷೆ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿ ಆಗಿದ್ದರಿಂದ ಬಿಜೆಪಿ ಸದಸ್ಯೆಯರಾದ ಅನಿತಾ ಗಡ್ಡಿ, ವಿಜಯಲಕ್ಷಿ$್ಮ ದಿಂಡೂರ, ವಿದ್ಯಾವತಿ ಗಡಗಿ ಅವರು ಉಪಾಧ್ಯಕ್ಷೆ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ.

Share This Article

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…