ಜಿಲ್ಲಾ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ

blank
 ಗದಗ: ಜಿಲ್ಲಾ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ *ಯುವಕರ ನಡೆ ವಿಕಸಿತ ಭಾರತದ ಕಡೆ* ಮುಳಗುಂದ ನಾಕಾ ಅಡವೀಂದ್ರ ಸ್ವಾಮಿ ಮಠದಿಂದ *ವಿವೇಕ ನಡಿಗೆ* ಪ್ರಾರಂಭವಾಗಿ ತೋಂಟದಾರ್ಯ ಮಠದಲ್ಲಿ ಸಮಾರೋಪವಾಯಿತು.
 ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಡಾ. ಮಲ್ಲಿಕಾರ್ಜುನ ಬಾಳಿಕಾಯಿಯವರು ಮಾತನಾಡಿ “ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ವಿರಮಿಸಬೇಡಿ” ಎಂದು ಸ್ವಾಮಿ ವಿವೇಕಾನಂದರು ಹೇಳಿದ ಈ ಮಾತು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಪ್ರತಿ ಮನುಷ್ಯನಿಗೂ ಸ್ಫೂರ್ತಿಯಾಗುವ ಶಕ್ತಿ.ಜೊತೆಗೆ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಐತಿಹಾಸಿಕ ಭಾಷಣ ಮಾಡುವುದರ ಮೂಲಕ ಜಗತ್ತಿಗೆ ಭಾರತದ ಶಕ್ತಿಯನ್ನು ತೋರಿದ ವೀರ ಸನ್ಯಾಸಿ ವಿವೇಕಾನಂದರು, ಅಹಿಂಸಾ ಪ್ರತಿಪಾದಕರಾದ ಮಹಾತ್ಮ ಗಾಂಧೀಜಿಯವರು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ರವರಿಗೂ ಪ್ರೇರಣೆಯಾದ ಶಕ್ತಿ ಸ್ವಾಮಿ ವಿವೇಕಾನಂದರು, ಅವರು ಕೇವಲ 39 ವರ್ಷಗಳ ಕಾಲ ಬದುಕಿದರೂ ಕೂಡ ಇಡೀ ಜಗತ್ತಿಗೆ ಇವತ್ತಿಗೂ ಕೂಡ ದಿವ್ಯ ಶಕ್ತಿಯಾಗಿ ಪ್ರಜ್ವಲಿಸುತ್ತಿದ್ದಾರೆ. ಪಾಶ್ಚಾತ್ಯ ಜಗತ್ತಿಗೆ ವೇದಾಂತ ಮತ್ತು ಯೋಗದ ಬಗ್ಗೆ ಪರಿಚಯಿಸಿ 19 ನೇ ಶತಮಾನದ ಅಂತ್ಯದಲ್ಲಿ ಹಿಂದೂ ಧರ್ಮವನ್ನು ಜಗತ್ತಿನ ಗಮನಕ್ಕೆ ತಂದರು. ಇಂದು ನಾವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವ ಮೂಲಕ ಅವರ ಮಹಾನ್ ಚೇತನವನ್ನು ಗೌರವಿಸುವ ಈ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಸಂತೋಷ ಅಕ್ಕಿ, ನಗರಸಭೆ ಸದಸ್ಯರಾದ ಶ್ರೀ ಅನೀಲ ಅಬ್ಬಿಗೇರಿ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಶ್ರೀ ಸುಧೀರ ಕಾಟಿಗಾರ, ನಿಕಟಪೂರ್ವ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಶಿವು ಹಿರೇಮನಿ ಪಾಟೀಲ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ರಾಜೇಶ ಅರಕಾಲ, ಗ್ರಾಮೀಣ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಅರವಿಂದ ಅಣ್ಣಿಗೇರಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ನೆರೆಗಲ್
TAGGED:
Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…