ಬಿಡಾಡಿದನಗಳನ್ನು ಖಸಾಯಿ ಖಾನೆಗೆ ರವಾನೆ ಶಂಕೆ?

ವಿಜಯವಾಣಿ ವಿಶೇಷ ಗದಗ
ಬಿಡಾಡಿದನ ತಿವಿತದಿಂದ ಬೆಟಗೇರಿಯಲ್ಲಿ ವೃದ್ಧನೋರ್ವ ಮೃತಪಟ್ಟ ಹಿನ್ನೆಲೆ ಎಚ್ಚೆತ್ತುಕೊಂಡ ನಗರಸಭೆ ಕಳೆದ ಹಲವು ದಿನಗಳಿಂದ ರಾತ್ರೋ ರಾತ್ರಿ ಬಿಡಾಡಿದನ ಹಿಡಿದು ಗೋಶಾಲೆಗಳಿಗೆ ರವಾನಿಸುವ ಕಾರ್ಯ ಆರಂಭಿಸಿದೆ. ಇದನ್ನೇ ಲಾಭ ಮಾಡಿಕೊಂಡಿರುವ ಕೆಲವರು ಲಾಭದ ಆಸೆಗೋಸ್ಕರ ದನಗಳನ್ನು ಖಸಾಯಿ ಖಾನೆಗೆ ರವಾನಿಸುತ್ತಿದ್ದಾರೆ ಎಂಬ ಗುಮಾನಿ ಎದ್ದಿದೆ. ಈ ಕೃತ್ಯದ ಹಿಂದೆ ಕೆಲ ನಗರ ಸಭೆ ಸದಸ್ಯರ ಆಪ್ತರು ಇದ್ದಾರೆ ಎಂಬ ಚರ್ಚೆ ನಗರಸಭೆ ಆವರಣದಲ್ಲಿ ಕೇಳಿಬರುತ್ತಿದೆ. ಯಾವುದು ಸತ್ಯ ಮತ್ತು ಯಾವುದು ಮಿತ್ಯ ಎಂಬುದು ಸೂಕ್ತ ತನಿಖೆಯಿಂದಲೇ ಹೊರ ಬರಬೇಕಿದೆ. ತನಿಖೆಗೆ ಹಿಂದೂ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.

ಏನಿದು ಪ್ರಕರಣ:
ಗದಗ ನಗರದಲ್ಲಿ, ಅದರಲ್ಲೂ ಬೆಟಗೇರಿ ಭಾಗದಲ್ಲಿ ಬಿಡಾಡಿ ದನಗಳ ಹಾವಳಿ ಅಧಿಕವಾಗಿತ್ತು. ರಸ್ತೆಯಲ್ಲಿ ಹಿಂಡು-ಹಿಂಡಾಗಿ ನಿಲ್ಲುವ ಬಿಡಾಡಿ ದನಗಳ ಹಾವಳಿಯಿಂದ ವ್ಯಾಪಾರಸ್ಥರು, ಪಾದಚಾರಿಗಳು ಸೇರಿ ವಾಹನ ಸವಾರರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ಟೆಂಡರ್​ ಕರೆಯುವಮೂಲಕ ಬಿಡಾಡಿದನಗಳನ್ನು ಶಿವಮಂದಿರದ ಗೋಶಾಲೆಗಳಿಗೆ ರವಾನಿಸಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಎರಡೂ ಬಾರಿ ಚರ್ಚೆ ಜರುಗಿತ್ತು. ಕಾರಣಾಂತರಗಳಿಂದ ನಗರಸಭೆ ಟೆಮಡರ್​ ಕರೆದಿರಲಿಲ್ಲ. ಇತ್ತೀಚೆಗೆ ಬಿಡಾಡಿದನ ತಿವಿತದಿಂದ ಓರ್ವ ವೃದ್ಧ ಮೃತ ಪಟ್ಟಿದ್ದ. ಈ ಪ್ರಕರಣ ಜಿಲ್ಲೆಯಾದ್ಯಂತ ಸದ್ದು ಮಾಡಿತ್ತು ಮತ್ತು ಜಿಲ್ಲಾಡಳಿತ ಹಾಗೂ ನಗರಸಭೆಯನ್ನು ಎಚ್ಚರಿಸಿತ್ತು. ಬಿಡಾಡಿ ದನ ಮಾಲೀಕರಿಗೆ ನೋಟೀಸ್​ ನೀಡಿದ್ದ ನಗರಸಭೆ ದನಗಳನ್ನು ತಮ್ಮ ಕಬ್ಜೆಗೆ ತೆಗೆದುಕೊಳ್ಳಲು ಕಾಲಮಿತಿ ನೀಡಿದ್ದರು. ಮಾಲೀಕರು ನಗರಸಭೇ ಸೂಚನೆ ಪಾಲಿಸದ ಹಿನ್ನೆಲೆ ಕಳೆದ ಮಂಗಳವಾರದಿಂದ ರಾತ್ರಿಹೊತ್ತು ಬಿಡಾಡಿದಗಳ ಹಿಡಿಯುವ ಕಾರ್ಯಾಚರಣೆಗೆ ನಗರಸಭೆ ಮುಂದಾಗಿದೆ. ಪೌರಕಾಮಿರ್ಕರು ಮತ್ತು ಪರಿಣಿತರನ್ನು ಈ ಕಾರ್ಯಕ್ರಮ ಬಳಸಿಕೊಳ್ಳಲಾಗುತ್ತಿದೆ.

ಆಗಿದ್ದೇನು?
ಬುಧವಾರ ತಡರಾತ್ರಿ ಕಾರ್ಯಾಚರಣೆ ವೇಳೆ ನಗರದ ಗೌಪ್ಯಸ್ಥಳದಲ್ಲಿ ಕೆಲವರು ಏಳು ಬಿಡಾಡಿದನಗಳನ್ನು ಬಂದಿಸಿಟ್ಟಿದ್ದರು. ಈ ದನಗಳನ್ನು ಖಸಾಯಿಖಾನೆಗೆ ಕಳುಹಿಸಲು ಬಂದಿಸಿದ್ದರು ಎಂಬ ಅನುಮಾನದ ಮೇರೆಗೆ ನಗರಸಭೆ ಕೆಲ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದನಗಳನ್ನು ಬಿಡಿಸಿಕೊಳ್ಳಲು ಆಗ್ರಹಿಸಿದ್ದಾರೆ. ಈ ಪ್ರಯತ್ನ ವಿಲವಾದ ಹಿನ್ನೆಲೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ದನಗಳನ್ನು ಬಿಡಿಸಿಕೊಳ್ಳಲಾಯಿತು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಗುರುವಾರ ತಡರಾತ್ರಿ ನಗರದ ಜವುಳಗಲ್ಲಿ ಬಳಿ ಬೀಡು ಬಿಟ್ಟಿದ್ದ ದನಗಳನ್ನು ಖಸಾಯಿಖಾನೆಗೆ ಸಾಗಿಸಲು ರೂಪಿಸಿದ್ದ ಸಂಚು ಕೂಡ ವಿಲವಾಗಿದೆ.

ನಗರಸಭೆ ಸ್ಪಷ್ಟನೆ:
ಖಸಾಯಿಖಾನೆಗೆ ಬಿಡಾಡಿದನ ಸಾಗಾಟ ನಾಡಾಗುತ್ತಿದೆ ಎಂಬ ಸುದ್ದಿ ನಗರಾದ್ಯಂತ ಕೇಳಿ ಬರುತ್ತಿರುವ ಹಿನ್ನೆಲೆ ನಗರಸಭೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ನಗರಸಭೆ ಅಧಿಕಾರಿಗಳು ಪೌರ ಕಾಮಿರ್ಕರು ಮತ್ತು ಪರಿಣೀತರು ಬಿಡಾಡಿದನಗಳ ಹಿಡಿಯುವ ಕಾರ್ಯಾಚರಣೆಯಲ್ಲಿ ತೋಡಗಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿ ಆಗುವರಿಗೆ ಐಡಿ ಕಾರ್ಡ್​ ವಿತರಿಸಲಾಗಿದೆ ಎಂದು ನಗರಸಭೆ ಸ್ಪಷ್ಟಪಡಿಸಿದೆ. ಯಾರಾದರೂ ಅನಧಿಕೃತವಾಗಿ ಬೀದಿ ದನಗಳನ್ನು ತೆಗೆದುಕೊಂಡು ಹೋಗುವ ಪ್ರಕರಣ ಕಂಡು ಬಂದರೆ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯದ ತಿಳಿಸಿದೆ.

ನಿಟ್ಟುಸಿರು ಬಿಟ್ಟ ಜನರು:
ಬಿಡಾಡಿ ದನಗಳ ಹಾವಳಿಗೆ ಕಂಗೆಟ್ಟಿದ್ದ ಗದಗ-ಬೆಟಗೇರಿ ಅವಳಿ ನಗರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ, ಗರಸಭೆಯಿಂದ ಬಿಡಾಡಿ ದನಗಳ ಕಾರ್ಯಾಚರಣೆ ಆರಂಭಗೊಂಡ ಹಿನ್ನೆಲೆ ಜನರಲ್ಲಿ ಸ್ವಲ್ಪ ನೆಮ್ಮದಿ ಮೂಡಿದೆ. ನಗರದ ವಿವಿಧೆಡೆ ಗುಂಪು ಗುಂಪಾಗಿ ಕೂಡಿರುವ ಬೀದಿ ದನಗಳನ್ನು ಕ್ಯಾಂಟರ್​, ಲಾರಿ ಮೂಲಕ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರದ ಗೋಶಾಲೆಗಳಿಗೆ ರವಾನಿಸಲಾಗುತ್ತಿದೆ. ಈ ವರೆಗೆ 45 ದನಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಕಾರ್ಯಾಚರನೆ ನಡೆಯಬೇಕಿದೆ.
ನಗರದ ರಾಜೀವಗಾಂಧಿ ನಗರ, ಬೆಟಗೇರಿ ಬಸ್​ ನಿಲ್ದಾಣ, ಸಿಎಸ್​ಐ ಆಸ್ಪತ್ರೆ ಬಳಿಯ ತಿರುವಿನಲ್ಲಿ ಇನ್ನೂ ಬಿಡಾಡಿದನಗಳ ಉಪಟಳ ಹೆಚ್ಚಾಗಿದೆ. ಹಾಗಾಗಿ, ದನಗಳ ಉಪಟಳ ಕಡಿಮೆ ಆಗುವವರೆಗೂ ಕಾರ್ಯಾಚರಣೆ ನಿರಂತರವಾಗಿರಬೇಕು ಎಂಬುದು ಜನರ ಆಗ್ರಹ. ಟೆಂಗಿನಕಾಯಿ ಬಜಾರ, ತರಕಾರಿ ಮಾರ್ಕೆಟ್​, ರ್ಟನಲ್​ ಪೇಟೆ, ಹೆಲ್ತಕ್ಯಾಂಪ್​, ರೈಲು ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣರಾವ ವೃತ್ತ, ಭೂಮರಡ್ಡಿ ವೃತ್ತ, ಮುಳಗುಂದ ನಾಕಾ, ರೋಟರಿ ಸರ್ಕಲ್​ ಸೇರಿ ನಗರದ ಪ್ರಮುಖ ಭಾಗಗಳಲ್ಲಿ ಬಿಡಾಡಿ ದನಗಳು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಕೋಟ್​:
ದನಗಳನ್ನು ಖಸಾಯಿಖಾನೆಗೆ ಕಳುಹಿಸುತ್ತಿರುವ ಸುದ್ದಿ ತಿಳಿದಿದೆ. ಈ ಬಗ್ಗೆ ತನಿಖೆ ನಡೆಸಲು ಆಗ್ರಹಿಸುತ್ತೇನೆ. ಕೃತ್ಯ ನಡೆದಿದ್ದೇ ಆದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯನ್ನು ಒತ್ತಾಯಿಸುತ್ತೇನೆ
ರಾಜು ಖಾನಪ್ಪನ್ನವರ, ಶ್ರೀರಾಮಸೇನೆ ಸಂಚಾಲಕ

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ