ಒತ್ತಡದ ಕೆಲಸದ ಮಧ್ಯ ಉತ್ತಮ ಜೀವನ ಶೈಲಿ ಹೊಂದಿ ಎಲ್ಲರು ಆರೋಗ್ಯವಾಗಿರಬೇಕು: ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು
ಗದಗ ವಕೀಲರು ಸಮಾಜ ಸೇವೆಯಂತಹ ವೃತ್ತಿ ಜೀವನದಲ್ಲಿದ್ದು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೆಲಸದ ಜೊತೆಗೆ ಎಲ್ಲರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಅವರು ಹೇಳಿದರು.
ನಗರದ ಜಿಲ್ಲಾ ನ್ಯಾಯಲಯದಲ್ಲಿ ಶನಿವಾರ ಆಯುಷ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಜಿಲ್ಲಾ ಆಯುಷ ಇಲಾಖೆ ರಾಷ್ಟ್ರೀಯ ಆಯುಷ ಅಭಿಯಾನ ಹಾಗೂ ರೂರಲ್ ಮೆಡಿಕಲ್ ಸೊಸಯಟಿ ಕೆ ಎಚ್ ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆ ಹುಲಕೋಟಿ ಜಿಲ್ಲಾ ನ್ಯಾಯಾಂಗ ವಕೀಲರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆಯುಷ ಆರೋಗ್ಯ ಚಿಕಿತ್ಸಾ ಶಿಬಿರ ಹಾಗೂ ಔಷಧಿಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯುಷ ಇಲಾಖೆ ವಕೀಲರಿಗೆ ಇಂತಹ ಆರೋಗ್ಯ ಚಿಕಿತ್ಸಾ ಶಿಬರ ಏರ್ಪಡಿಸಿದ್ದು ಉತ್ತಮ ಕಾರ್ಯವಾಗಿದೆ. ಮಾನವರು ಯಾವುದೇ ರೀತಿಯ ಸಾಧನೆ ಮಾಡಬೇಕಾದರೆ ಆರೋಗ್ಯ ಅತ್ಯವಶ್ಯಕವಾಗಿದೆ ಎಲ್ಲ ವಕೀಲರು ತಮ್ಮ ದಿನ ನಿತ್ಯದ ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಗಮನಹರಿಸಿ ಉತ್ತಮ ಆರೋಗ್ಯ ಹೊಂದಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆಯೋಷ ಅಧಿಕಾರಿ ಜಯಪಾಲಸಿಂಗ್ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಉಚಿತ ಆಯುಷ್ ಆರೋಗ್ಯಚಿಕಿತ್ಸಾ ಶಿಬಿರ ಹಾಗೂ ಔಷಧಿಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇಂದಿನ ದಿನಮಾನಗಳಲ್ಲಿ ದಿನದಿಂದ ದಿನಕ್ಕೆ ಅನೇಕ ಖಾಯಿಲೆಗಳು ಬರುತ್ತಿದ್ದು ವಕೀಲರು ತಮ್ಮ ಕೆಲಸದ ಒತ್ತಡದ ಜೊತೆಗೆ ಆರೋಗ್ಯ ಬಗ್ಗೆ ಕಾಳಜಿವಹಿಸಬೇಕು, ಕೋವಿಡ್ ಅಂತಹ ಸಂದರ್ಭದಲ್ಲಿ ಆಯುಷ ಇಲಾಖೆಯ ಮಹತ್ವ ಎಲ್ಲರಿಗೂ ತಿಳಿದಿದ್ದು, ಮನುಷ್ಯ ದ್ಯಾನ ಯೋಗಾಸನ ಉತ್ತಮ ಆಹಾರ ಪದ್ದತಿ ಹೊಂದಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಐ ಹಿರೇಮನಿಪಾಟೀಲ ಮಾತನಾಡಿ, ಸಾದಾ ಕೆಲಸದೊತ್ತಡದಲ್ಲಿರುವ ವಕೀಲರು ಆರೋಗ್ಯ ಬಗ್ಗೆ ಕಾಳಜಿವಹಿಸದೆ ರೋಗಗಳಿಗೆ ದಾರಿ ಮಾಡಿಕೊಳ್ಳುತ್ತಾರೆ, ಉತ್ತಮ ಜೀವನ ಪದ್ಧತಿಯನ್ನು ಹೊಂದಿ ಆರೋಗ್ಯವಾಗಿಬೇಕು ಹಾಗು ಶಿಬಿರದಲ್ಲಿ ಉಚಿತವಾಗಿ ಔಷಧಿಗಳನ್ನು ನೀಡಲಾಗುತಿದ್ದು ಅವುಗಳನ್ನು ಪಡೆದು ಶಿಬಿರದ ಸದುಪಯೋಗ ಪಡೆದು ಕೋಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘ ಉಪಾಧ್ಯಕ್ಷ ಎ ಎಂ ಹದ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ ಎಸ್ ಶಿವನಗೌಡ್ರ ಸೇರಿದಂತೆ ಗಣ್ಯರು ಹಾಜರಿದ್ದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ ಎಚ್ ಮಾಡಲಗೇರಿ ಸ್ವಾಗತಿಸಿದರು, ಜಿಲ್ಲಾ ಆಯುಷ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಸಂಜೀವ ನಾರಪ್ಪನವರ ವಂದಿಸಿದರು. ಜಿಲ್ಲಾ ವಕೀಲ ಸಂಘದ ಜಂಟಿ ಕಾರ್ಯದರ್ಶಿ ಪ್ರಕಾಶ ಕಣಗಿನಹಾಳ ನಿರ್ವಹಿಸಿದರು.
TAGGED:*ಗದಗ