More

  ಗದಗ ಆಯುಷ್ಯ ಆರೋಗ್ಯ ಮಂದಿರ ಯೋಗ ದಿನಾಚರಣೆ ಕುರಿತು ಪೂರ್ವಭಾವಿ ಸಭೆ

  ವಿಜಯವಾಣಿ ಸುದ್ದಿಜಾಲ ಗದಗ
  ಜಿಲ್ಲಾಡಳಿತ ಹಾಗೂ ಆಯುಷ್ಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ಅಸುಂಡಿ ಗ್ರಾಮದ ಯೋಗ ಮಂದಿರದಲ್ಲಿ ಬುಧವಾರ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಯೋಗೋತ್ಸವ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆ ಜರುಗಿತು.
  ಜಿಲ್ಲಾ ಆಯುಷ್​ ಅಧಿಕಾರಿ ಡಾ. ಮಲ್ಲಿಕಾರ್ಜುನ ಉಪ್ಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಯೋಗ, ಧ್ಯಾನಗಳನ್ನು ಜನರು ನಿತ್ಯ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
  ಗ್ರಾಮದ ಹಿರಿಯ ಹೆಚ್​. ಕೆ. ಭೂಮಕ್ಕನವರು ಮಾತನಾಡಿ ಹಿಂದಿನ ಆಹಾರ ಪದ್ಧತಿ ಮತ್ತು ಈಗಿನ ಆಹಾರ ಪದ್ಧತಿಗಳ ಬಗ್ಗೆ ತಿಳಿಸಿದರು. ಮಕ್ಕಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಿಂದ ಇರಲು ಯೋಗ ಅತಿ ಅವಶ್ಯ ಎಂದರು.
  ಆಯುಷ್ಯ ವೈದ್ಯಾಧಿಕಾರಿ ಡಾ. ಕಮಲಾಕರ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಯೋಗವು ಬಹು ಮುಖ್ಯ ಪತ್ರ ವಹಿಸುತ್ತದೆ. ನಿತ್ಯ ಜೀವನದಲ್ಲಿ ಮಹಿಳೆಯರು ಯೋಗ ಅಳವಡಿಸಿಕೊಳ್ಳಬೇಕು ಎಂದರು.
  ಆಯುಷ್​ ವೈದ್ಯಾಧಿಕಾರಿ ಡಾ. ಸಂಜೀವ ನಾರಪ್ಪನವರ, ಸೋಮರಡ್ಡಿ ರಾಮೇನಹಳ್ಳಿ, ಕೀರಡ್ಡಿ ಮಾಢಳ್ಳಿ, ಜಯಶ್ರೀ ಅಣ್ಣಿಗೇರಿ, ದ್ರಾಾಯಿಣಿ ವಗ್ಗನವರ, ಎಸ್​. ಎಸ್​. ಅಡ್ನೂರ, ಎಂ.ಡಿ. ಮಾದರ, ಶಿಕ್ಷಕ, ಶಿಕ್ಷಕಿಯರು ಇದ್ದರು.


  See also  ಕ್ರಷರ್​ಗಳ ಸ್ಥಗಿತಕ್ಕೂ ನೋಟಿಸ್ ಸಾಧ್ಯತೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts